ಹುಬ್ಬಳ್ಳಿ: ನಗರದಲ್ಲಿ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯು ಕೋಚಿಂಗ್ ಕೇಂದ್ರಗಳನ್ನು ತೆರೆದು ವಿದ್ಯಾರ್ಥಿಗಳಿಗೆ ಸರಿಯಾಗಿ ಸ್ಪಂದಿಸದ ಹಾಗೂ ಸೇವಾ ನ್ಯೂನತೆ ಹೊಂದಿದ ಸೆಂಟರ್‌ಗಳಿಗೆ ಬಿಸಿ ಮುಟ್ಟಿಸಿದೆ. ಹುಬ್ಬಳ್ಳಿ
ದೇಶಾದ್ಯಂತ ದೂರು ಸಲ್ಲಿಸಿದ ಸುಮಾರು 600 ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿದ್ದು, ಅಂದಾಜು 1.56 ಕೋಟಿ ರೂ.ಗಳನ್ನು ಕೋಚಿಂಗ್ ಕೇಂದ್ರಗಳಿಂದ ಮರುಪಾವತಿ ಮಾಡಿಸಲಾಗಿದೆ.
ನಾಗರಿಕ ಸೇವೆ, ಎಂಜಿನಿಯರಿಂಗ್ ಸೇರಿದಂತೆ ವಿವಿಧ ಉನ್ನತ ಶಿಕ್ಷಣ ಕೋಚಿಂಗ್ ಕೇಂದ್ರಗಳು ಶುಲ್ಕ ಪಾವತಿಸಿಕೊಂಡು ಪ್ರವೇಶ ನೀಡದೆ ಹಾಗೂ ಸೂಕ್ತ, ಸಮರ್ಪಕ ಅಭ್ಯಾಸ ಪರಿಕರ, ತರಗತಿ ನೀಡದೆ ವಿದ್ಯಾರ್ಥಿಗಳನ್ನು ವಂಚಿಸುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿದ್ದವು.
ಇದನ್ನೂ ಓದಿ: ರಾಜ್ಯದಲ್ಲಿ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಸಂಚಾರ ಮುಕ್ತ
ಈ ಹಿನ್ನೆಲೆಯಲ್ಲಿ ಕೇಂದ್ರ ಗ್ರಾಹಕರ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಸೂಚನೆಯಂತೆ ಸಚಿವಾಲಯ ರಾಷ್ಟ್ರೀಯ ಗ್ರಾಹಕರ ಸಹಾಯವಾಣಿ (ಎಚ್‌ಸಿಎಚ್) ಮೂಲಕ ಅನ್ಯಾಯಕ್ಕೊಳಗಾದ ವಿದ್ಯಾರ್ಥಿಗಳಿಗೆ ನೇರವಾಗಿ ದೂರು ಸಲ್ಲಿಸುವ ಅವಕಾಶ ಕಲ್ಪಿಸಿತ್ತು.
ಕೋಚಿಂಗ್ ಕೇಂದ್ರಗಳು ಕೇವಲ ವ್ಯಾವಹಾರಿಕವಾಗಿ ನೋಡದೆ ವಿದ್ಯಾರ್ಥಿ ಕೇಂದ್ರಿತ ವಿಧಾನವನ್ನು ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳಿಂದ ಮರುಪಾವತಿ ಹಕ್ಕುಗಳನ್ನು ನಿರಾಕರಿಸುವಂತಹ ವಂಚನೆಗೆ ಅಂತ್ಯ ಹಾಡಬೇಕು ಎಂದು ಗ್ರಾಹಕ ವ್ಯವಹಾರಗಳ ಇಲಾಖೆ ನಿರ್ದೇಶಿಸಿದೆ.
ಇದನ್ನೂ ನೋಡಿ: ನಶಿಸಿಹೋಗುತ್ತಿರುವ ಕನ್ನಡ ಶಾಲೆಗಳು – ಪುರುಷೋತ್ತಮ ಬಿಳಿಮಲೆ ಕಳವಳJanashakthi Media