ಕಲಬುರಗಿ: ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದವರನ್ನು, ಅವರ ಉತ್ತಮ ಕೆಲಸ ಮತ್ತು ಜೈಲಿನಲ್ಲಿ ಉತ್ತಮ ನಡವಳಿಕೆ ಪರಿಗಣಿಸಿ 6 ಜನ ಶಿಕ್ಷಾ ಬಂಧಿಗಳನ್ನು ಬಿಡುಗಡೆ ಮಾಡಲಾಗಿದೆ.
ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ 14 ವರ್ಷ ಶಿಕ್ಷೆ ಅನುಭವಿಸಿದ 6 ಜನ ಶಿಕ್ಷಾ ಬಂಧಿಗಳನ್ನು ಅವರ ಉತ್ತಮ ಕೆಲಸ ಮತ್ತು ಜೈಲಿನಲ್ಲಿ ಉತ್ತಮ ನಡವಳಿಕೆ ಪರಿಗಣಿಸಿ ಜೈಲಿನ ಸ್ಥಾಯಿ ಸಲಹಾ ಮಂಡಳಿ, ಕಾರಾಗೃಹ ಡಿಐಜಿಪಿ, ಹಾಗೂ ಸರ್ಕಾರದ ಶಿಫಾರಸ್ಸಿನಂತೆ ನ. 28ರಂದು ಬಿಡುಗಡೆಗೊಳಿಸಲಾಯಿತು.
ಇದನ್ನೂ ಓದಿ : ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಯ ನಂತರ ಬಾಣಂತಿಯರ ಸಾವು ಮತ್ತು VIMMS ನಲ್ಲಿ ಮತ್ತೊಂದು ಗರ್ಭಿಣಿಯ ಸಾವು ಬಗ್ಗೆ ತನಿಖೆ ನಡೆಸಲು ಅಗ್ರಹ
ಬಿಡುಗಡೆಯಾದವರಲ್ಲಿ ಐವರು ಪುರುಷರು, ಒಬ್ಬ ಮಹಿಳೆ ಇದ್ದಾರೆ. ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಕಾರಾಗ್ರಹದ ಮುಖ್ಯ ಅಧೀಕ್ಷಕಿ ಅನಿತಾ ಆರ್. ಬಂಧಿಗಳಿಗೆ ಬಿಡುಗಡೆ ಪ್ರಮಾಣ ಪತ್ರ ನೀಡಿ ಮುಂದಿನ ಜೀವನ ಸುಗಮವಾಗಿ ನಡೆಸಲು ಸಲಹೆ ನೀಡಿ ಶುಭ ಹಾರೈಸಿದರು.
ಸಾಬಣ್ಣ ಮರಣ ಬನಾರ, ಖಾಜಾಸಾಬ ಲಾಲಸಾಬ್, ಶಿವಶಂಕರ ಅಲಿಯಾಸ್ ಶಿವಪ್ಪ, ರವಿ ಬಾಲಪ್ಪ, ಜೈಭಾರತ ಬೀರಪ್ಪ, ಅಬೀದಾ ಬೇಗಂ ಬಿಡುಗಡೆಯಾಗಿದ್ದಾರೆ.
ಇದನ್ನೂ ನೋಡಿ : ಕೇಂದ್ರ ರಾಜ್ಯ ಸರ್ಕಾರಗಳ ರೈತ – ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ಐತಿಹಾಸಿಕ ಹೋರಾಟಕ್ಕೆ ಸಿದ್ದತೆ