ಬೆಂಗಳೂರು: ರಾಜ್ಯ ಸರ್ಕಾರ ಜಾತಿಗಣತಿ ಕುರಿತು ನಾಳೆ ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ವರದಿ ಮಂಡಿಸಲು ತೀರ್ಮಾನಿಸಲಾಗಿದೆ. ಆದರೆ ಕ್ಯಾಬಿನೆಟ್ ಸಭೆಗೂ ಮುನ್ನವೇ ಜಾತಿ ಗಣತಿ ವರದಿಯ ಮಾಹಿತಿ ಲೀಕ್ ಆಗಿದೆ. ಜಾತಿಗಣತಿ
ವರದಿ ಜಾರಿಗೂ ಮೊದಲೇ ಮಾಹಿತಿ ಸೋರಿಕೆಯಾದ ಆತಂಕ ಸೃಷ್ಟಿಸಿದೆ. ಹಾಗಾದ್ರೆ ಲೀಕ್ ಆಗಿರುವ ಜಾತಿ ಗಣತಿ ವರದಿಯಲ್ಲಿರುವ ಮಾಹಿತಿಗಳು ಏನೇನು ಎಂಬ ಮಾಹಿತಿ ಇಲ್ಲಿದೆ.
ಇದನ್ನೂ ಓದಿ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತೆರಳುತ್ತಿದ್ದ ಕಾರು ಅಪಘಾತ : ಬೆನ್ನಿನ ಎರಡು ಮೂಳೆ ಮುರಿತ, ಕುತ್ತಿಗೆಗೆ ಪೆಟ್ಟು
ಜಾತಿ ಗಣತಿ ವರದಿ ಲೀಕ್ ಆಗಿದ್ದು ಯಾವ ಜಾತಿಯವರು ಹೆಚ್ಚಾಗಿದ್ದಾರೆ, ಯಾವ ಜಾತಿಯ ಜನಸಂಖ್ಯೆ ಎಷ್ಟು ಎಂಬುದನ್ನು ನೋಡೂವುದಾದರೆ ಪರಿಶಿಷ್ಟ ಜಾತಿ ನಂ 1. ಸ್ಥಾನದಲ್ಲಿ ಇದೆ. ನಂತರದಲ್ಲಿ ಅಲ್ಪಸಂಖ್ಯಾತರಾದ ಮುಸ್ಲಿಮರು 2ನೇ ಸ್ಥಾನದಲ್ಲಿದ್ದಾರೆ. ಲಿಂಗಾಯತ ಸಮುದಾಯ 3ನೇ ಸ್ಥಾನ ತಲುಪಿದೆ. 4ನೇ ಸ್ಥಾನದಲ್ಲಿ ಒಕ್ಕಲಿಗ ಸಮುದಾಯ ಇದೆ ಎಂಬ ಮಾಹಿತಿ ಹೊರಬಿದ್ದಿದೆ.
2015ರಲ್ಲಿ ನಡೆದಿರುವ ಜಾತಿ ಗಣತಿ ವರದಿಯ ಮುಖ್ಯಾಂಶಗಳು ಅಧಿಕೃತ ವರದಿ ಬಿಡುಗಡೆಗೆ ಮುನ್ನವೇ ರಹಸ್ಯ ಮಾಹಿತಿ ಸೋರಿಕೆಯಾಗಿದೆ. ಜಾತಿ ಗಣತಿ ವಿರುದ್ಧ ಲಿಂಗಾಯತರು ಮತ್ತು ಒಕ್ಕಲಿಗರು ಧ್ವನಿ ಎತ್ತಿದ್ದಾರೆ. ವರದಿ ಅವೈಜ್ಞಾನಿಕವಾಗಿದೆ ಎಂದು ಲಿಂಗಾಯತ, ಒಕ್ಕಲಿಗ ಸಮುದಾಯ ಆಕ್ರೋಶ ಹೊರಹಾಕುತ್ತಿದೆ. ಇತ್ತೀಚೆಗಷ್ಟೇ ಜಾತಿ ಗಣತಿ ವರದಿ ಮಂಡಿಸಿಯೇ ಸಿದ್ಧ ಎಂದು ಘೋಷಿಸಿದ್ದರು ರಾಜ್ಯ ಸರ್ಕಾರ ಘೋಷಿಸಿತ್ತು. ಈಗ ಮತ್ತೊಮ್ಮೆ ಜಾತಿ ಗಣತಿ ವರದಿ ಸೋರಿಕೆ ಯಾಗಿರುವುದು ರಾಜಕೀಯದಲ್ಲಿ ಸಂಚಲನ ಮೂಡಿಸುತ್ತಿದೆ. ವರದಿ ಜಾರಿಯಾದ ನಂತರ ರಾಜ್ಯ ಕಾಂಗ್ರೆಸ್‌ನಲ್ಲಿಯೇ ಬಿರುಕು ಮೂಡುವ ಸಾಧ್ಯತೆ ಇದೆ.
ಇದನ್ನೂ ನೋಡಿ : ಹಾಸನ | ಅಂಬೇಡ್ಕರ್‌ಗೆ ಅವಮಾನ : ಅಮಿತ್ ಶಾ ವಿರುದ್ಧ ರಸ್ತೆ ತಡೆ – ಬಂಧನ ಬಿಡುಗಡೆJanashakthi Media