ಬೆಂಗಳೂರು: ಏಪ್ರಿಲ್ 2 ರಿಂದ 6 ರವರೆಗೆ ಮಧುರೈ ನಗರದಲ್ಲಿ ನಡೆಯಲಿರುವ ಸಿಪಿಐ(ಎಂ)ನ 24 ನೇ ಮಹಾಧಿವೇಶನದಲ್ಲಿ ಅಂಗೀಕರಿಸಬೇಕಾದ ರಾಜಕೀಯ ನಿರ್ಣಯದ ಕನ್ನಡದ ಆವೃತ್ತಿಯನ್ನು ಇಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಯಿತು. ಮಹಾದಿವೇಶನ
ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಡಾ. ಪ್ರಕಾಶ್ ಕೆ. ಮತ್ತು ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಎಂ.ಪಿ.ಮುನಿವೆಂಕಟಪ್ಪ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮಹಾದಿವೇಶನ
ಮುಂದಿನ ಎರಡು ತಿಂಗಳ ಕಾಲ ಸಿಪಿಐ(ಎಂ)ನ ಪ್ರತಿಯೊಬ್ಬ ಸದಸ್ಯರು ಮತ್ತು ಹಿತೈಷಿಗಳು ಈ ಕರಡು ದಸ್ತಾವೇಜಿನ ಬಗ್ಗೆ ಚರ್ಚಿಸಿ ತಮ್ಮ ಅಭಿಪ್ರಾಯಗಳನ್ನು ಮತ್ತು ತಿದ್ದುಪಡಿಗಳನ್ನು ನೀಡುತ್ತಾರೆ.
ಇದನ್ನೂ ಓದಿ: ದೆಹಲಿ ವಿಧಾನಸಭಾ ಚುನಾವಣೆ: ಸಿಎಂ ಅತಿಶಿಗೆ ಗೆಲುವು
ಹೆಚ್ಚುತ್ತಿರುವ ಕೋಮುವಾದ, ವ್ಯಾಪಕವಾಗಿ ಜಾರಿ ಮಾಡಲಾಗುತ್ತಿರುವ ನವ ಉದಾರವಾದಿ ನೀತಿಗಳು ಜನತೆಯ ಬದುಕನ್ನು ತೀವ್ರವಾಗಿ ಭಾಧಿಸುತ್ತಿವೆ. ಇವುಗಳ ವಿರುದ್ದ ಅತೃಪ್ತಿಯೂ ಬೆಳೆಯುತ್ತಿದೆ. ಸಿಪಿಐ(ಎಂ) ಪಕ್ಷವನ್ನು ಸ್ವತಂತ್ರವಾಗಿ ಬೆಳೆಸುತ್ತಲೇ, ಎಡ-ಪ್ರಜಾಸತ್ತಾತ್ಮಕ ಶಕ್ತಿಗಳ ಚಳುವಳಿಯನ್ನು ಕಟ್ಟುವ ಬಗ್ಗೆ ರಾಜಕೀಯ ನಿರ್ಣಯವು ಕರೆ ನೀಡಿದೆ.
ಸಿಪಿಐ(ಎಂ) ನ ಮುಂದಿನ ರಾಜಕೀಯ ಧೋರಣೆಯನ್ನು ರೂಪಿಸುವ ಈ ಪ್ರಕ್ರಿಯೆಯು ಪಕ್ಷದೊಳಗಿನ ಬಲಿಷ್ಟವಾದ ಪ್ರಜಾಪ್ರಭುತ್ವ ಸ್ವರೂಪದ ಪ್ರತಿಬಿಂಬವಾಗಿದೆ.
ರಾಜ್ಯದ ಜನತೆ ಸಿಪಿಐ(ಎಂ)ನ ಈ ರಾಜಕೀಯ ನಿರ್ಣಯದ ಕುರಿತು ತಮ್ಮ ಅಭಿಪ್ರಾಯಗಳನ್ನು ನೀಡಬೇಕೆಂದು ಈ ಮೂಲಕ ಕೋರಲಾಗಿದೆ.
ಇದನ್ನೂ ನೋಡಿ: ಜಸ್ಟೀಸ್ ನಾಗಮೋಹನ್ ದಾಸ್ ಸಮಿತಿJanashakthi Media