ಮಾಲೂರು ವಿಧಾನಸಭಾ ಕ್ಷೇತ್ರ: ನವೆಂಬರ್ 11ರಂದು ಮರು ಮತ ಎಣಿಕೆ

ಕೋಲಾರ: ನವೆಂಬರ್ 11ರಂದು ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿರುವ ಮಾಲೂರು ವಿಧಾನಸಭಾ ಕ್ಷೇತ್ರದ ಮತ ಮರು ಎಣಿಕೆ ನಡೆಯಲಿದೆ.

ಈ ಸಂಬಂಧ ರಾಜ್ಯ ಮುಖ್ಯ ಚುನಾಣಾಧಿಕಾರಿ ಕಚೇರಿಯಿಂದ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗೆ ಪತ್ರ ರವಾನೆಯಾಗಿದೆ. ದಿನಾಂಕ ನಿಗದಿ ಆಗಿರುವುದನ್ನು ಜಿಲ್ಲಾಡಳಿತದ ಮೂಲಗಳು ಖಚಿತಪಡಿಸಿವೆ.

ಇದನ್ನೂ ಓದಿ: ಕೆಮ್ಮಿನ ಸಿರಪ್‌ ದುರಂತ: ಪ್ರಮುಖ ಆರೋಪಿಯ ಪತ್ನಿ ಬಂಧನ

ಮತ ಮರುಎಣಿಕೆಗೆ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಕೋಲಾರ ನಗರ ಹೊರವಲಯದ ತೋಟಗಾರಿಕೆ ಮಹಾವಿದ್ಯಾಲಯದ ಜಾಗ ಸೂಕ್ತವೇ ಎಂದು ಪರಿಶೀಲಿಸಿದೆ. ಅದರ ಹೊರತಾಗಿ ಬೇರೆ ಸೂಕ್ತ ಜಾಗದ ಹುಡುಕಾಟದಲ್ಲಿಯೂ ತೊಡಗಿದೆ.

ಸುಪ್ರೀಂ ಕೋರ್ಟ್‌ ಅಕ್ಟೋಬರ್.14ರ ಆದೇಶದಲ್ಲಿ ನೀಡಿರುವ ನಿರ್ದೇಶನ ಹಾಗೂ ಚುನಾವಣಾ ಆಯೋಗದ ನಿರ್ದೇಶನಗಳನ್ನು ಪಾಲಿಸುವಂತೆ ಪತ್ರದಲ್ಲಿ ಸೂಚನೆ ನೀಡಲಾಗಿದೆ.

ಇದನ್ನೂ ನೋಡಿ: ನಿರಂಜನರ ಕಥನ ಸಾಹಿತ್ಯದಲ್ಲಿ ಮಹಿಳೆ – ಡಾ ಎನ್‌. ಗಾಯತ್ರಿ Janashakthi Media

Donate Janashakthi Media

Leave a Reply

Your email address will not be published. Required fields are marked *