ಗುಜರಾತ್| 3 ವರ್ಷದ ಬಾಲಕಿ ಮೇಲೆ ಅತ್ಯಾಚಾರ; ಅಪರಾಧಿಗೆ ಜೀವಾವಧಿ ಶಿಕ್ಷೆ

ಗುಜರಾತ್: ರಾಜ್ಯದ ವಲ್ಸಾದ್ ಜಿಲ್ಲೆಯ ವಿಶೇಷ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ) ನ್ಯಾಯಾಲಯವು 3 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ನಡೆದ ಕೇವಲ ಆರು ತಿಂಗಳಲ್ಲಿ ವ್ಯಕ್ತಿಯೊಬ್ಬನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಇದು ತ್ವರಿತ ನ್ಯಾಯಕ್ಕೆ ಉದಾಹರಣೆಯಾಗಿದ್ದೂ, ಅಪರಾಧ ನಡೆದ ಒಂಬತ್ತು ದಿನಗಳಲ್ಲಿ ಆರೋಪಿಯ ವಿರುದ್ಧ ಆರೋಪ ಹೊರಿಸಲಾಯಿತು. ಗುಜರಾತ್ ಸಚಿವ ಹರ್ಷ್ ಸಾಂಘವಿ ಈ ನಿರ್ಧಾರವನ್ನು ಐತಿಹಾಸಿಕ ಮತ್ತು ಸಾರ್ವಜನಿಕ ನಂಬಿಕೆಯನ್ನು ಬಲಪಡಿಸುವ ನ್ಯಾಯಾಂಗದ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಔರಂಗಜೇಬನ ಸಮಾಧಿ: ಅವಾಸ್ತವ ವಿವಾದ – ಧರ್ಮ ರಾಜಕೀಯ

2024ರ ಆಗಸ್ಟ್ 27ರಂದು ವಲ್ಸಾದ್ ನಲ್ಲಿ ಮೂರು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಘಟನೆಯ ನಂತರ, ವಲ್ಸಾದ್ ಪೊಲೀಸರು ಆರೋಪಿಗಳನ್ನು ಬಂಧಿಸಲು ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಿದ್ದರು. ವಿಧಿವಿಜ್ಞಾನ, ವೈದ್ಯಕೀಯ, ತಾಂತ್ರಿಕ ಮತ್ತು ಸಾಕ್ಷಿಗಳ ಪುರಾವೆಗಳನ್ನು ಸಂಗ್ರಹಿಸಿದ ಅಧಿಕಾರಿಗಳು ಕೇವಲ ಒಂಬತ್ತು ದಿನಗಳಲ್ಲಿ ವಿಶೇಷ ಪೋಕ್ಸೊ ನ್ಯಾಯಾಲಯಕ್ಕೆ 470 ಪುಟಗಳ ಸಮಗ್ರ ಚಾರ್ಜ್‌ಶೀಟ್ ಸಲ್ಲಿಸಿದ್ದರು.

ಮಾರ್ಚ್ 24, 2025 ರಂದು ನ್ಯಾಯಾಲಯವು ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು 50,000 ರೂ.ಗಳ ದಂಡವನ್ನು ವಿಧಿಸಿತ್ತು. ಅಲ್ಲದೆ, ಸಂತ್ರಸ್ತೆಯ ಕುಟುಂಬಕ್ಕೆ 6 ಲಕ್ಷ ರೂ.ಗಳ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

ಇದನ್ನೂ ನೋಡಿ: Karnataka Legislative Assembly Live Day 14 | ವಿಧಾನಸಭೆ ಬಜೆಟ್ ಅಧಿವೇಶನದ ನೇರ ಪ್ರಸಾರ ದಿನ 14

Donate Janashakthi Media

Leave a Reply

Your email address will not be published. Required fields are marked *