ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಗೆಜೆಟ್ ಅಧಿಸೂಚನೆ ಹೊರಡಿಸುವಂತೆ ಕೇಂದ್ರಕ್ಕೆ ಮನವಿ: ಡಿ.ಕೆ.ಶಿವಕುಮಾರ್

ನವದೆಹಲಿ : ಆಲಮಟ್ಟಿ ಅಣೆಕಟ್ಟು ಎತ್ತರದ ಬಗ್ಗೆ ಗೆಜೆಟ್ ಅಧಿಸೂಚನೆ ಹೊರಡಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಕೇಂದ್ರ ಜಲಶಕ್ತಿ ಸಚಿವರು ಕೃಷ್ಣಾ ನದಿ ಜಲಾನಯನ ಪ್ರದೇಶದ ರಾಜ್ಯಗಳ ಪ್ರತಿನಿಧಿಗಳನ್ನು ಕರೆಸಿ ಅಣೆಕಟ್ಟು ಎತ್ತರ ಹೆಚ್ಚಳದ ಬಗ್ಗೆ ಮುಂದಿನ 15 ದಿನಗಳಲ್ಲಿ ಸಭೆ ನಡೆಸಿ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಇದನ್ನು ಓದಿ :-ಮಂಗಳೂರಿನ ಕುಖ್ಯಾತ ದರೋಡೆಕೋರರ ಮೇಲೆ ಪೊಲೀಸ್ ಫೈರಿಂಗ್

ನವದೆಹಲಿಯ ಕರ್ನಾಟಕ ಭವನ-1 “ಕಾವೇರಿ”ಯಲ್ಲಿ ಜಲಸಂಪನ್ಮೂಲ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗೋಷ್ಠಿ ಉದ್ದೇಶಿಸಿ ಶುಕ್ರವಾರ ಮಾತನಾಡಿದರು.

ಕೇಂದ್ರ ಜಲಶಕ್ತಿ ಸಚಿವರಾದ ಸಿ‌.ಆರ್.ಪಾಟೀಲ್ ಅವರನ್ನು ರಾಜ್ಯಖಾತೆ ಸಚಿವರಾದ ಸೋಮಣ್ಣ ಅವರ ಜೊತೆ ಭೇಟಿ ಮಾಡಲಾಗಿತ್ತು. ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಮತ್ತು ನಮಗೆ ಎಷ್ಟು ನೀರು ಸಿಗಬೇಕು ಹಾಗೂ ಅಣೆಕಟ್ಟು ಎಷ್ಟು ಎತ್ತರ ಮಾಡಬೇಕು ಎಂದು ಹಿಂದೆಯೇ ತೀರ್ಮಾನವಾಗಿದೆ. 524 ಅಡಿ ಎತ್ತರಕ್ಕೆ ಎಷ್ಟು ಭೂಮಿ ಬೇಕಾಬಹುದು ಎಂದು ಅಂದಾಜಿಸಿ ಭೂಸ್ವಾಧೀನಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಈ ಕೆಲಸವನ್ನು ಬೇಗ ಮುಗಿಸುವ ಬದ್ಧತೆ ನಮ್ಮ ಸರ್ಕಾರಕ್ಕಿದೆ. ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸುವ ಬಗ್ಗೆಯೂ ಮನವಿ ಮಾಡಿದ್ದೇವೆ ಎಂದರು.

ಇದನ್ನು ಓದಿ :-2025-26 ನೇ ಸಾಲಿನ ‘ಕರ್ನಾಟಕ ಶಾಲಾ ಶೈಕ್ಷಣಿಕ ವೇಳಾಪಟ್ಟಿ’ ಪ್ರಕಟ

ಭದ್ರಾ ಮೇಲ್ದಂಡೆ ವಿಚಾರವಾಗಿ ಕೇಂದ್ರ ಸರ್ಕಾರ‌‌ ಕೆಲಸ ಮಾಡುತ್ತಿದೆ. ಕೇಂದ್ರದ ಕ್ಯಾಬಿನೆಟ್ ಮುಂದೆ ಈ ವಿಚಾರ ತೆಗೆದುಕೊಡು ಹೋಗಲಾಗಿದೆ ಎಂದು ಹೇಳಿದ್ದಾರೆ. ಮೇಕೆದಾಟು ವಿಚಾರದಲ್ಲಿ 15 ದಿನಗಳಲ್ಲಿ ಸುಪ್ರೀಂ ‌ಕೋರ್ಟ್ ಕರ್ನಾಟಕದ‌ ವಾದ ಆಲಿಸುವುದಾಗಿ ಹೇಳಿತ್ತು. ಆದರೆ ದಿನಾಂಕ ನಿಗದಿ ಮಾಡಿಲ್ಲ. ತಮಿಳುನಾಡಿನವರು ರಾಜಕೀಯವಾಗಿ ಸಹಕಾರ ನೀಡುವುದಿಲ್ಲ‌‌ ಎನ್ನುವುದು ನಮಗೆ ಅರಿವಿದೆ. ಅವರು ಸಣ್ಣಪುಟ್ಟ ಅಣೆಕಟ್ಟುಗಳನ್ನು ಅವರ ವಲಯದಲ್ಲಿ ಕಟ್ಟಿಕೊಳ್ಳುತ್ತಿದ್ದಾರೆ. ಇದರ ಬಗ್ಗೆ ನಾವು ತೊಂದರೆ ಕೊಡಲು ಹೋಗುವುದಿಲ್ಲ. ಈ ವಿಚಾರವನ್ನೂ ಸಚಿವರ ಗಮನಕ್ಕೆ ತರಲಾಗಿದೆ ಎಂದರು.

 

Donate Janashakthi Media

Leave a Reply

Your email address will not be published. Required fields are marked *