ವಿಷಯ : ನೈಜ ಸಾಮಾಜಿಕ ನ್ಯಾಯಕ್ಕಾಗಿ, ಗುತ್ತಿಗೆ ಪದ್ದತಿ ಹಾಗು ಖಾಯಮಾತಿ ನಿರ್ಬಂಧ ತೊಲಗಿಸಲು ಸಿಪಿಐ(ಎಂ) ಒತ್ತಾಯಿಸುತ್ತದೆ ಎಂದು ಕಾರ್ಯದರ್ಶಿ ಯು.ಬಸವರಾಜ ತಿಳಿಸಿದ್ದಾರೆ.
ರಾಜ್ಯ ಸರ್ಕಾರ, ಸರಕಾರದ ಗುತ್ತಿಗೆ ಆಧಾರಿತ ನೌಕರಿಯಲ್ಲಿ ಮೀಸಲಾತಿ ಪ್ರಕಟಿಸಿರುವುದನ್ನು ಸಿಪಿಐ (ಎಂ) ಸ್ವಾಗತಿಸುತ್ತದೆ. ಆದರೆ ಅದು ಅಷ್ಠಕ್ಕೆ ಸೀಮಿತಗೊಳಿಸಿರುವುದು ಸರಿಯಲ್ಲ . ಅದನ್ನು ಖಾಸಗೀ ರಂಗಕ್ಕೂ ವಿಸ್ತರಿಸುವಂತೆ ಒತ್ತಾಯಿಸಿದೆ.
ಅದೇ ಸಂದರ್ಭದಲ್ಲಿ, ಮತ್ತೊಂದು ಕಡೆ, ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವವರಿಗೆ ಖಾಯಮಾತಿ ನಿರ್ಬಂಧ ಹೇರಿಕೆಗೆ ಕ್ರಮ ವಹಿಸಿರುವುದು ಅಕ್ಷಮ್ಯ ಮತ್ತು ಸಾಮಾಜಿಕ ನ್ಯಾಯದ ವಿರುದ್ಧವಾಗಿದೆ ಎಂದು ಬಲವಾಗಿ ಖಂಡಿಸಿದೆ.
ಇದನ್ನು ಓದಿ : Fact Check: ಜೂನ್ 05 ರಂದು ರಾಹುಲ್ ಗಾಂಧಿ ಥೈಲ್ಯಾಂಡ್ ಪ್ರವಾಸ ನಿಜವೆ? fact-check
ಸರಕಾರಿ ಹುದ್ದೆಗಳನ್ನು ಶಾಶ್ವತವಾಗಿ ಒಳ ಗುತ್ತಿಗೆ ಹಾಗು ಹೊರ ಗುತ್ತಿಗೆ, ಅತಿಥಿ ಮುಂತಾದ ಹೆಸರುಗಳಲ್ಲಿ ಮುಂದುವರೆಸುತ್ತಾ ಬಹುತೇಕ ದುರ್ಬಲ ಜನ ಸಮುದಾಯಗಳ ನಿರುದ್ಯೋಗಿ ಯುವಜನರನ್ನು ತೀವ್ರ ಶೋಷಣೆಗೀಡು ಮಾಡುವ ನಿಲುಮೆಯು ತೀವ್ರ ಖಂಡನಾರ್ಹವಾಗಿದೆ ಎಂದಿದ್ದಾರೆ.
ಇದು ಒಟ್ಟು ಸರ್ಕಾರಿ ಉದ್ಯೋಗಗಳ ಶೇ 50ಕ್ಕೂ ಅಧಿಕವಾದರೆ,ಖಾಸಗೀ ರಂಗದಲ್ಲಿ ಶೇ 85 ಕ್ಕೂ ಅಧಿಕವಾಗಿದೆ. ಸರ್ಕಾರದ ಈ ನೀತಿಯು ಖಾಸಗೀ ರಂಗದ ಉದ್ಯಮದ ತೀವ್ರ ಶೋಷಣೆಗೆ ಕುಮ್ಮಕ್ಕಾಗಿದೆ ಎಂದು ಆರೋಪಿಸಿದ್ದಾರೆ.
ಆದ್ದರಿಂದ, ಒಟ್ಟಾರೆ ಸಾರ್ವಜನಿಕ ಹಾಗೂ ಖಾಸಗೀ ರಂಗದಲ್ಲಿ ಗುತ್ತಿಗೆ ಪದ್ಧತಿಯನ್ನು ಮತ್ತು ಖಾಯಮಾತಿಗೆ ಇರುವ ನಿರ್ಬಂಧಗಳನ್ನು ರದ್ದುಗೊಳಿಸಿ, ಅಲ್ಲಿ ಹುದ್ದೆಗಳನ್ನು ಭರ್ತಿ ಮಾಡಿ ನಿಜ ಸಾಮಾಜಿಕ ನ್ಯಾಯಕ್ಕೆ ಆಗತ್ಯ ಕ್ರಮವಹಿಸಲು ಸಿಪಿಐ (ಎಂ ) ಬಲವಾಗಿ ಒತ್ತಾಯಿಸುತ್ತದೆ ಕಾರ್ಯದರ್ಶಿ ಯು.ಬಸವರಾಜ ತಿಳಿಸಿದ್ದಾರೆ.
ಇದನ್ನು ನೋಡಿ : ಬಿಜೆಪಿ ನಿದ್ದೆ ಗೆಡಿಸಿದ ಸಟ್ಟಾ ಬಜಾರ್ : INDIA ಮತ್ತು NDA ನಡುವೆ ತೀವ್ರ ಪೈಪೋಟಿ Janashakthi Media