ಪರಿಶಿಷ್ಟರಿಗೆ ಕಲ್ಯಾಣ ಮಂಟಪ ನಿರಾಕರಣೆ: ತಹಶೀಲ್ದಾರ್‌ಗೆ ದೂರು

ಗುಡಿಬಂಡೆ : ಪರಿಶಿಷ್ಟ ಜಾತಿಯವರ ವಿವಾಹಕ್ಕೆ ಮುಜರಾಯಿ ಇಲಾಖೆಗೆ ಸೇರಿದ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯದ ಕಲ್ಯಾಣ ಮಂಟಪವನ್ನು ನೀಡಲು ನಿರಾಕರಿಸಿ ಅಸ್ಪೃಶ್ಯತೆ ಆಚರಣೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆಯ ಉಲ್ಲೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ  ನಡೆದಿದೆ.

ಜಾತಿ ಕಾರಣಕ್ಕೆ ಕಲ್ಯಾಣ ಮಂಟಪವನ್ನು ನೀಡುವುದಿಲ್ಲ ಎಂದು ದೇವಸ್ಥಾನ ಅಭಿವೃದ್ಧಿ ಸಮಿತಿಯ ವ್ಯವಸ್ಥಾಪಕ ಮಾಚಾವಲಹಳ್ಳಿ ವೆಂಕಟರಾಯಪ್ಪ ನಿರಾಕರಿಸಿದ್ದು, ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ವಧುವಿನ ಅಣ್ಣ, ತಹಶೀಲ್ದಾರ್‌ಗೆ ದೂರು ನೀಡಿದ್ದಾರೆ.

ಗುಡಿಬಂಡೆ ತಾಲ್ಲೂಕಿನ ಬ್ರಾಹ್ಮಣರಹಳ್ಳಿಯ ಪರಿಶಿಷ್ಟ ಜಾತಿಗೆ ಸೇರಿದ ವೆಂಕಟರಾಯಪ್ಪ ಎಂಬುವರ ಪುತ್ರಿ ವೆಂಕಟಲಕ್ಷ್ಮೀ ಮತ್ತು ಬಾಗೇಪಲ್ಲಿಯ ಮಹೇಶ್ ಎಂಬುವರ ವಿವಾಹ ನವೆಂಬರ್ 3ರಂದು ನಿಶ್ಚಯವಾಗಿತ್ತು. ವಿವಾಹಕ್ಕೂ 15 ದಿನ ಮೊದಲೇ ವಧುವಿನ ಸಹೋದರ ಆವುಲಕೊಂಡಪ್ಪ ಅವರು ದೇವಾಲಯ ಸಮಿತಿಯ ಕಾರ್ಯದರ್ಶಿ ಮಾಚಾವಲಹಳ್ಳಿ ವೆಂಕಟರಾಯಪ್ಪ ಅವರ ಬಳಿ ಬಂದು, “ನನ್ನ ತಂಗಿಯ ವಿವಾಹವಿದ್ದು ದೇವಾಲಯದ ಕಲ್ಯಾಣ ಮಂಟಪವನ್ನು ಬಾಡಿಗೆಗೆ ನೀಡಿ” ಕೇಳಿಕೊಂಡಿದ್ದರು.

ನ.3ರಂದು ಬೇರೊಂದು ವಿವಾಹಕ್ಕೆ ಕಲ್ಯಾಣ ಮಂಟಪವನ್ನು ಬಾಡಿಗೆಗೆ ನೀಡಲಾಗಿದೆ ಎಂದು ವೆಂಕಟರಾಯಪ್ಪ ತಿಳಿಸಿದ್ದರು. ನ.3ರಂದು ವಧು, ವರ ಹಾಗೂ ಅವರ ಸಂಬಂಧಿಕರು ದೇವಾಲಯದ ಮುಂಭಾಗ ಮದುವೆ ಮಾಡಿಕೊಳ್ಳಲು ಬಂದಿದ್ದರು. ಆಗ ದೇವಾಲಯ ಮತ್ತು ಕಲ್ಯಾಣ ಮಂಟಪಕ್ಕೆ ಬೀಗ ಹಾಕಲಾಗಿತ್ತು. ಯಾವುದೇ ಮದುವೆ ಸಮಾರಂಭ ನಡೆಯುತ್ತಿರಲಿಲ್ಲ. ಆಗ, ವಧು–ವರ ಪರಿಶಿಷ್ಟ ಸಮುದಾಯಕ್ಕೆ ಸೇರಿದವರು ಎಂಬ ಹಿನ್ನೆಲೆಯಲ್ಲಿಯೇ ವೆಂಕಟರಾಯಪ್ಪ ಕಲ್ಯಾಣ ಮಂಟಪ ನೀಡಲು ನಿರಾಕರಿಸಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.

“ನಾವು ಪರಿಶಿಷ್ಟ ಜಾತಿ(ಆದಿ ಕರ್ನಾಟಕ)ಗೆ ಸೇರಿದ ಕಾರಣದಿಂದ ನಮಗೆ ಕಲ್ಯಾಣ ಮಂಟಪವನ್ನು ಬಾಡಿಗೆಗೆ ನೀಡುವಂತೆ ಕೇಳಿದಾಗ ಅಂದು ಬೇರೆ ಮದುವೆ ಇದೆ ಎಂದು ಹೇಳಿದ್ದಾರೆ. ಆದರೆ, ನ. 3ರಂದು ಯಾವುದೇ ವಿವಾಹ ಇರಲಿಲ್ಲ. ಅಂದು ಕಲ್ಯಾಣ ಮಂಟಪದ ಬಾಗಿಲಿಗೆ ಬೀಗ ಹಾಕಲಾಗಿತ್ತು. ವಿಶೇಷ ಚೇತನಳಾದ ವೆಂಕಟಲಕ್ಷ್ಮೀ ಅವರ ಮದುವೆ ಜಾತಿಯ ಕಾರಣಕ್ಕಾಗಿ ಮಳೆಯ ನಡುವೆಯೇ ದೇವಸ್ಥಾನದ ಮುಂಭಾಗ ಮಾಡಬೇಕಾಯಿತು. ಇದರಿಂದ ಮದುವೆಗೆ ಬಂದ ನೆಂಟರಿಗೆ ಸರಿಯಾಗಿ ಊಟ ಬಡಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ದೇವಾಲಯ ಸಮಿತಿ ವಿರುದ್ಧ ಕ್ರಮಕೈಗೊಂಡು ನಮಗೆ ನ್ಯಾಯ ಒಡಗಿಸಬೇಕು” ಎಂದು ಮದುಮಗಳ ಸಹೋದರ ಆವುಲಕೊಂಡಪ್ಪ, ಗುಡಿಬಂಡೆ ತಹಶೀಲ್ದಾರ್ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಹಾಗೂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

 

ಈ ಘಟನೆಗೆ ಆಕ್ರೋಶ ವ್ಯಕ್ತಪಡಿಸಿ ದಲಿತ ಸಂಘರ್ಷ ಸಮಿತಿ ಮುಖಂಡರು ಶುಕ್ರವಾರ ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟಿಸಿದರು.  ದಲಿತ ಸಂಘರ್ಷ ಸಮಿತಿ ಮುಖಂಡ ಜಿ.ವಿ.ಗಂಗಪ್ಪ ಮಾತನಾಡಿ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯದಲ್ಲಿ ಜಾತಿ ಆಧಾರದಲ್ಲಿ ಮದುವೆಗೆ ನಿರಾಕರಿಸಿರುವುದರಿಂದ ಟ್ರಸ್ಟ್ ಆಡಳಿತ ಮಂಡಳಿಯನ್ನು ರದ್ದು ಮಾಡಿ ತಹಶೀಲ್ದಾರ್ ಆಡಳಿತಾಧಿಕಾರಿಯನ್ನು ಈ ತಕ್ಷಣ ನೇಮಕಮಾಡಿ ಆಡಳಿತ ಮಂಡಳಿಯ ವಿರುದ್ದ ಕಾನೂನು ಕ್ರಮಕ್ಕೆ ಒತ್ತಾಯಿಸುತ್ತಿದ್ದು ಇಲಾಖೆ ಅಧಿಕಾರಿಗಳು ನಿರಾಕರಿಸಿದ್ದಾದರೇ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ತಹಶೀಲ್ದಾರ್ ಸಿಗ್ಬತ್  ವುಲ್ಲಾ ಮಾತನಾಡಿ 3 ರಂದು ಸಂಜೆ ಈ ವಿಚಾರದಲ್ಲಿ ದೂರು ಬಂದಿದ್ದು ದೇವಾಲಯಕ್ಕೆ ಸರ್ಕಾರದ ವತಿಯಿಂದ ಧರ್ಮದರ್ಶಿ ಮಂಡಳಿ ನೇಮಕವಾಗಿರುವುದಿಲ್ಲಾ ಗಣ್ಯರು ಸೇರಿ ದೇವಾಲಯದ ಅಭಿವೃದ್ದಿ ಟ್ರಸ್ಟ್ ರಚನೆ ಮಾಡಿಕೊಂಡಿದ್ದು  ಇಂದು ಟ್ರಸ್ಟ್ ವ್ಯವಸ್ಥಾಪಕ ಮಾಚಾವಲಯಹಳ್ಳಿ ವೆಂಕಟರಾಯಪ್ಪ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದ್ದು ಅವರಿಂದ ಮಾಹಿತಿ ಬಂದ ನಂತರ  ತನಿಖೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ದೇವಾಲಯದ ಆವರಣದ ಮುಂದೆ ನಡೆದ ಮದುವೆ

 

ನನ್ನಗಮನಕ್ಕೆಬಂದಕೂಡಲೇದೇವಾಸ್ಥಾನದಟ್ರಸ್ಟ್ಅಧ್ಯಕ್ಷರಿಗೆನೋಟಿಸ್ನೀಡಿದ್ದೇನೆ .ಅದುಮುಜರಾಯಿಇಲಾಖೆಗೆಸೇರಿದದೇವಸ್ಥಾನವಾಗಿದೆ . ಆದ್ದರಿಂದಅಲ್ಲಿರೀತಿದಲಿತರಿಗೆಮದುವೆಗೆಕಲ್ಯಾಣಮಂಟಪನೀಡದೇಇರುವುದುಅರ್ಜಿಬಂದಿದೇಕೂಡಲೇಪರಿಶೀಲಿಸಿಕ್ರಮವಹಿಸಿಸರಕಾರದವಶಕ್ಕೇದೇವಾಲಯವನ್ನುತೆಗೆದುಕೊಳ್ಳುತ್ತೇನೆತಪ್ಪಿಸ್ಥರವಿರುದ್ದಕಾನೂನುಕ್ರಮಜರುಗಿಸಲಾಗುವುದು – ಸಿಗ್ಬತ್ ವುಲ್ಲಾ ತಹಶೀಲ್ದಾರ್ ಗುಡಿಬಂಡೆ

ವರದಿ : ಎಲ್‌.ಈಶ್ವರಪ್ಪ

 

Donate Janashakthi Media

Leave a Reply

Your email address will not be published. Required fields are marked *