ಅಮಾನತ್ತಾದ ಇಂಜಿನಿಯರ್ ಮರು ನೇಮಕಕ್ಕೆ 2.5 ಕೋಟಿ ರೂ. ಲಂಚ : ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ವಿರುದ್ಧ ಗಂಭೀರ ಆರೋಪ

ಡಿಕೇರಿ : ರಾಜ್ಯದಲ್ಲಿ 40 ಪಸೆಂಟ್ ಕಮಿಷನ್ ವ್ಯವಹಾರ ನಡೆಯುತ್ತಿದೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪದ ಬೆನ್ನಲ್ಲೇ ವಿರಾಜಪೇಟೆ ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ವಿರುದ್ಧ ಲಂಚದ ಆರೋಪ ಕೇಳಿಬಂದಿದೆ.

ಇಂದು ನಗರದಲ್ಲಿ ಕೊಡಗು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ರವಿ ಚಂಗಪ್ಪ ಮಾತನಾಡಿ, ಸಸ್ಪೆಂಡ್​​ ಆದ ಇಂಜಿನಿಯರ್​​ ಮರು ನೇಮಕಕ್ಕೆ 2.5 ಕೋಟಿ ಲಂಚ ಪಡೆಯಲಾಗಿದೆ ಎಂದು ಶಾಸಕ ಕೆ.ಜಿ.ಬೋಪಯ್ಯ ವಿರುದ್ಧ ಆರೋಪ ಮಾಡಿದ್ದಾರೆ. ಭ್ರಷ್ಟಾಚಾರ ಆರೋಪದಡಿ ಸಸ್ಪೆಂಡ್ ಆಗಿದ್ದ ಇಂಜಿನಿಯರ್ ಶ್ರೀಕಂಠಯ್ಯ ಮರು ನೇಮಕಕ್ಕೆ ಸಚಿವರಾಗಿದ್ದಾಗ ಕೆ.ಎಸ್. ಈಶ್ವರಪ್ಪಗೆ ಬೋಪಯ್ಯ ಪತ್ರ ಬರೆದಿದ್ದರು ಎಂದು ಆರೋಪಿಸಿದ್ದಾರೆ. 2012ರ ಅಕ್ಟೊಬರ್18 ರಂದು ಗುತ್ತಿಗೆದಾರರಿಂದ ಶ್ರೀಕಂಠಯ್ಯ ಲಂಚ ಸ್ವೀಕರಿಸುವಾಗ ರೇಡ್​ ಹ್ಯಾಂಡ್​ ಆಗಿ ಸಿಕ್ಕಿಕೊಂಡಿದ್ದರು. ಎಸಿಬಿ ಅಧಿಕಾರಿಗಳ ದಾಳಿ ಬಳಿಕ ಶ್ರೀಕಂಠಯ್ಯ ಅವರನ್ನು ಅಮಾನತು ಮಾಡಲಾಗಿತ್ತು ಎಂದು ಹೇಳಿದ್ದಾರೆ.

ಇನ್ನೂ ಜಿಲ್ಲೆಯಲ್ಲಿ ಪ್ರತಿ ಕಾಮಗಾರಿಗೆ ಶೇ 40ರ ಕಮಿಷನ್ ಪಡೆದುಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಕಮಿಷನ್ ದಂದೆ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಶಾಸಕ ಕೆ.ಜಿ.ಬೋಪಯ್ಯ ವಿರುದ್ಧ ಗುತ್ತಿಗೆದಾರರ ಸಂಘದ ಅಧ್ಯಕ್ಷ ರವಿ ಚಂಗಪ್ಪ ಗಂಭೀರ ಆರೋಪ ಮಾಡಿದ್ದಾರೆ.  ಸರಕಾರದ ಮಂತ್ರಿಗಳು ಮತ್ತು ಬಿಜೆಪಿ ಶಾಸಕರ ಹಗರಣಗಳು ಒಂದೊಂದಾಗಿ ಹೊರ ಬರುತ್ತಿದ್ದೆ ಬಿಜೆಪಿ ಹೈ ಕಮಾಂಡ್‌ಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

Donate Janashakthi Media

Leave a Reply

Your email address will not be published. Required fields are marked *