ಕರ್ನಾಟಕ ಸರ್ಕಾರಕ್ಕೆ ₹6310.40 ಕೋಟಿ ತೆರಿಗೆ ಪಾಲಿನ ಕಂತಿನ ರೂಪದಲ್ಲಿ ಬಿಡುಗಡೆ

ವದೆಹಲಿ: ಶುಕ್ರವಾರದಂದು ಕರ್ನಾಟಕ ಸರ್ಕಾರಕ್ಕೆ ತೆರಿಗೆ ಪಾಲಿನ ಕಂತಿನ ರೂಪದಲ್ಲಿ ₹6310.40 ಕೋಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಕೇಂದ್ರವು 28 ರಾಜ್ಯಗಳಿಗೆ ಒಟ್ಟು ₹1,73,030 ಕೋಟಿ ಬಿಡುಗಡೆಗೊಳಿಸಿದೆ.

15ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ, ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರ ಸಂಗ್ರಹಿಸುವ ತೆರಿಗೆಯಲ್ಲಿ ಶೇ 41 ಮೊತ್ತವನ್ನು ರಾಜ್ಯ ಸರ್ಕಾರಗಳಿಗೆ 14 ಕಂತುಗಳಲ್ಲಿ ಹಂಚಿಕೆ ಮಾಡಲಾಗುತ್ತದೆ. ಕರ್ನಾಟಕ

2024ರ ಡಿಸೆಂಬರ್ ತಿಂಗಳ ಕಂತಿನಲ್ಲಿ ₹89,086 ಕೋಟಿ ಬಿಡುಗಡೆಗೊಳಿಸಿತ್ತು. ರಾಜ್ಯಗಳಿಗೆ ಅಭಿವೃದ್ಧಿ ಹಾಗೂ ಬಂಡವಾಳ ವೆಚ್ಚಕ್ಕೆ ಹೆಚ್ಚಿನ ಹಣ ತೊಡಗಿಸಲು ಅನುಕೂಲ ಮಾಡಲು ಈ ಕಂತು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: ರಾಜ ಸರ್ಕಾರದ ವಿರುದ್ಧ  60% ಕಮಿಷನ್ ಆರೋಪ: ಎಚ್‌ಡಿಕೆ ವಿರುದ್ಧ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ವಾಗ್ದಾಳಿ

ಅದರಂತೆ ರಾಜ್ಯಗಳಿಗೆ ಬಿಡುಗಡೆಯಾದ ಹಣದ ಪ್ರಮಾಣ ಹೀಗಿದೆ…

1. ಆಂಧ್ರಪ್ರದೇಶ – ₹7,002.52 ಕೋಟಿ

2. ಅರುಣಾಚಲ ಪ್ರದೇಶ- ₹3,040.14 ಕೋಟಿ

3. ಅಸ್ಸಾಂ- ₹5,412.38 ಕೋಟಿ

4. ಬಿಹಾರ- ₹17,403.36 ಕೋಟಿ

5. ಛತ್ತೀಸಗಢ- ₹5,895.13 ಕೋಟಿ

6. ಗೋವಾ- ₹667.91 ಕೋಟಿ

7. ಗುಜರಾತ್- ₹6,017.99 ಕೋಟಿ

8. ಹರಿಯಾಣ- ₹1,891.22 ಕೋಟಿ

9. ಹಿಮಾಚಲ ಪ್ರದೇಶ- ₹1,436.16 ಕೋಟಿ

10. ಜಾರ್ಖಂಡ್- ₹5,722.10 ಕೋಟಿ

11. ಕರ್ನಾಟಕ- ₹6,310.40 ಕೋಟಿ

12. ಕೇರಳ- ₹3,330.83 ಕೋಟಿ

13. ಮಧ್ಯಪ್ರದೇಶ- ₹13,582.86 ಕೋಟಿ

14. ಮಹಾರಾಷ್ಟ್ರ- ₹10,930.31 ಕೋಟಿ

15. ಮಣಿಪುರ- ₹1,238.90 ಕೋಟಿ

16. ಮೇಘಾಲಯ- ₹1,327.13 ಕೋಟಿ

17. ಮೀಜೋರಾಂ- ₹865.15 ಕೋಟಿ

18. ನಾಗಾಲ್ಯಾಂಡ್- ₹984.54 ಕೋಟಿ

19. ಒಡಿಶಾ- ₹7,834.80 ಕೋಟಿ

20. ಪಂಜಾಬ್- ₹3,126.65 ಕೋಟಿ

21. ರಾಜಸ್ಥಾನ- ₹10,426.78 ಕೋಟಿ

22. ಸಿಕ್ಕಿಂ- ₹671.35 ಕೋಟಿ

23. ತಮಿಳುನಾಡು- ₹7,057.89 ಕೋಟಿ

24. ತೆಲಂಗಾಣ- ₹3,637.09 ಕೋಟಿ

25. ತ್ರಿಪುರಾ- ₹1,225.04 ಕೋಟಿ

26. ಉತ್ತರಪ್ರದೇಶ- ₹31,039.84 ಕೋಟಿ

27. ಉತ್ತರಾಖಂಡ- ₹1,934.47 ಕೋಟಿ

28. ಪಶ್ಚಿಮ ಬಂಗಾಳ- ₹13,017.06 ಕೋಟಿ

ಇದನ್ನೂ ನೋಡಿ: ಭತ್ತ ಖರೀದಿ ಕೇಂದ್ರ ತೆರೆಯಲು ವಿಳಂಬ: ಮಂಡ್ಯದಲ್ಲಿ ಕೃಷಿ ಸಚಿವರ ಕಚೇರಿ ಎದುರು ಭತ್ತ ಸುರಿದು ಪ್ರತಿಭಟನೆ

Donate Janashakthi Media

Leave a Reply

Your email address will not be published. Required fields are marked *