ಬೆಂಗಳೂರು: 18ನೇ ಆವೃತ್ತಿಯ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ತಂಡ ಸ್ಥಿರ ಪ್ರದರ್ಶನ ನೀಡುತ್ತಿದ್ದೂ, ತನ್ನ ತವರಿನಲ್ಲಿ ಸತತ ಪಂದ್ಯಗಳನ್ನು ಸೋತಿದೆ. ಆದರೆ ತವರಿನಾಚೆ ಆಡಿದ ಎಲ್ಲ ಪಂದ್ಯಗಳನ್ನು ಗೆದ್ದಿದೆ. ಈ ಹಿಂದಿನ ಐಪಿಎಲ್‌ನಲ್ಲಿರುವ ತಂಡಕ್ಕಿಂತ ಈ ಬಾರಿಯ ತಂಡ ಬಲಿಷ್ಠವಾಗಿದೆ. ಐಪಿಎಲ್
ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸ್ಟಾರ್ ಆಟಗಾರರು ಸ್ಥಿರ ಪ್ರದರ್ಶನ ನೀಡುತ್ತಿದ್ದು ಜಯದಲ್ಲಿ ತಮ್ಮದೇ ಕಾಣಿಕೆ ನೀಡುತ್ತಿದ್ದಾರೆ. ಈಗಾಗಲೇ ಆಡಿರುವ 8 ಪಂದ್ಯಗಳಲ್ಲಿ 5 ಜಯ ಸಾಧಿಸಿರುವ ಬೆಂಗಳೂರು ತಂಡ ಪ್ಲೇ ಆಫ್‌ಗೆ ಹತ್ತಿರವಾಗಿದೆ. ಆದರೆ ಪ್ಲೇ ಆಫ್‌ಗೆ ಅರ್ಹತೆ ಪಡೆಯಲು ಇನ್ನು ಎಷ್ಟು ಪಂದ್ಯಗಳನ್ನು ಗೆಲ್ಲಬೇಕು ಎಂಬುದಕ್ಕೆ ವರದಿ ಇಲ್ಲಿದೆ. ಐಪಿಎಲ್
ನ್ಯೂ ಚಂಡೀಗಡ್ ಅಂಗಳದಲ್ಲಿ ಆರ್‌ಸಿಬಿ (RCB), ಪಂಜಾಬ್ (PBKS) ವಿರುದ್ಧ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ಬೆಂಗಳೂರು ತಂಡ, ಅರ್ಹ ಜಯ ಸಾಧಿಸಿದೆ. ಇಷ್ಟೇ ಅಲ್ಲದೆ ರನ್ ರೇಟ್‌ನಲ್ಲಿ ಪಂಜಾಬ್‌ಗಿಂತ ಬಲಿಷ್ಠವಾಗಿದ್ದರಿಂದ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಈ ಬಾರಿ ಆರ್‌ಸಿಬಿ ಪ್ಲೇ ಆಫ್‌ಗೆ ನಿರಾಯಾಸವಾಗಿ ತಲುಪಲು ಏನೆಲ್ಲಾ ಮಾಡಬೇಕು ಎಂಬ ಪ್ರಶ್ನೆಗಳು ಎದ್ದಿವೆ.
ಇದನ್ನೂ ಓದಿ: ಇಟಲಿ ಜೈಲಿನಲ್ಲಿ ಪ್ರಥಮ ಸೆಕ್ಸ್ ರೂಮ್ ಆರಂಭ: ಬಂಧಿತರಿಗೆ ಸಂಗಾತಿಯೊಂದಿಗೆ ಖಾಸಗಿ ಭೇಟಿಗೆ ಅವಕಾಶ
ತವರಿನಲ್ಲಿ ಆರ್ಭಟ
ತವರಿನ ಆಚೆ ಮೈ ಚೆಳಿ ಬಿಟ್ಟು ಆಡುವ ಬೆಂಗಳೂರು ತಂಡದ ಆಟಗಾರರು ತವರಿನಲ್ಲೂ ಇಂತಹದ್ದೇ ಪ್ರದರ್ಶನ ನೀಡಬೇಕಿದೆ. ತವರಿನಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಟಾಪ್ ಆರ್ಡರ್ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದು ತಂಡದ ಚಿಂತೆಯನ್ನು ಹೆಚ್ಚಿಸಿದೆ. ಆದರೆ ತವರಿನಾಚೆ ಈ ಸ್ಟಾರ್ ಪ್ಲೇಯರ್‌ಗಳ ಪ್ರದರ್ಶನ ಅಮೋಘವಾಗಿದೆ. ಆರ್‌ಸಿಬಿ ತವರಿನಲ್ಲಿ ಇನ್ನು ನಾಲ್ಕು ಪಂದ್ಯಗಳನ್ನು ಆಡಬೇಕಿದೆ. ತವರಿನ ಕೋಟೆಯಲ್ಲಿ ರಾಜನಂತೆ ಮೆರೆಯಲು ಬೇಕಿರುವ ತಯಾರಿಯನ್ನು ಆರ್‌ಸಿಬಿ ಮಾಡಿಕೊಳ್ಳುವುದು ಅನಿವಾರ್ಯ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ಆರ್‌ಸಿಬಿ ಗೆಲುವಿನ ಖಾತೆಯನ್ನು ಓಪನ್ ಮಾಡಬೇಕಿದೆ. ಆರ್‌ಸಿಬಿ ಮುಂದಿನ ಪಂದ್ಯವನ್ನು ತವರು ಅಂಗಳದಲ್ಲೇ ರಾಜಸ್ಥಾನ ರಾಯಲ್ಸ್ ವಿರುದ್ಧ ಆಡಲಿದ್ದು, ಈ ಪಂದ್ಯದಲ್ಲಿ ಜಯ ಸಾಧಿಸುವ ಅನಿವಾರ್ಯತೆ ಇದೆ. ಇನ್ನು ಟಾಸ್ ಸೋತರೂ ಸಹ ಆರ್‌ಸಿಬಿ ಬ್ಯಾಟರ್ಸ್ ಕೊಂಚ ತಾಳ್ಮೆಯಿಂದ ಬ್ಯಾಟಿಂಗ್ ನಡೆಸಿ, ವಿಕೆಟ್ ಕಾಯ್ದುಕೊಂಡು ಬ್ಯಾಟ್ ಮಾಡಬೇಕಿದೆ. ಅಂದಾಗ ಮಾತ್ರ ಗೆಲುವಿನ ಆಸೆ ಫಲಿಸುತ್ತದೆ.
ತವರಿನಲ್ಲಿ ಬೆಂಗಳೂರು ತಂಡಕ್ಕೆ ಸಾಲು ಸಾಲು ಸವಾಲುಗಳು ಇವೆ. ಚೆನ್ನೈ, ಸನ್‌ರೈಸರ್ಸ್ ಹೈದರಾಬಾದ್, ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ವಿರುದ್ಧ ಆರ್‌ಸಿಬಿ ತವರಿನಲ್ಲಿ ಕಾದಾಟ ನಡೆಸಲಿದೆ. ಈ ಪಂದ್ಯ ರೋಚಕತೆಯಿಂದ ಕೂಡಿರಲಿದೆ. ಕಾರಣ ಆ ಹಂತಕ್ಕೆ ಆಗಲೇ ಪ್ಲೇ ಆಫ್ ಲೆಕ್ಕಾಚಾರ ಚುರುಕು ಪಡೆದಿರುತ್ತದೆ.
ಬರೀ ಪ್ಲೇ ಆಫ್ ಅಲ್ಲ ಈ ಸ್ಥಾನದ ಮೇಲೆ ಕಣ್ಣಿಡಬೇಕು?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸದ್ಯದ ಪರ್ಫಾಮೆನ್ಸ್ ನೋಡಿದ್ರೆ, ಪ್ಲೇ ಆಫ್‌ಗೆ ಹೋಗುವುದು ಪಕ್ಕಾ ಎಂದು ಕಾಣಿಸುತ್ತಿದೆ. ಆದರೆ ಬೆಂಗಳೂರು ತಂಡದ ಪ್ಲೇ ಆಫ್ ರೀಚ್ ಆಗುವುದುನ್ನು ಟಾರ್ಗೆಟ್ ಮಾಡುವುದನ್ನು ಬಿಟ್ಟು, ಅಗ್ರ ಎರಡು ಸ್ಥಾನದ ಮೇಲೆ ಚಿತ್ತ ನೆಡಬೇಕಿದೆ. ಅಂದಾಗ ಫೈನಲ್ ಪ್ರವೇಶಿಸುವ ಚಾನ್ಸ್ ಹೆಚ್ಚಾಗಿರುತ್ತದೆ.
ಐಪಿಎಲ್‌ನ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ತಲುಪುವ ತಂಡಗಳು ಮೊದಲ ಕ್ವಾಲಿಫೈಯರ್‌ನಲ್ಲಿ ಮುಖಾಮುಖಿ ಆಗುತ್ತವೆ. ಈ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶಿಸುತ್ತದೆ. ಸೋತ ತಂಡಕ್ಕೆ ಮತ್ತೊಂದು ಚಾನ್ಸ್ ಇರುತ್ತದೆ. ಎಲಿಮಿನೇಟರ್‌ನ್ಲಿ ಜಯ ಸಾಧಿಸಿರುವ ತಂಡದ ವಿರುದ್ಧ ಎರಡನೇ ಕ್ವಾಲಿಫೈರ್ ಆಡುವ ಅವಕಾಶವನ್ನು ಪಡೆಯುತ್ತದೆ. ಹೀಗಾಗಿ ಆರ್‌ಸಿಬಿ ಮೊದಲೆರೆಡು ಸ್ಥಾನಗಳಲ್ಲಿ ಲೀಗ್ ಹಂತವನ್ನು ಮುಗಿಸುವ ಕನಸು ಕಾಣುತ್ತಿದೆ.
ಆರರಲ್ಲಿ ಐದು
ಆರ್‌ಸಿಬಿ ಮುಂದಿನ ದಿನಗಳಲ್ಲಿ ಇನ್ನು ಆರು ಪಂದ್ಯಗಳನ್ನು ಆಡಲಿದೆ. ಹಾಫ್ ವೇ ಮಾರ್ಕ್‌ನಲ್ಲಿ ಆಡಿದ 8 ಪಂದ್ಯಗಳಲ್ಲಿ 5 ಜಯ ಸಾಧಿಸಿರುವ ಆರ್‌ಸಿಬಿ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳಲ್ಲಿ ಕುಳಿತುಕೊಳ್ಳಲು ಮುಂದಿನ ಆರು ಪಂದ್ಯಗಳಲ್ಲಿ ಕನಿಷ್ಠ 4 ರಲ್ಲಿ ಗೆಲ್ಲುವುದು ಅನಿವಾರ್ಯವಾಗಿದೆ. ಈ ವೇಳೆ 2 ತವರಿನಾಚೆ ಪಂದ್ಯಗಳು ನಡೆದರೆ, ನಾಲ್ಕು ಪಂದ್ಯಗಳು ತವರಿನಲ್ಲಿ ನಡೆಯಲಿವೆ.
ಆರ್‌ಸಿಬಿ ತವರಿನಲ್ಲೂ ಗೆಲುವಿನ ರಣ ತಂತ್ರವನ್ನು ಹೆಣೆದುಕೊಂಡು, ಸಾಧ್ಯವಾದಷ್ಟು ಬೆಂಗಳೂರಿನಲ್ಲಿ ಪಂದ್ಯಗಳನ್ನು ಗೆದ್ದಾಗ ಮಾತ್ರ ಅಂಕ ಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳಲ್ಲಿ ನಿಲ್ಲಲು ಸಾಧ್ಯ. ಸಾಮಾನ್ಯವಾಗಿ ಐಪಿಎಲ್‌ನಲ್ಲಿ 18 ಅಂಕಗಳನ್ನು ಗಳಿಸಿದ ತಂಡಗಳ ಮುಂದೆ ಕ್ಯೂ (Q) ಎಂದು ಬರುತ್ತದೆ. ಆದರೆ 20 ಅಂಕ ಕಲೆ ಹಾಕಿದರೆ ಅಗ್ರ ಸ್ಥಾನ ಪಡೆಯಬಹುದಾಗಿದೆ.
ಮಿಡ್ಲ್ ಆರ್ಡರ್ ಬ್ಯಾಟರ್‌ಗಳು ಲಯಕ್ಕೆ ಮರಳಬೇಕಿದೆ
ಆರ್‌ಸಿಬಿ ಈಗ ಗೆದ್ದಿರುವ ಐದು ಪಂದ್ಯಗಳಲ್ಲಿ ಟಾಪ್ ಆರ್ಡರ್ ಬ್ಯಾಟರ್‌ಗಳೇ ಹೆಚ್ಚು ಮಿಂಚಿದ್ದಾರೆ. ಆದರೆ ತವರಿನಲ್ಲಿ ಒತ್ತಡದ ಸನ್ನಿವೇಶದಲ್ಲಿ ಮಿಡ್ಲ್ ಆರ್ಡರ್ ಬ್ಯಾಟರ್‌ಗಳು ತಮ್ಮ ಆಟವನ್ನು ಆಡುವಲ್ಲಿ ವಿಫಲರಾಗಿದ್ದಾರೆ. ಆರ್‌ಸಿಬಿ ಅಗ್ರ ಎರಡು ಸ್ಥಾನಗಳಲ್ಲಿ ಕುಳಿತುಕೊಳ್ಳಬೇಕು ಎಂದರೆ ಮಿಡ್ಲ್ ಅರ್ಡರ್ ಬ್ಯಾಟರ್‌ಗಳು ಸಹ ಪಾರ್ಟಿಗೆ ಬಂದ್ರೆ ಉತ್ತಮವಾಗುತ್ತದೆ.
ಈ ಬಾರಿಯ ಆರ್‌ಸಿಬಿ ಬ್ಯಾಟಿಂಗ್ ಜೊತೆಗೆ ಬೌಲಿಂಗ್‌ನಲ್ಲೂ ಸ್ಟಾರ್ ಬೌಲರ್‌ಗಳು ಇದ್ದಾರೆ. ತವರಿನಲ್ಲಿ ನಡೆಯುವ ಪಂದ್ಯಗಳಲ್ಲಿ ಆರ್‌ಸಿಬಿ ಸ್ಟಾರ್ ಬೌಲರ್‌ಗಳು ಬಿಗುವಿನ ದಾಳಿ ನಡೆಸುವುದು ಅವಶ್ಯಕ. ಅಂದಾಗ ಗೆಲುವಿನ ಕನಸು ನನಸಾಗುತ್ತದೆ.
ಟೂರ್ನಿಯಲ್ಲಿ ಆರ್‌ಸಿಬಿ ಆಟಗಾರರ ಸಾಧನೆ
18ನೇ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಆಟಗಾರರು ತಮ್ಮ ಸ್ಥಿರ ಪ್ರದರ್ಶನ ಮುಂದುವರೆಸಿದ್ದಾರೆ. ಎಂದಿನಂತೆ ವಿರಾಟ್ ಕೊಹ್ಲಿ (Virat Kohli) ಅತಿ ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ವಿರಾಟ್ ಆಡಿದ 8 ಪಂದ್ಯಗಳಲ್ಲಿ 64ರ ಸರಾಸರಿಯಲ್ಲಿ 322 ರನ್ ಸಿಡಿಸಿದ್ದಾರೆ. ರಜತ್ ಪಟಿದಾರ್ (221 ರನ್), ಫಿಲ್ ಸಾಲ್ಟ್ (213 ರನ್), ದೇವದತ್ ಪಡಿಕ್ಕಲ್ (180 ರನ್) ರನ್ ಕಲೆ ಹಾಕಿ ಭರವಸೆ ಮೂಡಿಸಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ವೇಗಿ ಜೋಶ್ ಹ್ಯಾಜಲ್‌ವುಡ್ ಆರ್‌ಸಿಬಿ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್. ಇವರು ಆಡಿದ 8 ಪಂದ್ಯಗಳಲ್ಲಿ 12 ವಿಕೆಟ್ ಸಾಧನೆ ಮಾಡಿದ್ದಾರೆ. ಇನ್ನು ಸ್ಪಿನ್ ಬೌಲರ್ ಕೃನಾಲ್ ಪಾಂಡ್ಯ (10 ವಿಕೆಟ್), ಸ್ವಿಂಗ್ ಸುಲ್ತಾನ್ ಭುವನೇಶ್ವರ್ ಕುಮಾರ್ (8 ವಿಕೆಟ್), ಯಶ್ ದಾಯಳ್ (7 ವಿಕೆಟ್) ವಿಕೆಟ್ ಬೇಟೆ ನಡೆಸುತ್ತಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಂದಿನ ಪಂದ್ಯಗಳು
ಏ. 24, ರಾಜಸ್ಥಾನ ರಾಯಲ್ಸ್, ಬೆಂಗಳೂರು, ಸಂಜೆ 7.30ಕ್ಕೆ
ಏ.27, ಡೆಲ್ಲಿ ಕ್ಯಾಪಿಟಲ್ಸ್, ದೆಹಲಿ, ಸಂಜೆ 7.30ಕ್ಕೆ
ಮೇ 3, ಚೆನ್ನೈ ಸೂಪರ್ ಕಿಂಗ್ಸ್, ಬೆಂಗಳೂರು, ಸಂಜೆ 7.30ಕ್ಕೆ
ಮೇ 9, ಲಕ್ನೋ ಸೂಪರ್ ಜೈಂಟ್ಸ್, ಲಕ್ನೋ, ಸಂಜೆ 7.30ಕ್ಕೆ
ಮೇ 13, ಸನ್‌ರೈಸರ್ಸ್ ಹೈದರಾಬಾದ್, ಬೆಂಗಳೂರು, ಸಂಜೆ 7.30ಕ್ಕೆ
ಮೇ 17, ಕೋಲ್ಕತ್ತಾ ನೈಟ್ ರೈಡರ್ಸ್, ಬೆಂಗಳೂರು, ಸಂಜೆ 7.30ಕ್ಕೆ
ಇದನ್ನೂ ನೋಡಿ: ಮಿಲ್ಲರ್ ಆಯೋಗದಿಂದ ಕಾಂತರಾಜ ಆಯೋಗದವರೆಗೆ: ಮೀಸಲಾತಿ, ಒಳ ಮೀಸಲಾತಿ ಪರವಾದ ದೀರ್ಘ ಪಯಣJanashakthi Media