ಆಮ್ಲಜನಕ ಸ್ಥಾವರ: ಎಂಬಿಬಿಎಸ್‌ ನಿಯಮಾವಳಿಗೆ ತಿದ್ದುಪಡಿ ತರಲು ಕೋರಿಕೆ: ಅರ್ಜಿ ವಜಾ

ನವದೆಹಲಿ: ದೇಶದಲ್ಲಿರುವ ಎಲ್ಲಾ ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಆಮ್ಲಜನಕ ಸ್ಥಾವರಗಳನ್ನು ಕಡ್ಡಾಯವಾಗಿ ಅಳವಡಿಸಲು ಎಂಬಿಬಿಎಸ್‌ ನಿಯಮಾವಳಿಗಳಿಗೆ ತಿದ್ದುಪಡಿ ತರಬೇಕೆಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಸಲ್ಲಿಕೆಯಾದ ಅರ್ಜಿಯನ್ನು ವಜಾಗೊಳಿಸಲಾಗಿದೆ.

‘ಇದು ನೀತಿಗೆ ಸಂಬಂಧಿಸಿದ ವಿಷಯವಾಗಿದ್ದು, ಪರಿಸರಕ್ಕೆ ಸಂಬಂಧಿಸಿದ ವಿಷಯವಲ್ಲ. ಹಾಗಾಗಿ ನೀವು ಸಂಬಂಧಪಟ್ಟ ಪ್ರಾಧಿಕಾರಕ್ಕೆ ಅರ್ಜಿಯನ್ನು ಸಲ್ಲಿಸಬಹುದುʼ ಎಂದು ಎನ್‌ಜಿಟಿಯ ಅಧ್ಯಕ್ಷ ಆದರ್ಶ್‌ ಕುಮಾರ್‌ ಗೋಯೆಲ್‌ ಅವರ ಪೀಠವು ತಿಳಿಸಿದೆ.

ಇದನ್ನು ಓದಿ: ಹೆಚ್ಚುತ್ತಿರುವ ಗ್ರಾಮೀಣ ಪ್ರದೇಶದ ಸೋಂಕಿತರ ಬಗ್ಗೆ ಹೆಚ್ಚಿನ ಗಮನ ಹರಿಸಿ: ಯಡಿಯೂರಪ್ಪ

ರಾಷ್ಟ್ರೀಯ ವೈದ್ಯಕೀಯ ಆಯೋಗವು 2020ರಲ್ಲಿ ಹೊರಡಿಸಿದ ವಾರ್ಷಿಕ ಎಂಬಿಬಿಎಸ್‌ ಪ್ರವೇಶ ನಿಯಮಾವಳಿಗಳ ಕನಿಷ್ಠ ಅವಶ್ಯಕತೆಗಳು (2020) ತಿದ್ದು‍ಪಡಿ ಮಾಡಬೇಕೆಂದು  ಎಚ್‌.ಸಿ ಅರೋರಾ ಎಂಬವರು ಅರ್ಜಿ ಸಲ್ಲಿಸಿದ್ದರು.

ಭಾರತದಲ್ಲಿ ಆಮ್ಲಜನಕ ಕೊರತೆಯಿಂದಾಗಿ ಪ್ರತಿನಿತ್ಯ ಹಲವರು ಸಾವಿಗೀಡಾಗುತ್ತಿದ್ದಾರೆ. ಕೋವಿಡ್‌ ಸಾಂಕ್ರಾಮಿಕದ ದೃಷ್ಟಿಯಿಂದ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಆಮ್ಲಜನಕ ಸ್ಥಾವರಗಳನ್ನು ಸ್ಥಾಪನೆ ಮಾಡಲು ನಿಯಮಾವಳಿಯನ್ನು ತಿದ್ದುಪಡಿ ಮಾಡಲು ಎಚ್ ಸಿ ಅರೋರಾ ಅರ್ಜಿಯನ್ನು ಸಲ್ಲಿಸಿ  ಕೋರಿದ್ದರು.

ರಾಷ್ಟ್ರೀಯ ವೈದ್ಯಕೀಯ ಆಯೋಗವು(ಎನ್‌ಎಂಸಿ) ಹಿಂದಿನ ವೈದ್ಯಕೀಯ ಮಂಡಳಿಯ (ಎಂಸಿಐ) “ವೈದ್ಯಕೀಯ ಕಾಲೇಜುಗಳಿಗೆ ಕನಿಷ್ಠ ಪ್ರಮಾಣಿತ ಅಗತ್ಯತೆಗಳು-1999” ಅನ್ನು ಬದಲಿಸುವ ನಿಯಮಗಳನ್ನು ತಿಳಿಸಿತ್ತು. ಹೊಸ ನಿಯಮಗಳು ಸ್ಥಾಪಿಸಲು ಪ್ರಸ್ತಾಪಿಸುವ ಎಲ್ಲಾ ಹೊಸ ವೈದ್ಯಕೀಯ ಕಾಲೇಜುಗಳಿಗೆ ಮತ್ತು 2021-22ರ ಶೈಕ್ಷಣಿಕ ವರ್ಷದಿಂದ ತಮ್ಮ ವಾರ್ಷಿಕ ಎಂಬಿಬಿಎಸ್ ಸೇವೆಯನ್ನು ಹೆಚ್ಚಿಸಲು ಪ್ರಸ್ತಾಪಿಸಿರುವ ಸ್ಥಾಪಿತ ವೈದ್ಯಕೀಯ ಕಾಲೇಜುಗಳಿಗೆ ಅನ್ವಯಿಸುತ್ತವೆ.

Donate Janashakthi Media

Leave a Reply

Your email address will not be published. Required fields are marked *