ನವದೆಹಲಿ : ಕೆಲಸ ಕೇಳಿಕೊಂಡು ಬಂದ ಯುವತಿಯ ಮೇಲೆ ವಕೀಲನೊಬ್ಬ ಕೋರ್ಟ್ ಆವರಣದಲ್ಲೇ ಅತ್ಯಾಚಾರ ಎಸಗಿರುವ ಪ್ರಕರಣ ನವದೆಹಲಿಯಲ್ಲಿ ನಡೆದಿದೆ.
ಯುವತಿ ಈ ವಿಚಾರವಾಗಿ ಪ್ರಕರಣ ದಾಖಲಸಿದ್ದು, ಕೆಲಸ ಕೇಳಲು ಹೋಗಿದ್ದಾಗ ಮಾತನಾಡಿಸುತ್ತ ಕೆಲಸ ಕೊಡಿಸುವ ನೆಪದಲ್ಲಿ ನನ್ನ ಮೇಲೆ ಕೋರ್ಟ್ ಆವರಣದಲ್ಲೇ ವಕೀಲ ಅತ್ಯಾಚಾರ ಎಸಗಿರುವುದಾಗಿ ಹುಡುಗಿ ನೀಡಿದ್ದಳು. ದೂರಿನ ಮೇಲೆ ಸಬ್ಜಿ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ : ಚಿತ್ರದುರ್ಗ | ಊಟ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ: ಮೇಲ್ವಿಚಾರಕ ಅಮಾನತು
ಕೋರ್ಟ್ ಅವರಣದಲ್ಲಿರುವ ವಕೀಲರ ಕಚೇರಿಗೆ ಕಳೆದ ಜುಲೈ ತಿಂಗಳಿನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಕರೆಸಿದ್ದರು. ಈ ವೇಳೆ ನನ್ನ ವಿದ್ಯಾಭ್ಯಾಸದ ದಾಖಲೆಗಳನ್ನು ಪಡೆದುಕೊಂಡು ಎಂಟು ಹತ್ತು ದಿನಗಳ ಒಳಗೆ ಕೆಲಸ ಕೊಡಿಸುವ ಭರವಸೆ ನೀಡಿದ್ದರು. ಆದರೆ ಹತ್ತು ದಿನ ಕಳೆದರೂ ಯಾವುದೇ ಮಾಹಿತಿ ನೀಡದ ವಕೀಲರಿಗೆ ಕರೆ ಮಾಡಿದಾಗ ಕೋರ್ಟ್ ಆವರಣದಲ್ಲಿರುವ ವಕೀಲರ ಚೇಂಬರ್‌ಗೆ ಬರುವಂತೆ ಹೇಳಿದರು. ಹಾಗಾಗಿ ಮಾತನಾಡಲು ಚೇಂಬರ್‌ಗೆ ಹೋದಾಗ ಕೆಲಸದ ವಿಚಾರ ಮಾತನಾಡುತ್ತಲೇ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಿಕೊಂಡಿದ್ದಾಳೆ.
ಅತ್ಯಾಚಾರ ಎಸಗಿರುವ ಕುರಿತು ಯಾರಿಗಾದರೂ ತಿಳಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಸಿದ ವಕೀಲ ಹುಡುಗಿಯ ಕೈಗೆ 1500 ರೂಪಾಯಿ ನೀಡಿ ಅಲ್ಲಿಂದ ತೆರಳುವಂತೆ ಹೇಳಿದ್ದಾರೆ, ಮನೆಗೆ ಬಂದ ಹುಡುಗಿ ಮನೆಯವರಲ್ಲಿ ನಡೆದ ವಿಚಾರಗಳನ್ನು ತಿಳಿಸಿದ್ದಾಳೆ, ಮಗಳ ಹೇಳಿಕೆಯಿಂದ ಆತಂಕಗೊಂಡ ಪೋಷಕರು ಸಬ್ಬಿ ಮಂಡಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿ ಯುವತಿಯ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಇದನ್ನು ನೋಡಿ : ಕಾರವಾರದಲ್ಲಿ ಕುಸಿದು ಬಿದ್ದ ಕಾಳಿ ನದಿಯ ಸೇತುವೆ: ಲಾರಿ ಚಾಲಕನ ರಕ್ಷಣೆ!Janashakthi Media