ಜನಮತ 2023 : ಅಂತಿಮವಾಗಿ ವಿಧಾನಸಭಾ ಸಮರಕ್ಕೆ 2,613 ಅಭ್ಯರ್ಥಿಗಳು ಸಜ್ಜು!

                                                                                                                               –  ಸೌಮ್ಯ ಹೆಗ್ಗಡಹಳ್ಳಿ

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭಗೊಂಡಿದೆ. ವಿವಿಧ ರಾಜಕೀಯ ಪಕ್ಷಗಳ ಒಟ್ಟು 5,102 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಸುವಿಕೆ ಅಂತಿಮಗೊಂಡು 3.044 ಮಂದಿಯ ನಾಮಪತ್ರಗಳು ಸ್ವೀಕೃತವಾಗಿದ್ದು,406 ನಾಮಪತ್ರಗಳು ತಿರಸ್ಕೃತಗೊಂಡಿದ್ದು. ಪರಿಶೀಲನೆಯ ಬಳಿಕ ನೆನ್ನೆಯಷ್ಟೇ ಅಭ್ಯರ್ಥಿಗಳ ನಾಮಪತ್ರ ವಾಪಾಸಾತಿಯು ಮುಕ್ತಾಯಗೊಂಡಿದ್ದು ಇದಾಗ ಒಟ್ಟಾರೆ ವಿಧಾನಸಭಾ ಚುನಾವಣೆ 2023 ರ ಕಣಕ್ಕೆ ಇದೀಗ ಒಟ್ಟು 2,613 ಅಭ್ಯರ್ಥಿಗಳು ಸಜ್ಜುಗೊಂಡಿದ್ದು ಇವರ ಪೈಕಿ 2,427 ಮಂದಿ ಪುರುಷ ಅಭ್ಯರ್ಥಿಗಳು, 184 ಮಂದಿ ಮಹಿಳಾ ಅಭ್ಯರ್ಥಿಗಳು ಸೇರಿ ಇತರರು ಇಬ್ಬರು ಇದ್ದಾರೆ.

ಬಿಜೆಪಿ : 
224 ಕ್ಷೇತ್ರಗಳಿಂದ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ.
4 ಹಂತದಲ್ಲಿ ಬಿಡುಗಡೆ

189 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಿದ್ದು – 11 ಏಪ್ರಿಲ್ 2023
23 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಗೊಳಿಸಿದ್ದು  –  12 ಏಪ್ರಿಲ್ 2023
10 ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆಗೊಳಿಸಿದ್ದು –  17 ಏಪ್ರಿಲ್ 2023
ಅಂತಿಮವಾಗಿ 2 ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಬಿಡುಗಡೆಗೊಳಿಸಿದ್ದು – 19 ಏಪ್ರಿಲ್ 2023

ಇದನ್ನೂ ಓದಿ : ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ; 189 ಮಂದಿಗೆ ಟಿಕೆಟ್, 52 ಮಂದಿ ಹೊಸಬರಿಗೆ ಮಣೆ

ಕಾಂಗ್ರೆಸ್‌ :
223 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡುವ ಮೂಲಕ ಮೇಲುಕೋಟೆ ಕ್ಷೇತ್ರದಲ್ಲಿ ದರ್ಶನ್‌ ಪಟ್ಟಣ್ಣಯ್ಯ ಅವರನ್ನು ಬೆಂಬಲಿದೆ.
6 ಹಂತದಲ್ಲಿ ಬಿಡುಗಡೆ
124 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಿದ್ದು – 25 ಮಾರ್ಚ್ 2023
41 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಗೊಳಿಸಿದ್ದು  – 6 ಏಪ್ರಿಲ್ 2023
43 ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆಗೊಳಿಸಿದ್ದು – 15 ಏಪ್ರಿಲ್ 2023 (ಸರ್ವೋದಯ ಕರ್ನಾಟಕ ಪಕ್ಷಕ್ಕೆ ಒಂದು ಸ್ಥಾನವನ್ನು ಬಿಟ್ಟು)
7 ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಬಿಡುಗಡೆಗೊಳಿಸಿದ್ದು – 18 ಏಪ್ರಿಲ್ 2023
4 ಅಭ್ಯರ್ಥಿಗಳ ಐದನೇ ಪಟ್ಟಿ ಬಿಡುಗಡೆಗೊಳಿಸಿದ್ದು – 19 ಏಪ್ರಿಲ್ 2023 (1 ಬದಲಿ ಸೇರಿದಂತೆ)
ಅಂತಿಮವಾಗಿ  5 ಅಭ್ಯರ್ಥಿಗಳ ಆರನೇ ಪಟ್ಟಿ ಬಿಡುಗಡೆಗೊಳಿಸಿದ್ದು – 20 ಏಪ್ರಿಲ್ 2023

ಇದನ್ನೂ ಓದಿ : ವಿಧಾನಸಭಾ ಚುನಾವಣೆ; 124 ಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಮೊದಲ ಪಟ್ಟಿ ಬಿಡುಗಡೆ-ವರುಣದಿಂದ ಸಿದ್ದು, ಕನಕಪುರದಿಂದ ಡಿಕೆಶಿ ಸ್ಪರ್ಧೆ

ಜನತಾದಳ :  
209 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು . ಇವರಲ್ಲಿ ಇಬ್ಬರು ನಾಮಪತ್ರಗಳನ್ನು ವಾಪಸ್‌ ಪಡೆದ ಕಾರಣ ಅಂತಿಮವಾಗಿ 207 ಕ್ಷೇತ್ರಗಳಲ್ಲಿ ಚುನಾವಣಾ ಸ್ಪರ್ಧೆ ನಡೆಯಲಿದೆ.
4 ಹಂತದಲ್ಲಿ ಬಿಡುಗಡೆ
93 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಿದ್ದು – 19 ಡಿಸೆಂಬರ್ 2022
49 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಗೊಳಿಸಿದ್ದು – 14 ಏಪ್ರಿಲ್ 2023
6 ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆಗೊಳಿಸಿದ್ದು –  15 ಏಪ್ರಿಲ್ 2023
01 ಅಭ್ಯರ್ಥಿ ಪಟ್ಟಿ ಬಿಡುಗಡೆಗೊಳಿಸಿದ್ದು –  16 ಏಪ್ರಿಲ್ 2023
59 ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆಗೊಳಿಸಿದ್ದು – 19 ಏಪ್ರಿಲ್ 2023 (ಇದೇ ದಿನ, ಮತ್ತೊಂದು ಪಟ್ಟಿಯನ್ನು ಬಿಡುಗಡೆ ಮಾಡಿ ಅದರಲ್ಲಿ 12 ಕ್ಷೇತ್ರಗಳ ಅಭ್ಯರ್ಥಿಗಳನ್ನು ಬದಲಾಯಿಸಲಾಯಿತು ಮತ್ತು ಬೆಂಬಲ ಇತರೆ 7 ಕ್ಷೇತ್ರಗಳಲ್ಲಿ ಇತರೆ ಪಕ್ಷಗಳಿಗೆ ನೀಡಲಾಯಿತು).
13 ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆಗೊಳಿಸಿದ್ದು –  20 ಏಪ್ರಿಲ್ 2023

ಇದನ್ನೂಓದಿ : ಜೆಡಿಎಸ್‌ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ; ಎಚ್‌ಡಿ ರೇವಣ್ಣಗೆ ಸ್ಥಾನವೇ ಇಲ್ಲ!

ಆಮ್‌ ಆದ್ಮಿ : 
209 ಕ್ಷೇತ್ರಗಳಿಂದ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ.

ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) :
133 ಕ್ಷೇತ್ರಗಳಿಂದ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ.

ರಾಷ್ಟ್ರೀಯವಾದಿ ಕಾಂಗ್ರೆಸ್‌ ಪಕ್ಷ :
09 ಕ್ಷೇತ್ರಗಳಿಂದ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ.

ಕಮ್ಯೂನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ : 
07 ಕ್ಷೇತ್ರಗಳಿಂದ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ.

ಕಮ್ಯೂನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ ಮಾರ್ಕ್ಸ್‌ವಾದಿ :
04 ಕ್ಷೇತ್ರಗಳಿಂದ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ.

ಆಲ್‌ ಇಂಡಿಯಾ ಮಜ್ಲೀಸ್‌ ಎ ಇತ್ತೆಹಾದುಲ್‌ ಮುಸ್ಲಿಮಿನ್‌ :
03 ಕ್ಷೇತ್ರಗಳಿಂದ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ

ಪಕ್ಷೇತರ :
918


ಕಣದಲ್ಲಿರುವ ಪ್ರಮುಖರು ಯಾರಾರು : 
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ವಿಪಕ್ಷ ನಾಯಕ ಸಿದ್ದರಾಮಯ್ಯ
ಡಿ.ಕೆ ಶಿವಕುಮಾರ್
ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌
ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ
ನಿಖಿಲ್‌ ಕುಮಾರಸ್ವಾಮಿ
ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌
ಪ್ರಿಯಾಂಕ್‌ ಖರ್ಗೆ
ದಿನೇಶ್‌ ಗುಂಡೂರಾವ್‌
ರಮೇಶ್‌ ಕುಮಾರ್‌
ಕೆಎಚ್‌ ಮುನಿಯಪ್ಪ
ಸತೀಶ್‌ ಜಾರಕೀಹೊಳಿ
ಎಂ ಬಿ ಪಾಟೀಲ್‌
ಸಚಿವರಾದ ಆರ್‌ ಅಶೋಕ್‌
ಸಚಿವರಾದ ವಿ ಸೋಮಣ್ಣ
ಮುರುಗೇಶ್‌ ನಿರಾಣಿ
ಬಿ ವೈ ವಿಜಯೇಂದ್ರ ಮುಂತಾದವರು

ಡಾ. ಅನೀಲ್ ಕುಮಾರ್ ಬಾಗೇಪಲ್ಲಿ (ಪ್ರಜಾವೈದ್ಯ)


ಚುನಾವಣೆಗೂ ಮುನ್ನ ಪಕ್ಷಾಂತರಗೊಂಡವರು:
ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ – ಬಿಜೆಪಿ-ಕಾಂಗ್ರೆಸ್‌ಗೆ
ಲಕ್ಷ್ಮಣ ಸವದಿ : ಬಿಜೆಪಿ-ಕಾಂಗ್ರೆಸ್‌ಗೆ
ಎಚ್‌ ಡಿ ತಮ್ಮಯ್ಯ : ಬಿಜೆಪಿ-ಕಾಂಗ್ರೆಸ್‌ಗೆ
ಪುಟ್ಟಣ್ಣ : ಬಿಜೆಪಿ-ಕಾಂಗ್ರೆಸ್‌ಗೆ
ಎಸ್‌ ಅಂಗಾರ : ರಾಜಕೀಯ ನಿವೃತ್ತಿ
ಎಂ ಪಿ  ಕುಮಾರಸ್ವಾಮಿ : ಬಿಜೆಪಿಯಿಂದ ಜೆಡಿಸ್‌ಗೆ
ಆರ್‌ ಶಂಕರ್‌ : ರಾಜೀನಾಮೆ

 

 

Donate Janashakthi Media

Leave a Reply

Your email address will not be published. Required fields are marked *