ಹೊಸದಿಲ್ಲಿ | ಗಲ್ಲಿಗೇರಿಸಿದರೂ ಸಿದ್ಧ – ವೇಣುಗೋಪಾಲ್ ಭಾರೀ ಸವಾಲು

ಹೊಸದಿಲ್ಲಿ : ಜೀವಮಾನವಿಡೀ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧಿಸಬೇಕೆಂದು ಮತ್ತು  ರಾಹುಲ್ ಗಾಂಧಿಯವರ  ಲೋಕಸಭಾ ಸದಸ್ಯತ್ವವನ್ನು ರದ್ದುಗೊಳಿಸಬೇಕೆಂದು ಬಿಜೆಪಿ ಪ್ರಸ್ತಾವನೆಗಳಿಗೆ ಕಾಂಗ್ರೆಸ್ ಪ್ರತಿಕ್ರಿಯಿಸಿದೆ.

ಯಾವುದೇ ಪ್ರಸ್ತಾವನೆಗಳ ಬಗ್ಗೆ ನಮಗೆ ಚಿಂತೆ ಇಲ್ಲ. ನೀವು ನಮ್ಮನ್ನು ಗಲ್ಲಿಗೇರಿಸಲು ಬಯಸಿದರೆ, ನಾವು ಅದಕ್ಕೂ ಸಿದ್ಧರಿದ್ದೇವೆ” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಸದನದಲ್ಲಿ ರಾಹುಲ್ ಗಾಂಧಿ ಅವರ ಕೆಲವು ಹೇಳಿಕೆಗಳನ್ನು ದಾಖಲೆಗಳಿಂದ ಕೈಬಿಟ್ಟಿದ್ದಕ್ಕಾಗಿ ವೇಣುಗೋಪಾಲ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ನಮಗೆ ಸಭಾಪತಿಯಿಂದ ನ್ಯಾಯ ಸಿಗುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ : ಬೆಂಗಳೂರು| ‘ಕರಾವಳಿಯ ರಕ್ತ-ಕಣ್ಣೀರು’ ಪುಸ್ತಕ ಬಿಡುಗಡೆ ಫೆಬ್ರವರಿ 15ರಂದು

ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಥೈಲ್ಯಾಂಡ್, ಕಾಂಬೋಡಿಯಾ, ವಿಯೆಟ್ನಾಂ ಮತ್ತು ಯುಎಸ್‌ನಂತಹ ದೇಶಗಳಿಗೆ ಪ್ರಯಾಣಿಸಿದ್ದಾರೆ ಮತ್ತು ರಾಹುಲ್ ಗಾಂಧಿ ಸೊರೊಸ್ ಫೌಂಡೇಶನ್, ಫೋರ್ಡ್ ಫೌಂಡೇಶನ್ ಮತ್ತು ಯುಎಸ್‌ಎಐಡಿ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಭಾರತೀಯ ಜನತಾ ಪಕ್ಷದ ಸಂಸದ ನಿಶಿಕಾಂತ್ ದುಬೆ ಅವರು ನೋಟಿಸ್‌ನಲ್ಲಿ ಉಲ್ಲೇಖಿಸಿದ್ದಾರೆ.

ರಾಹುಲ್ ಜಿ ಏನು ಹೇಳಿದ್ದರೋ ಅದನ್ನು ದಾಖಲೆಗಳಿಂದ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ನಿರ್ಮಲಾ ಸೀತಾರಾಮನ್ ಏನು ಹೇಳಿದ್ದರೋ, ಅದೇ ಹೇಳಿಕೆಗಳನ್ನು ದಾಖಲೆಗಳಲ್ಲಿ ಸೇರಿಸಲಾಗಿದೆ. ಸರ್ಕಾರವು ದ್ವಿಮುಖ ನೀತಿಯನ್ನು ಹೊಂದಿದೆ. ಈ ಸಂಸತ್ತು ಸರ್ಕಾರಕ್ಕಾಗಿ ನಡೆಯುತ್ತಿದೆ, ವಿರೋಧ ಪಕ್ಷಕ್ಕಾಗಿ ಅಲ್ಲ

ರಾಹುಲ್ ಗಾಂಧಿಯವರ ಹೇಳಿಕೆಗಳನ್ನು ತೆಗೆದುಹಾಕುವ ಬಗ್ಗೆ ಮಾತನಾಡಿದ ವೇಣುಗೋಪಾಲ್, ವಿರೋಧ ಪಕ್ಷದ ಸದಸ್ಯರಿಗೆ ಮಾತನಾಡಲು ಅವಕಾಶ ನೀಡದಂತೆ ಸರ್ಕಾರವು ಸಭಾಪತಿಯ ಮೇಲೆ ಒತ್ತಡ ಹೇರುತ್ತಿದೆ ಎಂದು ಹೇಳಿದರು.

ಇದನ್ನೂ ನೋಡಿ : “ಮ್ಯಾಗ್ನೆಟ್ ಯೋಜನೆಗೆ ವಿರೋಧ – ಆಂದೋಲನವಾಗುತ್ತಿರುವ ಸರ್ಕಾರಿ ಶಾಲೆ ಉಳಿಸಿ ಹೋರಾಟ” Janashakthi Media

Donate Janashakthi Media

Leave a Reply

Your email address will not be published. Required fields are marked *