RSS ಪ್ರೇರಿತ ಬ್ರಾಹ್ಮಣ್ಯ ಪಠ್ಯ ತಿರಸ್ಕರಿಸಿ – ಟ್ವೀಟರ್ ಟ್ರೆಂಡಿಂಗ್

ಬೆಂಗಳೂರು: ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯ ಪುಸ್ತಕ ರಚನಾ ಸಮಿತಿ ಸಿದ್ಧಪಡಿಸಿರುವ ಪಠ್ಯವನ್ನು ವಿರೋಧಿಸಿ ಹಲವು ಪ್ರಗತಿಪರ ಸಂಘಟನೆಗಳು, ಪ್ರಮುಖರು ಟ್ವಿಟ್ಟರ್‌ ಅಭಿಯಾನ ಕೈಗೊಂಡಿದ್ದಾರೆ.

5 ಗಂಟೆಗೆ ಶುರುವಾದ ಅಭಿಯಾನಕ್ಕೆ ಅರ್ಧ ಗಂಟೆಯಲ್ಲೇ ಸಾವಿರಾರು ಸಂಖ್ಯೆಯಲ್ಲಿ ಟ್ವೀಟ್‌ಗಳು ಆಗುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ.
#RejectBrahminTextBooks
#RejectRSSTextBooks ರಿಜೆಕ್ಟ್‌ ಬ್ರಾಹ್ಮಿಣ್‌ ಟೆಕ್ಸ್ಟ್‌ ಬುಕ್‌, ರಿಜೆಕ್ಟ್‌ ಆರ್‌ಎಸ್‌ಎಸ್‌ ಟೆಕ್ಸ್ಟ್‌ ಬುಕ್‌ ಎನ್ನುವ ಹ್ಯಾಸ್‌ ಟ್ಯಾಗ್‌ ಬಳಸಿ ಮಾಡುತ್ತಿರುವ ಅಭಿಯಾನ ಮಕ್ಕಳಲ್ಲಿ ಕೋಮು ವಿಷಬೀಜ ಬಿತ್ತುವುದು ಬೇಡ ಎಂದು ಆಗ್ರಹ ಮಾಡಿವೆ. ಪುಸ್ತಕಗಳಲ್ಲಿ ಒಂದು ಜಾತಿಯ ಲೇಖಕರ ವಿಜೃಂಭಣೆ, ಕೇಸರೀಕರಣ, ವೈದಿಕೀಕರಣ, ಕರ್ನಾಟಕದ, ಭಾರತದ ಸಮಾಜಸುಧಾರಕರ ಕುರಿತಾದ ಪಾಠಗಳನ್ನು ತೆಗೆದುಹಾಕಿರುವುದನ್ನು ವಿರೋಧಿಸಲಾಗಿದೆ. ವಿವಾದಿತ ವ್ಯಕ್ತಿಗಳಾದ ರೋಹಿತ್‌ ಚಕ್ರತೀರ್ಥ, ಚಕ್ರವರ್ತಿ ಸೂಲಿಬೆಲೆ ಅವರ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಜೊತೆಗೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರು ರಾಜೀನಾಮೆ ನೀಡಬೇಕು, ಸಂಘ ಪರಿವಾರದವರ ಮಕ್ಕಳು ವಿದೇಶದಲ್ಲಿ ಶಿಕ್ಷಣ ಪಡೆಯಬೇಕು, ನಮ್ಮ ಮಕ್ಕಳು ಮಾತ್ರ ಇಲ್ಲಿ ಧರ್ಮದ ಅಮಲನ್ನು ಏರಿಸಿಕೊಂಡು ಶಿಕ್ಷಣ ಪಡೆಯಬೇಕು. ಇದು ಯಾವ ನ್ಯಾಯ ಎನ್ನುವ ಆಕ್ರೋಶವೂ ವ್ಯಕ್ತವಾಗುತ್ತಿದೆ.

Donate Janashakthi Media

One thought on “RSS ಪ್ರೇರಿತ ಬ್ರಾಹ್ಮಣ್ಯ ಪಠ್ಯ ತಿರಸ್ಕರಿಸಿ – ಟ್ವೀಟರ್ ಟ್ರೆಂಡಿಂಗ್

  1. ಬಲ ಪಂತಿಯ ಪಕ್ಷಗಳನ್ನು ಅಧಿಕಾರದಿಂದ ದೂರವಿಡಿ, ಅಧಿಕಾರ ನೀಡಿ ಇನ್ನೇನನ್ನು ನಿರೀಕ್ಷೆ ಮಾಡಲು ಸಾಧ್ಯ

Leave a Reply

Your email address will not be published. Required fields are marked *