ಬೆಂಗಳೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ಇನ್ನೇನು ಜೋರಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಮತದಾನ ಪ್ರಕ್ರಿಯೆಯು ಕೂಡ ಆರಂಭಗೊಳ್ಳಲಿದೆ. ಚುನಾವಣಾ ಸಂಬಂಧ ವಿವಿಧ ಪಕ್ಷಗಳಿಂದ ನಾಮಪತ್ರಗಳು ಸಲ್ಲಿಕೆಯಾಗಿದ್ದು, ಈ ನಾಮಪತ್ರಗಳನ್ನು ವಾಪಸ್ ಪಡೆಯಲು ಇಂದು ಕಡೆ ದಿನವಾಗಿದೆ.
ಹೀಗಾಗಿ ಇಂದು ಸಂಜೆಯ ವೇಳೆಗೆ ವಿಧಾನಸಭಾ ಚುನಾವಣಾಗೆ ಅಂತಿಮವಾಗಿ ಕಣದಲ್ಲಿ ಉಳಿಯುವ ಅಭ್ಯರ್ಥಿಗಳ ಪಟ್ಟಿಯು ಪ್ರಕಟವಾಗಲಿದೆ. ವಿವಿಧ ರಾಜಕೀಯ ಪಕ್ಷಗಳ ಟಿಕಟ್ ವಂಚಿತರು ಹಲವು ಕ್ಷೇತ್ರಗಳಿಂದ ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷದ ಅಧಿಕೃತ ಅಭ್ಯರ್ಥಿಗಳಿಗೆ ಬೆಂಬಲ ನೀಡುವಂತ ಬಂಡಾಯವಾಗಿ ಸ್ಪರ್ಧಿಸಿರುವವರ ಮನವೊಲಿಸಲು ಪ್ರಮುಖ ರಾಜಕೀಯ ಪಕ್ಷಗಳ ನಾಯಕರಗಳು ನಿರಂತರವಾಗಿ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎನ್ನಲಾಗಿದೆ.
ಯಾವ ಪಕ್ಷಗಳಿಂದ ಎಷ್ಟು ನಾಮಪತ್ರಗಳು ಸಲ್ಲಿಕೆಯಾಗಿದೆ ಎಂಬುದನ್ನು ತಿಳಿಯೋಣ ಬನ್ನಿ :
ಪಕ್ಷ ಅಭ್ಯರ್ಥಿ
ಬಿಜೆಪಿ 224
ಕಾಂಗ್ರೆಸ್ 223
ಜನತಾ ದಳ 211
ಎಎಪಿ 212
ಬಿಎಸ್‌ಪಿ 137
ಸಿಪಿಐಎಂ 004
ಎನ್‌ಪಿಪಿ 004
ನೋಂದಾಯಿತ ಪಕ್ಷಗಳು 736
ಸ್ವತಂತ್ರ 1379
ಈ ವರೆಗೆ ಸಲ್ಲಿಕೆಯಾದ ನಾಮೊತ್ರಗಳ ಪರಿಶೀಲನೆಗೆ ಶನಿವಾರವೇ ಕಡೆಯ ದಿನವಾಗಿತ್ತು. ಹೀಗಾಗಿ ನಾಮಪತ್ರಗಳನ್ನು ವಾಪಸ್ ಪಡೆಯಲು ಇಂದು ಮಾಧ್ಯಾಹ್ನ 3 ಗಂಟೆಗಳ ತನಕ ಕಾಲಾವಕಾಶವನ್ನು ನೀಡಲಾಗಿದೆ. ಇದಾದ ಬಳಿಕ ಇಂದೇ ಅಂತಮವಾಗಿ ಕಣದಲ್ಲಿ ಉಳಿಯುವ ಅಭ್ಯರ್ಥಿಗಳನ್ನು ಚುನಾವಣಾ ಅಧಿಕಾರಿಗಳ ಘೋಷಣೆ ಮಾಡಲಿದ್ದಾರೆ.
ಇದನ್ನೂ ಓದಿ : ಜನಮತ 2023 : ವಿಧಾನಸಭಾ ಚುನಾವಣೆಗೆ ಸಲ್ಲಿಕೆಯಾಗಿದ್ದ ನಾಮಪತ್ರಗಳಲ್ಲಿ 3.044 ಸ್ವೀಕೃತ, 406 ತಿರಸ್ಕೃತ
ಬಂಡಾಯ ಅಭ್ಯರ್ಥಿಗಳು ಹಾಗೂ ಪಕ್ಷೇತರವಾಗಿ ನಿಂತಿರುವ ಕಣಕ್ಕಿಳಿಯಲು ಮುಂದಾಗಿರುವ ಅಭ್ಯರ್ಥಿಗಳೇ ಪ್ರಮುಖ ರಾಜಕೀಯ ಮುಖಂಡರುಗಳಿಗೆ ತಲೆನೋವಾಗಿ ಪರಿಣಮಿಸಿದ್ದಾರೆ. ಒಂದಷ್ಟು ಮೂಲಗಳ ಪ್ರಕಾರ ಅಯಾಯ ಪಕ್ಷಗಳ ಅಧಿಕೃತ ಅಭ್ಯರ್ಥಿಗಳಿಗೆ ಬೆಂಬಲವನ್ನು ಸೂಚಿಸುವುದರ ಮೂಲಕ ನಾಮಪತ್ರವನ್ನು ವಾಪಸ್ ಪಡೆದು ಪಕ್ಷದ ನಿರ್ದೇಶನವನ್ನು ಬಹಳಷ್ಟು ಅಭ್ಯರ್ಥಿಗಳು ಪಾಲಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಹಠ ಬಿಡದ ಒಂದಷ್ಟು ಅಭ್ಯರ್ಥಿಗಳು ಕಣದಲ್ಲೇ ಉಳಿಯುವುದುನ್ನು ಸದ್ಯ ತಳ್ಳಿಹಾಕುವಂತಿಲ್ಲ.
ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳು ಮಾಹಿತಿ ನೀಡಿರುವ ಪ್ರಕಾರ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು 3130 ಅಭ್ಯರ್ಥಿಗಳಿದ್ದು, ಇವರಲ್ಲಿ 2890 ಪಿರುಷ ಅಭ್ಯರ್ಥಿಗಳಾದರೆ 239 ಮಹಿಳಾ ಅಭ್ಯರ್ಥಿಗಳಿದ್ದು ಇತರೆ ಇಬ್ಬರು ಕಣದಲ್ಲಿದ್ದಾರೆ.