ಜನಮತ 2023 : ಮನೆಯಿಂದಲೇ ಮತದಾನ ಮಾಡಲು 8,730 ಮಂದಿ ಆಯ್ಕೆ

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ 80 ವರ್ಷಕ್ಕೂ ಹೆಚ್ಚಿನ ವಯೋಮಾನದವರಲ್ಲಿ 8,730 ಮತದಾರರು ಮನೆಯಿಂದ ಮತದಾನ ಮಾಡುವುದನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಚುನಾವಣೆ ಆಯೋಗದ ಆದೇಶದಂತೆ ಪ್ರಥಮ ಬಾರಿಗೆ ಮನೆಯಿಂದ ಮತದಾನ ಆಯ್ಕೆಯನ್ನು ನೀಡಲಾಗುತ್ತಿದೆ.

ಈ ಆಯ್ಕೆ ಪಡೆದ ಮತದಾರರ ಮನೆಯಲ್ಲಿ ತಾತ್ಕಾಲಿಕ ಮತಗಟ್ಟೆಯನ್ನು ಬಿಬಿಎಂಪಿ ಪ್ರತಿನಿಧಿಗಳು ನಿರ್ಮಿಸಲಿದ್ದಾರೆ. ಮೇ 10ರ ಮತದಾನದ ದಿನದಿಂದ ನಾಲ್ಕೈದು ದಿನ ಮೊದಲೇ ಮತ ಚಲಾಯಿಸಬಹುದು. ಮನೆಯಿಂದ ಮತದಾನ ಆಯ್ಕೆ ಪಡೆದುಕೊಂಡವರಲ್ಲಿ 8,611 ಮಂದಿ 80 ವರ್ಷಕ್ಕೂ ಮೇಲಿನವರಾಗಿದ್ದಾರೆ. 119 ಅಂಗವಿಕಲರಿದ್ದಾರೆ. ಈ ಆಯ್ಕೆ ಪಡೆಯಲು ಏ.17 ಕಡೆ ದಿನವಾಗಿತ್ತು. ಎಲ್ಲ ಚುನಾವಣಾಧಿಕಾರಿಗಳಿಂದ ಮಾಹಿತಿ ಪಡೆದ ಮೇಲೆ ಒಟ್ಟು ಮತದಾರರ ಸಂಖ್ಯೆಯಲ್ಲಿ ವ್ಯತ್ಯಾಸವಾಗಬಹುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ 2.36 ಲಕ್ಷ ಮಂದಿ 80 ವರ್ಷಕ್ಕೂ ಮೇಲ್ಟಟ್ಟವರಿದ್ದಾರೆ. ರಾಜ್ಯದಲ್ಲಿ ಈ ಸಂಖ್ಯೆ 12 ಲಕ್ಷವಾಗಿದೆ.

ಇದನ್ನೂ ಓದಿ : ಜನಮತ 2023 : ಮೇ 10ರ ಮತದಾನ ದಿನದಂದು ಗಾರ್ಮೆಂಟ್ಸ್ ನೌಕರರಿಗೆ, ಕಾರ್ಮಿಕರಿಗೆಲ್ಲ ಸಂಬಳ ಸಹಿತ ರಜೆ ನೀಡಲು ನಿರ್ಧಾರ

‘ಕಳೆದ ಬಾರಿ ಮತಗಟ್ಟೆಗೆ ಹೋಗಲು ಸಾಧ್ಯವಾಗದೆ ಮತ ಚಲಾಯಿಸಲಿಲ್ಲ. ಈ ಬಾರಿ ಮನೆಯಿಂದ ಮತದಾನ ಆಯ್ಕೆ ಮಾಡಿಕೊಂಡಿದ್ದೇನೆ. ನನ್ನ ಹಕ್ಕನ್ನು ಚಲಾಯಿಸಲು ಪ್ರತಿಯೊಬ್ಬರೂ ತಮ್ಮ ಹಕ್ಕನ್ನು ಅರಿಯಬೇಕು’ ಎಂದು ಬಸವನಗುಡಿ ನಿವಾಸಿ 93 ವರ್ಷದ ರಮಾದೇವಿ ಹೇಳಿದರು.

Donate Janashakthi Media

Leave a Reply

Your email address will not be published. Required fields are marked *