ಕುಂದಾಪುರ: ಎಡಪಂಥೀಯರು ಪ್ರತಿ ಫೆಬ್ರವರಿ 21 ರಂದು ತಿಂಗಳುಗಳ ಕಾಲ ಕಾರ್ಲ್ ಮಾರ್ಕ್ಸ್ ಹಾಗೂ ಫೆಡ್ರಿಕ್ ಎಂಗೆಲ್ಸ್ ಅವರ ಕಮ್ಯುನಿಸ್ಟ್ ಪ್ರಣಾಳಿಕೆಯ ಕೆಂಪು ಪುಸ್ತಕ ದಿನಾಚರಣೆ ಜಗತ್ತಿನಾದ್ಯಂತ ನಡೆಯುತ್ತಿದೆ.
ಭಾರತದಲ್ಲಿ ಈ ಬಾರಿ ಯುಎಸ್ ಸಾಮ್ರಾಜ್ಯಶಾಹಿ ವಿರೋಧಿ ಪುಸ್ತಕ ಓದುವುದು ಫೆಬ್ರವರಿ 21 ರಿಂದ ಆರಂಭಗೊಂಡಿದೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದರು.
ಅವರು ಕುಂದಾಪುರ ಬೆವರು ಕಚೇರಿಯಲ್ಲಿ ರೆಡ್ ಬುಕ್ ಡೇ ದಿನದ ಅಂಗವಾಗಿ ಯುಎಸ್ ಸಾಮ್ರಾಜ್ಯಶಾಹಿ ಭಾರತ ಜನತೆಯ ಶತ್ರು ಎಂಬ ಪುಸ್ತಕ ಓದುವಿನಲ್ಲಿ ಮಾತನಾಡಿದರು.
ಇದನ್ನೂ ಓದಿ: ಒಳ ಮೀಸಲಾತಿ ವಿರೋಧಿಸಿ ಹಲವಾರು ಸಂಘಟನೆಗಳಿಂದ ಪ್ರತಿಭಟನೆ
ಬ್ರಿಟೀಷ್ ಸಾಮ್ರಾಜ್ಯಶಾಹಿ ಆಳ್ವಿಕೆಯ ವಿರುದ್ಧ ಹೋರಾಟ ನಡೆಸಿ ಸ್ವಾತಂತ್ರ್ಯ ಗಳಿಸಿದ ಇತಿಹಾಸ ನಮ್ಮ ದೇಶದ್ದು ಆದರೆ ಇಂದು ಯು ಎಸ್ ಸಾಮ್ರಾಜ್ಯಶಾಹಿ ನಮ್ಮನ್ನು ನೇರವಾಗಿ ಆಳ್ವಿಕೆ ಮಾಡದಿದ್ದರೂ ನಮ್ಮ ದೇಶದ ನೀತಿ ನಿರೂಪಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆಯೇ? ಎಂದು ತಿಳಿಯಬೇಕಿದೆ. ಅಮೇರಿಕಾ ಸಾಮ್ರಾಜ್ಯಶಾಹಿಯು ಮಿಲಿಟರಿ ದಾಳಿಯ ಬೆದರಿಕೆ ಹಾಕಿ ಒಂದು ದೇಶದ ಸರಕಾರದ ನೀತಿಗಳನ್ನು ಬದಲಾಯಿಸಲು ಒತ್ತಡ ಹಾಕುವುದು ನೋಡುತ್ತಿದ್ದೇವೆ.
ಈ ಒತ್ತಡ ಭಾರತ ದೇಶದ ಮೇಲೂ ಹಾಕುತ್ತಿದ್ದು ಕಾರ್ಮಿಕರ ರೈತರ ಹಕ್ಕುಗಳನ್ನು ಕಾಯ್ದೆಗಳನ್ನು ರದ್ದುಗೊಳಿಸುವ,ಕಡಿಮೆ ಬೆಲೆಗೆ ತೈಲ ಪಡೆಯುವುದನ್ನು ತಪ್ಪಿಸಿ ಅಮೇರಿಕಾದಿಂದಲೇ ದುಬಾರಿ ಬೆಲೆಗೆ ತೈಲ ಆಮದು ಮಾಡಿಕೊಳ್ಳುವ ಪರಿಸ್ಥಿತಿಗಳನ್ನು ನಿರ್ಮಿಸುತ್ತಿರುವುದು ಅಮೇರಿಕಾ ಸಾಮ್ರಾಜ್ಯಶಾಹಿ ನೀತಿಗಳು ಎಂಬುದಾಗಿ ಅವರು ಹೇಳಿದರು.
ಇಂತಹ ನೀತಿಗಳ ವಿರುದ್ಧ ದುಡಿಯುವ ವರ್ಗದ ಜನರು ಒಂದಾಗಿ ಸಾಮ್ರಾಜ್ಯಶಾಹಿ ವಿರುದ್ಧವೂ ಹೋರಾಟ ನಡೆಸಬೇಕಾದ ಅಗತ್ಯವಿದೆ ಎಂದು ಹೇಳಿದರು.
ಕೆಂಪು ಪುಸ್ತಕ ದಿನಾಚರಣೆಯ ಸಭೆಯ ಅಧ್ಯಕ್ಷತೆ ಚಿಕ್ಕ ಮೊಗವೀರ ವಹಿಸಿದ್ದರು.
ವೇದಿಕೆಯಲ್ಲಿ ಕ್ರಷ್ಣ ಪೂಜಾರಿ, ಅಣ್ಣಪ್ಪ ಅಬ್ಬಿಗುಡ್ಡಿ,ರಹೆಮಾನ್,ರಾಧ, ನಾಗೇಶ್ ಕುಲಾಲ್ ಮೊದಲಾದವರಿದ್ದರು. ರಾಘವೇಂದ್ರ ದೋಣಿಮನೆ ಪುಸ್ತಕ ಓದು ನಡೆಸಿಕೊಟ್ಟರು. ಉಮೇಶ್ ಆಚಾರ್ಯ ವಂದಿಸಿದರು.
ಇದನ್ನೂ ನೋಡಿ: “ಏನಿದು ‘ಕೆಂಪು ಪುಸ್ತಕ’? ಅದರ ವಿಶೇಷವೇನು?” – ಡಾ. ಕೆ.ಪ್ರಕಾಶ್ | ಯು.ಎಸ್. ಸಾಮ್ರಾಜ್ಯಶಾಹಿ Janashakthi Media
