ನವದೆಹಲಿ: ಸರ್ವೋಚ್ಚ ನ್ಯಾಯಾಲಯವು ಬಂಗಾಳದಲ್ಲಿ ನಡೆದ 25 ಸಾವಿರ ಶಿಕ್ಷಕರು ಮತ್ತು ಸಿಬ್ಬಂದಿಗಳ ನೇಮಕಾತಿಗೆ ಸಂಬಂಧಿಸಿದ ಹಗರಣದ ಪ್ರಕರಣದಲ್ಲಿ, ಅಭ್ಯರ್ಥಿಗಳ ಆಯ್ಕೆಯಲ್ಲಿ ಹಲವು ದೋಷಗಳಿವೆ ಎಂದು ಹೇಳಿದೆ. ಬಂಗಾಳ
ನೇಮಕಾತಿಯಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ರಾಜ್ಯ ಸರಕಾರಕ್ಕೆ ಗೊತ್ತಿದ್ದರೂ ಹೆಚ್ಚುವರಿ ಹುದ್ದೆಗಳಲ್ಲಿ ಶಿಕ್ಷಕರನ್ನು ನೇಮಿಸಿದ್ದು ಏಕೆ ? ಈ ಹಗರಣ ಬೆಳಕಿಗೆ ಬಂದ ನಂತರ, ಕೋಲ್ಕತ್ತ ಉಚ್ಚನ್ಯಾಯಾಲಯವು ಶಿಕ್ಷಕರು ಮತ್ತು ಸಿಬ್ಬಂದಿಯ ನೇಮಕಾತಿಗಳನ್ನು ರದ್ದುಗೊಳಿಸುವಂತೆ ಆದೇಶಿಸಿತ್ತು. ಈ ಆದೇಶಕ್ಕೆ ಸರ್ವೋಚ್ಚ ನ್ಯಾಯಾಲಯವು ತಡೆಯಾಜ್ಞೆ ನೀಡಿತ್ತು.
ಇದನ್ನೂ ಓದಿ: ಭೂಮಿಯ ಹಕ್ಕಿಗಾಗಿ ನೋಯ್ಡಾ ರೈತರ ಸಮರಶೀಲ ಹೋರಾಟ
ಈ ಪ್ರಕರಣದ ವಿಚಾರಣೆ ನಡೆಸುವಾಗ ಮುಖ್ಯ ನ್ಯಾಯಮೂರ್ತಿ ಸಂಜೀವ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ ಕುಮಾರ ರ ವಿಭಾಗೀಯ ಪೀಠವು, ಕಳಂಕಿತ ಅಭ್ಯರ್ಥಿಗಳನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ, ಆದ್ದರಿಂದ, ಈ ಆಧಾರದ ಮೇಲೆ ನೇಮಕಾತಿಯನ್ನು ಉಚ್ಚನ್ಯಾಯಾಲಯ ರದ್ದುಗೊಳಿಸಿದೆ ಎಂದು ಹೇಳಿದೆ.
ಹೆಚ್ಚುವರಿ ಹುದ್ದೆಗಳನ್ನು ರಚಿಸುವ ಉದ್ದೇಶವೇನು? ಅಕ್ರಮಗಳು ಬಯಲಾದ ನಂತರವೂ ಕಳಂಕಿತ ಅಭ್ಯರ್ಥಿಗಳನ್ನು ಏಕೆ ತೆಗೆದುಹಾಕಲಾಗಿಲ್ಲ ? ಬೇಳೆಕಾಳಿನಲ್ಲಿ ಕಪ್ಪು ಇದೆಯೇ ಅಥವಾ ಎಲ್ಲಾ ಬೇಳೆ ಕಪ್ಪಾಗಿದೆಯೇ ? ಕಳಂಕಿತ ಅಭ್ಯರ್ಥಿಗಳನ್ನು ವಿವಿಧ ವರ್ಗಗಳಲ್ಲಿ ವಿಂಗಡಿಸಬಹುದು ಎಂದು ಹೇಳಿದೆ.
ಇದನ್ನೂ ನೋಡಿ: ಎನ್ನ ಕಣ್ಣೊಳಗಣ ಕಟ್ಟಿಗೆಯ ಮುರಿವವರನಾರನೂ ಕಾಣೆ. ಎನ್ನ ಕಾಲೊಳಗಣ ಮುಳ್ಳ ತೆಗೆವವರನಾರನೂ ಕಾಣೆ. ಎನ್ನ ಅಂಗದಲ್ಲಿದ್ದ