ಕೋಟೆಪುರ ಫಿಶ್ಮೀಲ್ ಕಂಪೆನಿಯಲ್ಲಿ ಹಾನಿಕಾರಕ ಕಲ್ಲಿದ್ದಲು ಬಳಸದಂತೆ ಡಿವೈಎಫ್ಐಯಿಂದ ಜಿಲ್ಲಾಧಿಕಾರಿಗೆ ಮನವಿ

ಉಳ್ಳಾಲ: ಕೋಟೆಪುರ ಸಮುದ್ರ ದಂಡೆಯಲ್ಲಿ ಮೀನು ಸಂಸ್ಕರಣಾ ಘಟಕಗಳಾದ ಯುನೈಟೆಡ್ ಮರೈನ್ ಮತ್ತು ಇಂಡೋ ಫಿಶ್ಮೀಲ್ ಕಂಪೆನಿಗಳು ಜನರ ಆರೋಗ್ಯಕ್ಕೆ ಹಾನಿಕಾರಕವಾದ ಕಲ್ಲಿದ್ದಲನ್ನು ಇಂಧನವಾಗಿ ಬಳಸಿ ಮೀನು ಸಂಸ್ಕರಣೆ ಮಾಡುತ್ತಿದೆ. ಜನವಸತಿ ಪ್ರದೇಶದಲ್ಲಿ ಕಲ್ಲಿದ್ದಲನ್ನು ಇಂಧನವಾಗಿ ಬಳಸುವುದರಿಂದ ಜನರಿಗೆ ಅನೇಕ ಆರೋಗ್ಯದ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಡಿವೈಎಫ್ಐ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಫಿಶ್ಮೀಲ್

ಅವುಗಳೆಂದರೆ COPD,ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳು, ಶ್ವಾಸಕೋಶದ ತೊಂದರೆ,ಎದೆನೋವು,ಕೆಮ್ಮು ಮತ್ತು ಉಸಿರಾಟದ ತೊಂದರೆಗಳನ್ನುಂಟು ಮಾಡಬಹುದು.ಅಲ್ಲದೆ ಕಲ್ಲಿದ್ದಲಿನ ಬಳಕೆಯಿಂದ ಅಂತರ್ಜಲವು ಕಲುಷಿತಗೊಂಡು ಆರೋಗ್ಯಕ್ಕೆ ಅಪಾಯಗಳನ್ನು ಉಂಟುಮಾಡುವ ಸಾಧ್ಯತೆ ಇದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ದೃಢಪಡಿಸಿದೆ. ಫಿಶ್ಮೀಲ್

ಸಿಆರ್ಝೆಡ್ ಕಾನೂನುಗಳನ್ನು ಉಲ್ಲಂಘಿಸಿ ನಿರ್ಮಿಸಲಾಗಿರುವ ಕಟ್ಟಡಗಳಿಂದಾಗಿ ನದಿಯೇ ಮುಚ್ಚಿಹೋಗಿ ಕೋಟೆಪುರ ಮತ್ತು ಮುಳಿಹಿತ್ಲು ನಡುವೆ ದೋಣಿ ಸಂಪರ್ಕ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಉಳ್ಳಾಲ ಕೋಟೆಪುರದಲ್ಲಿ ಕಾರ್ಯಾಚರಿಸುತ್ತಿರುವ ಘಟಕಗಳು ಮೀನು ಸಂಸ್ಕರಣೆ ಮಾಡುವ ಸಂದರ್ಭದಲ್ಲಿ ಕೆಟ್ಟ ವಾಸನೆ ಹೊರ ಸೂಸುತ್ತಿದ್ದು ಇದರಿಂದ ಸ್ಥಳೀಯ ಜನರು ತೀವ್ರ ರೀತಿಯ ತೊಂದರೆಯನ್ನು ಅನುಭವಿಸುತ್ತಿದ್ದಾರೆ.

ಇದನ್ನೂ ಓದಿ: ತುಮಕೂರು| ಸೋಲಾರ್ ಪಾರ್ಕ್ ನಿರ್ಮಾಣದ ವೇಳೆ ಸಿಡಿದ ಸ್ಪೋಟಕ; ಓರ್ವ ಕಾರ್ಮಿಕ ಸಾವು

ಮೀನು ಸಂಸ್ಕರಣೆಯಿಂದ ಹೊರ ಬರುವ ಕೊಳೆತ ನೀರನ್ನು ಸಮುದ್ರಕ್ಕೆ ಬಿಡಲಾಗುತ್ತಿದೆ ಇದರಿಂದ ಜಲಚರ ಜೀವಿಗಳು ನಾಶವಾಗುತ್ತಿವೆ.ಮೀನು ಸಂಸ್ಕರಣೆಯ ಸಂದರ್ಭದಲ್ಲಿ ನಿಯಮ ಮೀರಿದ ಶಬ್ದಗಳು ಹೊರ ಬರುತ್ತಿದ್ದು ಶಬ್ದ ಮಾಲಿನ್ಯವೂ ಉಂಟಾಗುತ್ತಿದೆ. ಒಟ್ಟಾರೆಯಾಗಿ ಈ ಮೀನು ಸಂಸ್ಕರಣಾ ಘಟಕಗಳು ಪರಿಸರಕ್ಕೆ ಮಾರಕವಾಗಿದೆ.

ಈ ಬಗ್ಗೆ ಡಿವೈಎಫ್ಐ ಕಳೆದೆರಡು ವರ್ಷಗಳಲ್ಲಿ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿ ಹೋರಾಟಗಳನ್ನು ಹಮ್ಮಿಕೊಂಡಿದ್ದು, ಆದರೆ ಯಾವುದೇ ಇಲಾಖೆ ಸೂಕ್ತ ಕ್ರಮವನ್ನು ಕೈಗೊಂಡಿಲ್ಲ. ಜನರ ಪ್ರಾಣಕ್ಕೆ ಹಾನಿಯುಂಟು ಮಾಡುವ ಇಂತಹ ಘಟಕಗಳ ವಿರುದ್ದ ಶೀಘ್ರವೇ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು. ಹಾನಿಕಾರಕ ಕಲ್ಲಿದ್ದಲನ್ನು ಇಂಧನವಾಗಿ ಬಳಸುವುದನ್ನು ಕೂಡಲೇ ನಿಲ್ಲಿಸಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ರೀತಿಯ ಹೋರಾಟವನ್ನು ಡಿವೈಎಫ್ಐ ಹಮ್ಮಿಕೊಳ್ಳಲಿದೆ ಎಂದು ಎಚ್ಚರಿಸಲಾಯಿತು.

ನಿಯೋಗದಲ್ಲಿ ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿಕೆ ಇಮ್ತಿಯಾಝ್ ಕಾರ್ಯದರ್ಶಿ ಸಂತೋಷ್ ಬಜಾಲ್,ಕೋಡಿ-ಕೋಟೆಪುರ ಘಟಕ ಅಧ್ಯಕ್ಷ ವಾಕರ್ ಕೋಟೆಪುರ, ಕಾರ್ಯದರ್ಶಿ ನೌಫಲ್ ಕೋಟೆಪುರ ಮುಖಂಡರಾದ ಮುಝಮ್ಮಿಲ್ ಕೋಟೆಪುರ ಉಪಸ್ಥಿತರಿದ್ದರು.

ಇದನ್ನೂ ನೋಡಿ: ಗಣತಂತ್ರ ದಿನ : ವೆಂಟ್ರಿಲೋಕ್ವಿಸ್ಟ್ ಜಾನು ಆವಂತಿಕಾ ಮಾತುಕತೆ Janashakthi Media

Donate Janashakthi Media

Leave a Reply

Your email address will not be published. Required fields are marked *