ಪ್ರತಾಪಗಢ: ಅತ್ಯಾಚಾರ ಆರೋಪಿಯೊಬ್ಬ ಉತ್ತರ ಪ್ರದೇಶದ ವೈದ್ಯಕೀಯ ಕಾಲೇಜಿನಿಂದ ತಪ್ಪಿಸಿಕೊಂಡ ಪ್ರಕರಣದಲ್ಲಿ ನಾಲ್ವರು ಪೊಲೀಸರ ವಿರುದ್ಧ ನಿರ್ಲಕ್ಷ್ಯ ತೋರಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಡಿಸೆಂಬರ್ 27ರಂದು ತಿಳಿಸಿದ್ದಾರೆ. ಆಸ್ಪತ್ರೆ
ಡಿಸೆಂಬರ್ 26ರ ರಾತ್ರಿ ದಾಖಲಾಗಿರುವ ಎಫ್ಐಆರ್ನಲ್ಲಿ ಅತ್ಯಾಚಾರ ಆರೋಪಿ ಜಾವೇದ್ ಅಲಿಯಾಸ್ ಚಂದ್ ಬಾಬು (28) ಹೆಸರನ್ನೂ ಸೇರಿಸಲಾಗಿದೆ.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೈಲೇಂದ್ರ ಲಾಲ್ ಮಾತನಾಡಿ, ಈ ಘಟನೆ ಡಿಸೆಂಬರ್ 20 ರಂದು ಕೊತ್ವಾಲಿ ಪಟ್ಟಿ ವ್ಯಾಪ್ತಿಯ ಉದಯದಿಹಾ ಬಜಾರ್ನಲ್ಲಿ 10 ವರ್ಷದ ಬಾಲಕಿಯ ಮೇಲೆ ಆರೋಪಿ ಅತ್ಯಾಚಾರಕ್ಕೆ ಯತ್ನಿಸಿದ್ದ.
ಇದನ್ನೂ ಓದಿ: ಚಿಂತಾಮಣಿ | ಶಾಲಾ ಮಕ್ಕಳಗೆ ಬಾಲ್ಯವಿವಾಹ, ಪೋಕ್ಸೊ ಕಾಯ್ದೆ ಅರಿವು
ಸಂತ್ರಸ್ತೆಯ ಕುಟುಂಬದ ದೂರಿನ ಮೇರೆಗೆ ಅತ್ಯಾಚಾರ ಮತ್ತು ಪೋಕ್ಸೊ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ಡಿಸೆಂಬರ್ 23 ಮತ್ತು 24 ರ ಮಧ್ಯರಾತ್ರಿ ಅಮಾಪುರ್ ಬಳಿ ನಡೆದ ಪೊಲೀಸ್ ಎನ್ಕೌಂಟರ್ನಲ್ಲಿ ಜಾವೇದ್ ಕಾಲಿಗೆ ಗಾಯವಾಗಿದ್ದು, ಡಿಸೆಂಬರ್ 24 ರಂದು ವೈದ್ಯಕೀಯ ಕಾಲೇಜಿನ ತುರ್ತು ಚಿಕಿತ್ಸಾ ವಾರ್ಡ್ಗೆ ದಾಖಲಿಸಲಾಗಿತ್ತು ಎಂದು ಲಾಲ್ ಹೇಳಿದರು.
ಆತನ ಕಾವಲಿಗೆ ಸಬ್ ಇನ್ಸ್ಪೆಕ್ಟರ್ ಕೇಶವ್ ಪ್ರಸಾದ್ ಮತ್ತು ಕಾನ್ಸ್ಟೆಬಲ್ಗಳಾದ ವಿನೋದ್ ಸಿಂಗ್, ಆದರ್ಶ್ ಯಾದವ್ ಮತ್ತು ಗುಲ್ಶನ್ ಕುಮಾರ್ ಎಂಬ ನಾಲ್ವರು ಪೊಲೀಸರನ್ನು ನಿಯೋಜಿಸಲಾಗಿತ್ತು.ಆದರೆ, ಆರೋಪಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಅದೇ ದಿನ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಇದನ್ನೂ ನೋಡಿ: ಏನಿದು ಪರ್ಯಾಯ ರಾಜಕಾರಣ? ರಾಜ್ಯದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದ ಸಿಪಿಐ(ಎಂ) Janashakthi Media
