ಆರೋಗ್ಯ ಇಲಾಖೆಯಲ್ಲಿ ನೇಮಕಾತಿ ಪ್ರಕ್ರಿಯೆ; ಆನ್‌ಲೈನ್ ಮೂಲಕ ಅರ್ಜಿಗಳ ಆಹ್ವಾನ

ಬೆಂಗಳೂರು: ರಾಜ್ಯದಲ್ಲಿ ಗದಗ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ PM-ABHEEM (Prime Minister Ayushman Bharat Health Infrastructure Mission) ಯೋಜನೆಯಡಿ ನೂತನ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಲ್ಯಾಬೊರೇಟರಿ ಟೆಕ್ನೀಷಿಯನ್, ಕಿರಿಯ ದರ್ಜೆ ಸಹಾಯಕ ಮತ್ತು ನರ್ಸಿಂಗ್ ಆಫೀಸರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆರೋಗ್ಯ

ಅರ್ಜಿ ಸಲ್ಲಿಸಲು 30 ಮೇ 2025 ಕೊನೆ ದಿನಾಂಕವಾಗಿರುತ್ತದೆ.

ಹುದ್ದೆಗಳ ವಿವರಗಳು:

ಒಟ್ಟು ಹುದ್ದೆಗಳು : 22
ಲ್ಯಾಬೊರೇಟರಿ ಟೆಕ್ನೀಷಿಯನ್ / ಕಿರಿಯ ದರ್ಜೆ ಸಹಾಯಕ ಹುದ್ದೆಗಳು- 11
ನರ್ಸಿಂಗ್ ಆಫೀಸರ್- 11

ಇದನ್ನೂ ಓದಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿ ಮೇಲೆ ಇಡಿ ದಾಳಿ

ವಿದ್ಯಾರ್ಹತೆ:

ಲ್ಯಾಬೊರೇಟರಿ ಟೆಕ್ನೀಷಿಯನ್ / ಕಿರಿಯ ದರ್ಜೆ ಸಹಾಯಕ ಹುದ್ದೆಗಳಿಗೆ SSLC ಪಾಸಾಗಿರಬೇಕು ಮತ್ತು ಲ್ಯಾಬೊರೇಟರಿ ಟೆಕ್ನಾಲಾಜಿಯಲ್ಲಿ 3 ವರ್ಷದ ಡಿಪ್ಲೊಮಾ ಅಥವಾ 2ನೇ ಪಿಯುಸಿ ವಿಜ್ಞಾನ ವಿಭಾಗ ಪಾಸಾಗಿದ್ದು, 2 ವರ್ಷಗಳ ಲ್ಯಾಬ್ ಟೆಕ್ನೀಷಿಯನ್ ತರಬೇತಿ ಪಡೆದಿರಬೇಕು.

ನರ್ಸಿಂಗ್ ಆಫೀಸರ್ ಹುದ್ದೆಗಳಿಗೆ B.Sc ನರ್ಸಿಂಗ್ ಅಥವಾ ಪೋಸ್ಟ್ ಸರ್ಟಿಫೈಡ್ (post certified) B.Sc ನರ್ಸಿಂಗ್ ಅಥವಾ ಡಿಪ್ಲೊಮಾ ಇನ್ ನರ್ಸಿಂಗ್ ಪೂರೈಸಿರಬೇಕು.

ವಯೋಮಿತಿ: ಗರಿಷ್ಠ ವಯಸ್ಸು 45 ವರ್ಷ

ಆಯ್ಕೆ ವಿಧಾನ: ಅಭ್ಯರ್ಥಿಗಳ ಆಯ್ಕೆಯನ್ನು ರೋಸ್ಟರ್ ಮತ್ತು ಮೆರಿಟ್ ಪಟ್ಟಿ ಆಧಾರದ ಮೇಲೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕವಿಲ್ಲ. ಎಲ್ಲಾ ಅಭ್ಯರ್ಥಿಗಳಿಗೂ ಉಚಿತ ಅರ್ಜಿ ಸಲ್ಲಿಸಲು ಅವಕಾಶವಿದೆ.

ಇದನ್ನೂ ನೋಡಿ: ಜಯಂತಿಗಳಿಗೆ ಜಾತಿಮಿತಿ ಬಂದಿರುವ ಕಾಲ ಇದು – ಬರಗೂರು ರಾಮಚಂದ್ರಪ್ಪ Janashakthi Media

Donate Janashakthi Media

Leave a Reply

Your email address will not be published. Required fields are marked *