ವಿಧಾನಸಭ ಚುನಾವಣೆ: ಕೇರಳ, ಪುದುಚೇರಿ, ಅಸ್ಸಾಂನಲ್ಲಿ ದಾಖಲೆಯ ಮತದಾನ

ನವದೆಹಲಿ: ಏಪ್ರಿಲ್‌ 9ರಂದು ಪಂಚ ರಾಜ್ಯ ಚುನಾವಣೆ ಪೈಕಿ ಕೇರಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ದಾಖಲೆ ಮತದಾನ ನಡೆದಿದೆ. ಪುದುಚೇರಿಯಲ್ಲಿ 89.08, ಅಸ್ಸಾಂನಲ್ಲಿ 85.04 ಕೇರಳದಲ್ಲಿ ಶೇ.78 ಮತದಾನವಾಗಿದೆ. ಪುದುಚೇರಿ ಹಾಗೂ ಅಸಾಂನಲ್ಲಿ ಇದು ಸಾರ್ವಕಾಲಿಕ ದಾಖಲೆ ಆದರೆ, ಕೇರಳದಲ್ಲಿ 2021 ಕ್ಕಿಂತ ಹೆಚ್ಚು ಮತದಾನವಾಗಿದೆ. ಮೂರು ರಾಜ್ಯಗಳಲ್ಲಿ ಸುಸೂತ್ರವಾಗಿ ಮತದಾನ ನಡೆದಿದ್ದು, ಅಲ್ಲಿ ಸಣ್ಣಪುಟ್ಟ ಗಲಾಟೆ ಹೊರತುಪಡಿಸಿದರೆ ಹೆಚ್ಚಾಗಿ ಅಹಿತಕರ ಘಟನೆಗಳ ವರದಿಯಾಗಿಲ್ಲ. ಚುನಾವಣೆ

ಕೇರಳದಲ್ಲಿ ಬಿರುಸಿನ ಮತದಾನ: ದೇವರನಾಡು ಕೇರಳದಲ್ಲಿ ಎಲ್ಲಾ 140 ಕ್ಷೇತ್ರಗಳಲ್ಲಿ ಶೇ.77ರಷ್ಟು ಬಿರುಸಿನ ಮತದಾನ ನಡೆದಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್, ವಿಪಕ್ಷ ನಾಯಕ ವಿ.ಡಿ. ಸತೀಸನ್, ಕೇಂದ್ರ ಸಚಿವ ಸುರೇಶ್ ಗೋಪಿ, ಕೆಪಿಸಿಸಿ ಅಧ್ಯಕ್ಷ ಸನ್ನಿ ಜೋಸೆಫ್, ಕಾಂಗ್ರೆಸ್ ಸಂಸದ ಶಶಿ ತರೂರ್, ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್, ನಟ ಮೋಹನ್‌ಲಾಲ್ ಸೇರಿ ಪ್ರಮುಖರು ಮತ ಚಲಾಯಿಸಿದರು.

ಇದನ್ನೂ ಓದಿ: ಮಹಿಳಾ ಸಬಲೀಕರಣಕ್ಕೆ ₹1.3 ಲಕ್ಷ ಕೋಟಿ: ಸಚಿವ ಚಲುವರಾಯಸ್ವಾಮಿ

ಅಸ್ಸಾಂನಲ್ಲೂ ಬಿರುಸು:

ಈಶಾನ್ಯ ರಾಜ್ಯ ಆಸಾಂನಲ್ಲಿಯೂ ಶೇ.85ರಷ್ಟು ಭರ್ಜರಿ ಮತದಾನ ಅಗಿದೆ. ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ತಮ್ಮ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರೊಂದಿಗೆ ಆಗಮಿಸಿ ಮತ ಚಲಾಯಿಸಿದರು. ಕಾಂಗ್ರೆಸ್ ಅಧ್ಯಕ್ಷ ಗೌರವ್ ಗೊಗೋಯ್ ತಮ್ಮ ತಾಯಿಯೊಂದಿಗೆ ಮತ ಹಾಕಿದರು. ಇಲ್ಲಿ ಕಾಂಗ್ರೆಸ್- ಬಿಜೆಪಿ ನಡುವಿನ ಪೈಪೋಟಿಯಲ್ಲಿ ಜನರು 722 ಅಭ್ಯರ್ಥಿಗಳ ಭವಿಷ್ಯವನ್ನು ಗುರುವಾರ ಬರೆದಿದ್ದಾರೆ.

ಪುದುಚೇರಿಯಲ್ಲಿ ಅತಿ ಗರಿಷ್ಠ:

ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಅತಿ ಗರಿಷ್ಠ ಶೇ.89 ಮತದಾನವಾಗಿದೆ. ಮತಗಟ್ಟೆಯೊಂದರಲ್ಲಿ ರೋಬೋಟ್ ಮೂಲಕ ಮತದಾರರನ್ನು ಸ್ವಾಗತಿಸಿದ್ದು ಗಮನ ಸೆಳೆಯಿತು. ಸಿಎಂ ರಂಗಸ್ವಾಮಿ, ಪುದುಚೇರಿ ಗೃಹ ಸಚಿವ ಎ. ನಮಸ್ಸಿವಾಯಂ ಮತ್ತು ಕಾಂಗ್ರೆಸ್ ನಾಯಕ ನಾರಾಯಣಸಾಮಿ ಮತ ಹಾಕಿದರು. ಬೈಕಲ್ಲಿ ಬಂದು ಪುದುಚೇರಿ ಸಿಎಂ ಮತ ಹಾಕಿದರು.

ಇದನ್ನೂ ನೋಡಿ: ಭಾವನೆಗಳ ಆಳವನ್ನು ಸ್ಪರ್ಶಿಸುವ ಮಿಥಿಲೆಯ ಮಾವಿನ ಮರ – ವಿನಯಾ ಒಕ್ಕುಂದ Janashakthi Media

Donate Janashakthi Media

Leave a Reply

Your email address will not be published. Required fields are marked *