ರಸಗೊಬ್ಬರಕ್ಕಾಗಿ ರೈತರ ಪರದಾಟ : ಪಾದರಕ್ಷೆ, ಕಟ್ಟಿಗೆ, ಕಲ್ಲು ಇಟ್ಟು ಸರತಿಯಲ್ಲಿ ಕಾಯುತ್ತಿರುವ ರೈತರು

ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಗೊಬ್ಬರಕ್ಕಾಗಿ ರೈತರ ಪರದಾಟ ಮುಂದುವರಿದಿದೆ. ಗೊಬ್ಬರಕ್ಕಾಗಿ ದಿನಗಟ್ಟಲೇ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಬೆಳಗ್ಗೆ 6 ರಿಂದಲೇ  ಸರತಿಯಲ್ಲಿ‌ ತಮ್ಮ ಬದಲು ಪಾದರಕ್ಷೆ, ಕಲ್ಲು, ಕಟ್ಟಿಗೆ, ಇಟ್ಟಿಗೆ ಇಟ್ಟು ತುಸು ಸಮೀಪವೇ ಅಲ್ಲಲ್ಲಿ ಕೂತು ಕಾಯುತ್ತಿರುವ ದೃಶ್ಯಗಳು ಸಿಗುತ್ತವೆ. ಆ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿವೆ.

ಈ ದೃಶ್ಯಗಳು ಕಂಡು ಬಂದಿದ್ದು. ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ ಅವರ ತವರೂರು ಕುಕನೂರು ತಾಲೂಕಿನಲ್ಲಿ, ಯಲಬುರ್ಗಾ, ಕೊಪ್ಪಳ, ಕುಷ್ಟಗಿ, ಗಂಗಾವತಿ, ಕಾರಟಗಿ, ಕನಕಗಿರಿ ತಾಲ್ಲೂಕಗಳಲ್ಲಿಯೂ ರಸಗೊಬ್ಬರಕ್ಕಾಗಿ ರೈತರ ಪರದಾಟ ಕಂಡು ಬರುತ್ತಿದೆ.

ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ತುಂಗಭದ್ರಾ ಜಲಾಶಯದಿಂದ ಕಾಲುವೆಗೆ ನೀರು ಬಿಟ್ಟಿದ್ದು, ಗಂಗಾವತಿ ಭಾಗದಲ್ಲಿ ಭತ್ತ ನಾಟಿ ಆರಂಭವಾಗಿದೆ. ಹೀಗಾಗಿ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಿದೆ. ಇತ್ತ ಒಣ ಬೇಸಾಯ ಆಧಾರಿತ ಪ್ರದೇಶದಲ್ಲೂ ಬಿತ್ತನೆ ಚುರುಕು ಪಡೆದಿದೆ. ಬೇಡಿಕೆ ಅಧಿಕವಾಗಿದ್ದು ಪೂರೈಕೆ ಕೊರತೆಯಾಗಿದೆ. ಅಧಿಕಾರಿಗಳು ಕಾಗದದಲ್ಲಿ ಗೊಬ್ಬರ ಇದೆ ಎಂದು ತೋರಿಸುತ್ತಿದ್ದಾರೆ.

ಸಚಿವರು, ಶಾಸಕರು ಗೊಬ್ಬರ ಕೊರತೆಯಿಲ್ಲ ಎಂದು ಸಬೂಬು ನೀಡುತ್ತಿದ್ದಾರೆ. ವಾಸ್ತವವಾಗಿ ಗೊಬ್ಬರ ಸ್ಟಾಕ್ ಇಲ್ಲ. ಹೀಗಾಗಿ ರೈತರ ಪರದಾಟದ ಫೋಟೋ ತೆಗೆದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಜಿಲ್ಲಾ ಕೇಂದ್ರ ಕೊಪ್ಪಳದಲ್ಲೂ ಗೊಬ್ಬರಕ್ಕಾಗಿ ರೈತರು ಮುಗಿಬಿದ್ದಿದ್ದಾರೆ. ಟಿಎಪಿಎಸ್‌ಎಂಎಸ್ ಮುಂಭಾಗದಲ್ಲಿ ಕಿಲೋ ಮೀಟರ್​ಗಟ್ಟಲೇ ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಬೆಳಗ್ಗೆ ಅಂಗಡಿ ತೆರೆದ ಕೆಲ ಗಂಟೆಗಳಲ್ಲೇ ಯೂರಿಯಾ ಖಾಲಿಯಾಗುತ್ತಿದೆ. ಇಂದು(ಸೋಮವಾರ) ಗೊಬ್ಬರ ಬಂದಿದ್ದು, ಅಂಗಡಿ ತೆರೆಯುವ ಮುನ್ನವೇ ನೂರಾರು ರೈತರು ಜಮಾಯಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *