ಬಡವರ ಅನ್ನಕ್ಕೆ ಕನ್ನಹಾಕಿ ಅಕ್ರಮ ಅಕ್ಕಿ ಸಾಗಾಣಿಕೆ ಮಾಡುತ್ತಿರುವ ಲೂಟಿಕೋರ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಲು ಜನವಾದಿ ಮಹಿಳಾ ಸಂಘಟನೆಯ ಒತ್ತಾಯ

ಬೆಂಗಳೂರು : ಪಡಿತರ ಸಾಗಣೆಯಲ್ಲಿ ಭಾರಿ ಅಕ್ರಮ‌ ನಡೆದುದನ್ನು ಸಿ.ಏ.ಜಿ.ವರದಿ ಬಹಿರಂಗಪಡಿಸಿದೆ. ಬಡವರ ಹೊಟ್ಟೆಯ ಮೇಲೆ ಹೊಡೆಯುವ ಭ್ರಷ್ಟ ಅಧಿಕಾರಿಗಳ ಮೇಲೆ ತಕ್ಷಣವೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷರಾದ ಮೀನಾಕ್ಷಿ ಬಾಳಿ, ಪ್ರಧಾನ ಕಾರ್ಯದರ್ಶಿ ದೇವಿಯವರು ರಾಜ್ಯ ಸರಕಾರವನ್ನು  ಒತ್ತಾಯಿಸಿದ್ದಾರೆ.

ಆಧಾರ್ ಮತ್ತು ಪ್ಯಾನ್ ಲಿಂಕ್ ಗೆ ವಿಧಿಸಿದ ದಂಡ ವನ್ನು ತೆರಿಗೆ ಎಂದು ಭಾವಿಸಿ ದೀಪಾವಳಿಯ ಮುನ್ನಾದಿನ ಲಕ್ಷಾಂತರ‌ ಬಡಜನರ ಕಾರ್ಡ್ ರದ್ದು ಮಾಡಿ ಪಡಿತರ ನಿರಾಕರಿಸಿದ ಸರಕಾರ ಈಗ ಯಥೇಚ್ಛ ತಿಂದುಂಡು ಬೆಳೆದ ಈ ಭ್ರಷ್ಟಾಚಾರಿ ಅಧಿಕಾರಿಗಳ ಮೇಲೆ ಏನು ಕ್ರಮ ಕೈಗೊಳ್ಳುತ್ತದೆ ಎಂದು ಕೇಳಬಯಸುತ್ತೇವೆ.  ನಿರುದ್ಯೋಗ , ಆದಾಯ ಕುಸಿತ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸುತ್ತಿರುವ ಸಂದರ್ಭದಲ್ಲಿ ಬಡಜನರ ಹಸಿವು ನೀಗಿಸಿಕೊಳ್ಳುಲು ಅನ್ನ ಭಾಗ್ಯ ಯೋಜನೆಯನ್ನು ಸಮರ್ಪಕವಾಗಿ ರೂಪಿಸಬೇಕು ಎಂದಿದ್ದಾರೆ.

ಇದನ್ನೂ ಓದಿಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಚಾರ್ಜ್ ಶೀಟ್ ಫೈಲ್ ಆಗಿದ್ದರೂ ಆವರ ರಾಜೀನಾಮೆಯನ್ನು ಬಿಜೆಪಿಗರು ಕೇಳುತ್ತಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಹಸಿವಿನ ಸೂಚ್ಯಂಕದಲ್ಲಿ ಭಾರತ‌ 107 ಸ್ಥಾನಕ್ಕೆ ಬಂದಿದೆ . ಜನರ ಜೀವನ ನಿರ್ವಹಣೆ ವೆಚ್ಚ ಜಾಸ್ತಿಯಾಗಿದೆ. ಜನರು ತೊದರೆ ಅನುಭವಿಸುತ್ತಿದ್ದಾರೆ.
ಸರಕಾರದ ಸಂಬಳ, ಸವಲತ್ತುಗಳನ್ನು ಅನುಭವಿಸುವ ಅಧಿಕಾರಿಗಳಿಗೆ ಇವುಗಳ ಬಗ್ಗೆ ‌ಕನಿಷ್ಟ ಕಾಳಜಿ ಇಲ್ಲದ ಈ ದುರ್ವರ್ತನೆಯನ್ನು ಖಂಡಿಸಿದ್ದಾರೆ.

ಜನರು ಸಂಚರಿಸುವ ಆಟೋಗಳಲ್ಲಿ 18 ಟನ್ ಮತ್ತು ಇಂಡಿಕಾ ಕಾರಿನಲ್ಲಿ 24 ಟನ್ ಅಕ್ಕಿ ಸಾಗಾಣಿಕೆ ಮಾಡಲಾಗಿದೆ ಎಂಬ ದಾಖಲೆಗಳನ್ನು ಸಿ.ಏ.ಜಿ. ವರದಿ ಬಹಿರಂಗಗೊಳಿಸಿದೆ. 17 ಟ್ರಿಪ್ ಗಳಲ್ಲಿ ಒಟ್ಟು 401.4 ಟನ್ ಪಡಿತರ ಸಾಗಿಸಲಾಗಿದೆ ಎಂದು ದಾಖಲೆಗಳು ಸಿಕ್ಕಿವೆ, ಈ ಬಗ್ಗೆ ವಿವರಣೆ ಕೇಳಿದರೆ ಇಲಾಖೆ ಮೌನ ವಹಿಸಿದೆ ಎಂದುಸಿ.ಏ.ಜಿ. ವರದಿ ಬಹಿರಂಗವಾಗಿದೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಇದರ ಸಂಪೂರ್ಣ ತನಿಖೆಯಾಗಿ ತಪ್ಪಿತಸ್ಥರು ಯಾರೇ ಇದ್ದರೂ ಬಡವರ ಅನ್ನ ಕಸಿದ ಅನ್ನಘಾತಕರ ಮೇಲೆ ಕಠಿಣ ಕ್ರಮಕ್ಕೆ ಸರಕಾರ ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *