ಗ್ರಾಮಪಂಚಾಯಿತಿಯಲ್ಲಿ ಗೆಲ್ಲಿಸಲು ಶಕ್ತಿ ಇಲ್ಲದವರು ಬಿಜೆಪಿ ನಿಯಂತ್ರಿಸ್ತಿದ್ದಾರೆ? ರೇಣುಕಾಚಾರ್ಯ ಆರೋಪ

ಶಿವಮೊಗ್ಗ: 2005-06 ರಲ್ಲಿ ಬಿಜೆಪಿ ಕಛೇರಿಗೆ ಬಂದು ಬಿಜೆಪಿಯನ್ನು ನಿಯಂತ್ರಿಸುತ್ತಿದ್ದಾರೆ. ಪಕ್ಷಕ್ಕೆ ನಿಮ್ಮ ಕೊಡುಗೆ ಏನು…? ನೀವೇನು ಪಕ್ಷ ಕಟ್ಟಿ ಬೆಳೆಸಿದ್ದೀರಾ‌.? ಹೋರಾಟ, ಪಾದಯಾತ್ರೆ ಮಾಡಿದ್ರಾ ? ಹೋರಾಟ ಮಾಡಿ ಜೈಲಿಗೆ ಎಷ್ಟು ಬಾರಿ ಹೋಗಿದ್ರೀ? ನಿಮ್ಮಿಂದ ಒಂದು ಗ್ರಾಮ‌ ಪಂಚಾಯತಿಯನ್ನು ಗೆಲ್ಲಿಸಲು ಸಾಧ್ಯವಿಲ್ಲ ಎಂದು ಬಿಎಲ್‌ ಸಂತೋಷ್​ ವಿರುದ್ಧ ಮಾಜಿ ಸಚಿವ ಎಂ‌.ಪಿ.ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.

ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಸ್ವಪಕ್ಷದ ವಿರುದ್ಧವೇ ಕಿಡಿಕಾರಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ನಾಯಕ ಯಡಿಯೂರಪ್ಪನವರನ್ನು ಕತ್ತಲೆಯಲ್ಲಿಟ್ಟು ಮೈತ್ರಿ ಮಾಡಿದ್ದಾರೆ. ಯಡಿಯೂರಪ್ಪ ಅವರನ್ನು ಮುಗಿಸಲು ಹೊರಟಿದ್ದೀರಾ..? 2005-06 ರಲ್ಲಿ ಬಿಜೆಪಿ ಕಛೇರಿಗೆ ಬಂದು ಬಿಜೆಪಿಯನ್ನು ನಿಯಂತ್ರಿಸುತ್ತಿರಾ? ಎಂದು  ಬಿಎಲ್ ಸಂತೋಷ್​ ವಿರುದ್ಧ ಕಿಡಿ ಕಾಡಿದರು.

ಮೈತ್ರಿ ಮಾಡಿಕೊಳ್ಳಲು ಪಕ್ಷದ ಕಾರ್ಯಕರ್ತರ ನಡುವೆ ಸಾಮರಸ್ಯ ಇರಬೇಕು. ಆದರೆ ಕೆಲವು ಕಡೆ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಸಂಘರ್ಷವಿದೆ. ಹಲವು ವರ್ಷಗಳಿಂದ ನಮ್ಮ ಕಾರ್ಯಕರ್ತರು ಬಿಜೆಪಿ ಮತ್ತು ಜೆಡಿಎಸ್​ ಕಾರ್ಯಕರ್ತರನ್ನ  ವಿರೋಧಿಸಿಕೊಂಡು ಬಂದಿದ್ದಾರೆ. ಆದರೆ ಈಗ ನಾಯಕರು ಮೈತ್ರಿ ಮಾಡಿಕೊಂಡಿದ್ದೇವೆ ಎನ್ನುತ್ತಿದ್ದಾರೆ. ಒಂದು ಕಾಲದಲ್ಲಿ ನಾವೇ ಜೆಡಿಎಸ್​ನವರನ್ನ ವಚನ ಭ್ರಷ್ಟರು ಎಂದು ಇಂದು ಮತ್ತೆ ಅವರ ಜೊತೆ ಕೈ ಜೋಡಿಸುತ್ತಿರುವುದರನ್ನ ಜನ ಪ್ರಶ್ನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ‘ನಕಲಿ ದಾಖಲೆ ಸೃಷ್ಟಿಸು’ ಕಂದಾಯ ನೌಕರನ ಮೇಲೆ ಶಾಸಕ ಎಂ.ಪಿ ರೇಣುಕಾಚಾರ್ಯ ಒತ್ತಡ

ಗುಜರಾತ್ ಮಾಡೆಲ್ ಬಗ್ಗೆ ಕಿಡಿ : ಗುಜರಾತ್ ಮಾದರಿ ಮಾಡಲು ಹೋಗಿ 70 ಜನ ಹೊಸಬರಿಗೆ ಟಿಕೆಟ್ ನೀಡಿದರು. ಜಗದೀಶ್ ಶೆಟ್ಟರ್ ಅಂತಹವರನ್ನು ಕಡೆಗೆಣಿಸಿದರು. ಯಡಿಯೂರಪ್ಪನವರು ಎಲ್ಲ ಸಮುದಾಯದವರಿಗೆ ಮೀಸಲಾತಿ ಕೊಡಲು ಹೋಗಿದ್ದರು. ಆದರೆ, ಅದಕ್ಕೂ ತಡೆ ಹಾಕಿದರು. ಇನ್ನೇನೋ ಪಂಚರಾಜ್ಯ ಚುನಾವಣೆ ನಡೆಯಲಿದೆ, ನಂತರ ಲೋಕಸಭೆ ಚುನಾವಣೆ ನಡೆಯುತ್ತೆ,. ಅಷ್ಟರಲ್ಲಿ ರಾಜ್ಯಕ್ಕೆ ವರ್ಚಸ್ಸು ಇರುವ ನಾಯಕನ ಅಗತ್ಯವಿದೆ. ಆದರೆ ಇನ್ನೂ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕ ಇಲ್ಲದಿರುವುದು ದುರಂತ ಎಂದು ರೇಣುಕಾಚಾರ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯಡಿಯೂರಪ್ಪರನ್ನು ಬಿಟ್ಟು ಬಿಜೆಪಿ ನಿಯಂತ್ರಣ ಮಾಡಿದರೆ ಆಗುತ್ತಾ? ಕೋರ್ ಕಮಿಟಿ ಯಾಕೆ ಬೇಕು? ನಿಮ್ಮ ನಿಯಂತ್ರಣದಲ್ಲಿ ಬಿಜೆಪಿ ಬೇಕಾ? ರಾಜ್ಯ ಬಿಜೆಪಿ ವಿಸರ್ಜನೆ ಮಾಡಿ ಬಿಡಿ. ಯಡಿಯೂರಪ್ಪರನ್ನು ಮುಗಿಸಿದ್ದೀರಲ್ಲ, ಈಗ ನಾಯಕತ್ವ ಎಲ್ಲಿದೆ ಎಂದು ಪ್ರಶ್ನಿಸಿದ ರೇಣುಕಾಚಾರ್ಯ, ಆತ್ಮಾವಲೋಕನ ಮಾಡಿಕೊಳ್ಳಿ. ಸರ್ವಾಧಿಕಾರಿ ಧೋರಣೆ ಮಾಡಬೇಡಿ ಎಂದು ಹರಿಹಾಯ್ದರು.

ಇದನ್ನೂ ಓದಿ‌ನಮಗೆ ಸೆಂಗೋಲ್ ಬೇಡ ನೇಗಿಲು ಬೇಕು – ಮಾವಳ್ಳಿ ಶಂಕರ್

 

Donate Janashakthi Media

Leave a Reply

Your email address will not be published. Required fields are marked *