‘ಹಿಂದೂ – ಮುಸ್ಲಿಂ ಏಕ್ ಹೈ’ ವಿದ್ಯಾರ್ಥಿಗಳಿಂದ ಮೊಳಗಿದ ಘೋಷಣೆ

ಹಾವೇರಿ : ರಾಜ್ಯದ-ದೇಶದ ಅಭಿವೃದ್ಧಿಗಾಗಿ ಶಿಕ್ಷಣ ಸಂಸ್ಥೆಗಳು ಒಳ್ಳೆಯ ವಾತಾವರಣ ನಿರ್ಮಾಣ ಮಾಡುವ ಜಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಹಿಜಾಬ್ ಮತ್ತು ಕೇಸರಿ ಶಾಲುಗಳಿಂದ ಶೈಕ್ಷಣಿಕ ವಾತಾವರಣ ಹದಗೆಡುತ್ತಿದೆ. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಕೋಮು ಪ್ರಚೋದನೆ ಶಕ್ತಿಗಳಿಗೆ ಒಳಗಾಗಿ ತಮ್ಮತನವನ್ನು ಕಳೆದುಕೊಳ್ಳದೆ ಶೈಕ್ಷಣಿಕ ವಾತಾವರಣ ಹದಗೆಡಲು ಬಿಡಬಾರದೆಂದು ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿಯು ಇಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾವೇರಿ ನಗರದಲ್ಲಿ ರಾಷ್ಟ್ರಧ್ವಜ ಹಿಡಿದು ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ಮಾಡಿದೆ.

ವಿದ್ಯಾರ್ಥಿಗಳು ಕೋಮ ಪ್ರಚೋದನೆ ಶಕ್ತಿಗಳಿಗೆ ಒಳಗಾಗದೆ, ನಮ್ಮ ದೇಶದ ಹೆಮ್ಮೆಯ ಸಂಕೇತ ತ್ರಿವರ್ಣ ರಾಷ್ಟ್ರ ಧ್ವಜವನ್ನು ಹಿಡಿದು ನಾವೆಲ್ಲರೂ ಐಕ್ಯತೆಯಿಂದ ಹೋರಾಟ ಮಾಡವುದರ ಮೂಲಕ ಈ ರಾಜ್ಯದಲ್ಲಿ ಹಿಂದೂ-ಮುಸ್ಲಿಂ ಬಾಯಿ ಬಾಯಿ ಎಂಬ ಸಂದೇಶವನ್ನು ಸಾರುಬೇಕು. ಕುವೆಂಪು, ಭಗತ್ ಸಿಂಗ್, ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಕನಕದಾಸ, ಸಂತ ಶಿಶುನಾಳ ಶರೀಫರು, ಗುರು ಗೋವಿಂದ ಭಟ್ಟರ, ನಾರಾಯಣಗುರು, ಬಸವಣ್ಣ, ಅನೇಕ ಮಹಾನ್ ವ್ಯಕ್ತಿಗಳು ಸಾಧು-ಸಂತರ ದೇಶಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡುವುದರ ಮೂಲಕ ರಾಜ್ಯವನ್ನು ಐಕ್ಯತೆಯಿಂದ ಕಟ್ಟಿದ್ದಾರೆ. ಅನೇಕ ಮಹಾನ್ ವ್ಯಕ್ತಿಗಳ ತ್ಯಾಗ ಬಲಿದಾನದಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರಲ್ಲಿ ಹಿಂದೂ-ಮುಸ್ಲಿಂ, ಸಿಖ್ಖ್, ಜೈನ್, ಬೌದ್ಧರು ಎಂದು ಅಂದು ಗಲಾಟೆ ಮಾಡುತ್ತಿದ್ದರೆ, ದೇಶಕ್ಕೆ ಸ್ವಾತಂತ್ರ್ಯ ಸಿಗುತ್ತಿರಲಿಲ್ಲ ಎಂದು SFI ಜಿಲ್ಲಾ ಮುಖಂಡ ಬಸವರಾಜ ಬೋವಿ ತಿಳಿಸಿದರು.

ನಮ್ಮ ರಾಜ್ಯವನ್ನು ವಚನ ಸಾಹಿತ್ಯ, ಭಕ್ತಿ ಚಳುವಳಿಯಿಂದ ಅನೇಕ ವ್ಯಕ್ತಿಗಳ ಸಾಮಾಜಿಕ ಚಳವಳಿ ಮಾಡಿ ನಮ್ಮ ನಾಡನ್ನು ಕಟ್ಟಿದ್ದಾರೆ. ಈ ನಾಡು ದೇಶದಲ್ಲಿ ಸುಂದರವಾದ, ಸಮೃದ್ಧವಾದ, ಭವ್ಯ ಕರ್ನಾಟಕ ರಾಜ್ಯವನ್ನು ನಾವು ಎಲ್ಲಾರು ಒಂದೇ ಎಂಬ ಐಕ್ಯತೆಯ ಮಂತ್ರದಿಂದ ಕಟ್ಟಿ ಬೆಳೆಸಬೇಕಾಗಿದೆ.

ವಚನ ಚಳುವಳಿ, ಸೂಫಿಸಂತರ ಚಳುವಳಿ, ರಾಜಮಹಾರಾಜರು ಇದ್ದಾಗಲೂ ಈ ರೀತಿಯ ವಾತಾವರಣ ನಿರ್ಮಾಣ ಆಗಿರಲಿಲ್ಲ. ಕೋಮುವಾದಿ ಶಕ್ತಿಗಳು ತಮ್ಮ ಹಿಡನ್ ಅಜೆಂಡಾವನ್ನು ರಾಜಕೀಯವಾಗಿ ಪರಿವರ್ತನೆ ಮಾಡಿ, ಏನು ಅರಿಯದ ಶಿಕ್ಷಣ ಕಲಿಯುವ ಚಿಕ್ಕ ವಯಸ್ಸಿನ ಮಕ್ಕಳಲ್ಲಿ ಕೋಮುವಾದದ ವಿಷಬೀಜ ಬಿತ್ತುವ ಮೂಲಕ ರಾಜ್ಯವನ್ನು ಒಡೆದು ಆಳುವ ಕೆಲಸ ಸರಕಾರವೇ ಮಾಡುತ್ತಿರುವುದು ದುರಂತ. ರಾಜ್ಯದಲ್ಲಿ ಹೆಣ್ಣು ಮಕ್ಕಳು ಹಿಜಾಬ್ ಧರಿಸಿಕೊಂಡು ಬರುತ್ತಿರುವುದು ಇದು ಮೊದಲೇನಲ್ಲ. ಈಗಾಗಲೇ ಸುಮಾರು ವರ್ಷಗಳಿಂದ ಅವರು ಹಿಜಾಬ್ ಹಾಕಿಕೊಂಡು ಬರುತ್ತಿದ್ದಾರೆ. ಅಷ್ಟೇ ಅಲ್ಲ ಇತ್ತೀಚಿಗೆ ಹಿಂದು ಸಮಾಜದ ಹೆಣ್ಣು ಮಕ್ಕಳು ಸಹ ಮುಖಕ್ಕೆ ಮುಖ ವಸ್ತ್ರವನ್ನು ಧರಿಸಿ ಕೊಂಡು ಬರುತ್ತಿದ್ದಾರೆ.

ರಾಜ್ಯದ ಬಹುತೇಕ ಸರಕಾರಿ ಶಾಲಾ-ಕಾಲೇಜುಗಳಲ್ಲಿ ಮೂಲಭೂತ ಸೌಲಭ್ಯಗಳಾದ ಶಿಕ್ಷಕ-ಉಪನ್ಯಾಸಕರು ಇಲ್ಲ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಕೊಠಡಿಗಳಿಲ್ಲ, ಶೌಚಾಲಯಗಳಿಲ್ಲ, ಕುಡಿಯಲು ಶುದ್ಧವಾದ ನೀರು ಇಲ್ಲ, ಗ್ರಂಥಾಲಯಗಳಿಲ್ಲ. ಇವುಗಳ ಕಡೆ ಇವರಿಗೆ ವಿಷಯವೇ ಅಲ್ಲ. ಮೂಲಭೂತ ಸೌಲಭ್ಯಗಳ ಕೊರತೆಯಿಂದ ಅಲ್ಪಸಂಖ್ಯಾತ, ದಲಿತ, ಹಿಂದುಳಿದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿ ಸಮುದಾಯಕ್ಕೆ  ಸಮರ್ಪಕವಾಗಿ ಗುಣಮಟ್ಟದ ಶಿಕ್ಷಣ ಸಿಗದಿದ್ದರೂ ಪರವಾಗಿಲ್ಲ, ಮುಸ್ಲಿಂ ಹೆಣ್ಣು ಮಕ್ಕಳು ಹಿಜಾಬ್ ಹಾಕಿಕೊಂಡರೆ ಅದು ಇವರಿಗೆ ದೊಡ್ಡ ವಿಷಯ ಅಲ್ಲವೇ? ಇಂತಹ ಮನಸ್ಥಿತಿಯ ವ್ಯಕ್ತಿಗಳಿಂದ ಇಂದು ಶೈಕ್ಷಣಿಕ ವಾತಾವರಣ ಹದಗೆಡಲು ಕಾರಣವಾಗಿದೆ. ಅಂತಹ ಯಾವುದೇ ಶಕ್ತಿಗಳಿಗೆ ವಿದ್ಯಾರ್ಥಿಗಳು ಕಿವಿ ಕೊಡಬಾರದು ಅವರನ್ನು ಹಿಮ್ಮೆಟ್ಟಿಸಬೇಕು ಅದಕ್ಕೆ ಯಾವುದೇ ರೀತಿಯಿಂದ ಪ್ರಚೋದನೆಗೆ ಒಳಗಾಗದೆ ಅವರನ್ನು ಹಿಮ್ಮೆಟ್ಟಿಸಬೇಕು ಅದಕ್ಕಾಗಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಸಂಘಟನೆಯು ರಾಷ್ಟ್ರ ಧ್ವಜವನ್ನು ಹಿಡಿದು ಪ್ರತಿಭಟನೆ ಮಾಡುವುದರ ಮೂಲಕ ಕೋಮು ಶಕ್ತಿಗಳಿಗೆ ಎಚ್ಚರಿಕೆ ನೀಡಿದರು.

ಶಿಕ್ಷಣಕ್ಕೆ ಮೊದಲ ಆದ್ಯತೆ ಕೊಡೋಣ
ಶಾಂತಿ, ಸೌಹಾರ್ದತೆಯನ್ನು ಉಳಿಸೋಣ.
ಸಂವಿಧಾನದ ಜಾತ್ಯಾತೀತತೆ ಚಿರಾಯುವಾಗಲಿ.
ನಮ್ಮ ದೇಹ ಛಿದ್ರವಾದರೂ, ದೇಶ ಛಿಧ್ರವಾಗಲು ಬಿಡುವುದಿಲ್ಲ. ವಿದ್ಯಾರ್ಥಿಗಳ ಐಕ್ಯತೆ ಚಿರಾಯುವಾಗಲಿ
ಎಂದು ಘೋಷಣೆಗಳು ಮೊಳಗಿದವು.

ಈ ಸಂದರ್ಭದಲ್ಲಿ ಎಸ್ಎಫ್ಐ ಮುಖಂಡರಾದ ಯುವರಾಜ ಹಂಚಿನಮನಿ, ಹನುಮಂತ ಕೆಂಗೊಡ, ಪ್ರದೀಪ್ ಕುರಿಯವರ, ವಿರೂಪಾಕ್ಷಯ್ಯ ಹೀರೆಮಠ, ಶ್ರೀಕಾಂತ ತಳವಾರ, ಅನಿಲ ಹರಿಜನ, ಸೇರಿದಂತೆ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *