ಕಾನ್ಸುರ: 14 ವರ್ಷದ ಬಾಲಕಿಯೊಬ್ಬಳು ತನ್ನ ಅಜ್ಜ, ತಂದೆ ಮತ್ತು ಚಿಕ್ಕಪ್ಪನಿಂದಲೇ ಅತ್ಯಾಚಾರಕ್ಕೆ ಒಳಗಾಗಿ ಗರ್ಭೀಣಿಯಾಗಿರುವ ಆಘಾತಕಾರಿ ಘಟನೆ ಕಾನ್ಸುರದ ಔರೈಯಾದಲ್ಲಿ ನಡೆದಿದೆ.
4 ವರ್ಷದ ಬಾಲಕಿಯೊಬ್ಬಳು ತನ್ನ ಅಜ್ಜ ತಂದೆ ಮತ್ತು ಚಿಕ್ಕಪ್ಪ ಸುಮಾರು ಒಂದು ವರ್ಷದಿಂದ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿಸಿರುವುದಾಗಿ ಎಂದು ಆರೋಪಿಸಿದ್ದಾಳೆ. ಪೋಷಕರ ವಿವಾದದ ನಂತರ ನಾಲ್ಕು ವರ್ಷಗಳ ಹಿಂದೆ ಬಾಲಕಿಯನ್ನ ದೆಹಲಿಯಿಂದ ತನ್ನ ಗ್ರಾಮಕ್ಕೆ ಕರೆತಂದ ಬಳಿಕ ಬಾಲಕಿಯ ಅಗ್ನಿಪರೀಕ್ಷೆ ಪ್ರಾರಂಭವಾಯಿತು.
ಇದನ್ನೂ ಓದಿ : ಟೋಪಿ ಧರಿಸಿ ಶಾಲೆಗೆ ಬಂದಿದ್ದಕ್ಕೆ 6ನೇ ತರಗತಿ ವಿದ್ಯಾರ್ಥಿಯನ್ನು ಥಳಿಸಿದ ಶಿಕ್ಷಕ
ಕಳೆದ ವರ್ಷ ತನ್ನ ತಾಯಿಯ ಮರಣದ ನಂತ್ರ ಬಾಲಕಿಯನ್ನ ಆಕೆಯ ನಿಂದನೀಯ ಕುಟುಂಬ ಸದಸ್ಯರ ಬಳಿಗೆ ಬಿಡಲಾಯಿತು. ತನ್ನ ಅಜ್ಜ ತನ್ನನ್ನು ಹೊಲಗಳಿಗೆ ಕರೆದೊಯ್ದು ಹಲ್ಲೆ ನಡೆಸುತ್ತಿದ್ದರೆ, ಚಿಕ್ಕಪ್ಪ ಬಲವಂತವಾಗಿ ತನ್ನ ಕೋಣೆಗೆ ಪ್ರವೇಶಿಸುತ್ತಾನೆ ಎಂದು ಆಕೆ ಆರೋಪಿಸಿದಳು. ಆಕೆಯ ತಂದೆ ತನ್ನನ್ನು ಕಟ್ಟಿ ಹಾಕಿ ಅತ್ಯಾಚಾರ ಎಸಗಿ, ಪ್ರತಿರೋಧಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ಆಕೆ ಹೇಳಿಕೊಂಡಿದ್ದಾಳೆ.
ಬಾಲಕಿಯು ಗರ್ಭೀಣಿಯಾದ ಬಳಿಕ ವಿಷ್ಯ ಬಹಿರಂಗವಾಗಿದದು, ಗಂಭೀರ ಸ್ವರೂಪ ಪಡೆದಿದೆ. ಬಾಲಕಿ ಮೊದಲು ಈ ಬಗ್ಗೆ ತನ್ನ ಚಿಕ್ಕಮ್ಮನಿಗೆ ತಿಳಿಸಿದ್ರೂ, ಪ್ರಯೋಜನವಾಗಿಲ್ಲ. ಇನ್ನು ಡಿಸೆಂಬರ್ 22 ರಂದು ಆಕೆಯ ಕುಟುಂಬ ಸದಸ್ಯರು ಬಾಲಕಿಯನ್ನ ಕೊಲ್ಲಲು ಸಂಚು ರೂಪಿಸಿದ ಬಳಿಕ ಜೀವಭಯದಿಂದ ಆಕೆ ತನ್ನ ಚಿಕ್ಕಮ್ಮನ ಮನೆಗೆ ಓಡಿ ಹೋಗಿದ್ದಾಳೆ. ನಂತರ ಬಾಲಕಿ ತನ್ನ ಚಿಕ್ಕಮ್ಮನೊಂದಿಗೆ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಗಳನ್ನ ಬಂಧಿಸಲಾಗಿದೆ.
ಇದನ್ನೂ ಓದಿ : ನಡುರಸ್ತೇಲಿ ಶರ್ಟ್ ಬಿಚ್ಚಿ ಚಾಟಿಯಿಂದ ಬಾರಿಸಿಕೊಂಡು ಹುಚ್ಚಾಟ ಮೆರೆದ ಅಣ್ಣಾಮಲೈ Janashakthi Media