ಪ್ರೀತಿಯ ಫೆಡಲ್‌: 100 ರ ನೆನಪು; ಒಂದು ಪ್ರೀತಿಯ ಸಮಾರಂಭ

ಬೆಂಗಳೂರು: ನಗರದ ಸೌಹಾರ್ದದಲ್ಲಿ (ವಿಮಾ ನೌಕರರ ಸಂಘಟನೆಯ ಕಛೇರಿ) ಆಗಸ್ಟ್‌ 12 ಮಧ್ಯಾನ್ಹ 3:30ರಿಂದ ಫೆಡಲ್‌ ಕ್ಯಾಸ್ಟ್ರೋ ರ ನೆನಪಿನಲ್ಲಿ ಶತಮಾನೋತ್ಸವ ವರ್ಷಾಚರಣೆಯನ್ನು ರಾಜ್ಯ ಕ್ಯೂಬಾ ಸೌಹಾರ್ದ ಸಮೀತಿ ಆಚರಿಸಲಿದೆ. ನೆನಪು

ಕಾರ್ಯಕ್ರಮದಲ್ಲಿ ನಟ – ನಿರ್ದೇಶಕರಾದ ಬಿ ಸುರೇಶ, ಮಹಿಳಾ ಪರ ಚಿಂತಕರಾದ ಕೆ ಎಸ್‌ ವಿಮಲಾ, ಸಿಪಿಐಎಂ ರಾಜ್ಯ ಕಾರ್ಯದರ್ಶಿ ಡಾ. ಪ್ರಕಾಶ್‌ ಕೆ ಭಾಗವಹಿಸಲಿದ್ದಾರೆ. ನೆನಪು

ಸಮಾರಂಭದಲ್ಲಿ ಫಿಡೆಲ್ ಕ್ಯಾಸ್ಟೋ ರೇಖಾಚಿತ್ರ ಬರೆಯುವ ಮೂಲಕ ಬಿ. ಜಿ. ಗುಜ್ಜಾರಪ್ಪ ಉದ್ಘಾಟನೆ ಮಾಡಲಿದ್ದಾರೆ. ಡಾ. ಪ್ರಕಾಶ್ ಕೆ. ಅನುವಾದಿಸಿರುವ
‘ಕ್ಯಾಸ್ಟೋ ಕತೆ’,  ಜಿ ಎನ್ ಮೋಹನ್ ಅವರ ‘ನನ್ನೊಳಗಿನ ಹಾಡು ಕ್ಯೂಬಾ’ದ ತಮಿಳು ಹಾಗೂ ತೆಲುಗು ಅನುವಾದಗಳ ಬಿಡುಗಡೆ ಮತ್ತು  ಫಿಡೆಲ್ ಕ್ಯಾಸ್ಟೋ ಕುರಿತ ಶುಭಾಶಯ ಪತ್ರಗಳ ಬಿಡುಗಡೆ ನಡೆಯಲಿದೆ. ನೆನಪು

ಇದನ್ನೂ ಓದಿ: ಲೋಕಸಭಾ ಚುನಾವಣೆ: ರಾಹುಲ್ ಗಾಂಧಿಯ ಪುರಾವೆ ಚಿತ್ರಣವನ್ನೇ ಬದಲಿಸಿದೆ – ಯೋಗೇಂದ್ರ ಯಾದವ್

Institute of Spanish Studies Centre ವಿದ್ಯಾರ್ಥಿಗಳು ‘ಸ್ವಂತನ ಮೇರಾ’ ಹಾಡಲಲಿದ್ದೂ, ಫೆಡಲ್‌ ಕುರಿತಾದ ಹಾಡುಗಳನ್ನು ಕೆ.ಎಸ್.ಲಕ್ಷ್ಮಿ ಹಾಡಲಿದ್ದಾರೆ ಹಾಗೂ ಕಾರ್ಯಕ್ರಮವನ್ನು ವಿಜಯಕುಮಾರ್ ಟಿ.ಎಸ್. ನಿರ್ವಹಣೆ ಮಾಡಲಿದ್ದಾರೆ. ನೆನಪು

ಕ್ಯೂಬಾಗೆ ಭೇಟಿ ನೀಡಿರುವ ವಿವಿಧ ಕ್ಷೇತ್ರಗಳ ಗಣ್ಯರೊಂದಿಗೆ ಸಂವಾದ ನಡೆಯಲಿದ್ದೂ, ಈ ಸಂವಾದವನ್ನು ಪತ್ರಕರ್ತ ಜಿ ಎನ್ ಮೋಹನ್ ನಡೆಸಿಕೊಡಲಿದ್ದಾರೆ. ಇದರಲ್ಲಿ ಕವಿಗಳಾದ ಮಮತಾ ಸಾಗರ್, ವೈದ್ಯರಾದ ಡಾ ಅನಿಲ್ ಕುಮಾರ್, ಸಂಪಾದಕರಾದ ಸಿದ್ದನಗೌಡ ಪಾಟೀಲ್‌ ಹಾಗೂ ಮಾಹಿತಿ ತಂತ್ರಜ್ಞಾನಿಯಾದ ರಂಜಿತ್ ಭಾಗವಹಿಸಲಿದ್ದಾರೆ.

ಡಾ. ವಸುಂಧರಾ ಭೂಪತಿ, ಎಚ್ ಆರ್ ಸುಜಾತಾ, ಕೆ ಮಹಾಂತೇಶ್ ಹಾಗೂ ಬೇಲೂರು ರಘುನಂದನ್ ರವರು ಫೆಡಲ್‌ ಕುರಿತಾದ ಕವಿತೆಗಳನ್ನು ವಾಚನ ಮಾಡಲಿದ್ದಾರೆ.

ಇದನ್ನೂ ನೋಡಿ: ವಚನಾನುಭವ – 31 | ಅಂಬಿಗರ ಚೌಡಯ್ಯನ ವಚನ – ಕುಲಹೀನ ಶಿಷ್ಯಂಗೆ ಅನುಗ್ರಹವ ಮಾಡಿ Janashakthi Media

Donate Janashakthi Media

Leave a Reply

Your email address will not be published. Required fields are marked *