ಬೆಂಗಳೂರು: ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಉಗ್ರನ ಸುಳಿವು ಕೊಟ್ಟವರಿಗೆ 10 ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿದೆ. ರಾಮೇಶ್ವರಂ
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟಕ್ಕೆ ಕಾರಣವಾದ ಕಡಿಮೆ ತೀವ್ರತೆಯ ಐಇಡಿ ಇಟ್ಟ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಇದ್ದರು ನೀಡಿದವರಿಗೆ ಬರೋಬ್ಬರಿ 10 ಲಕ್ಷ ನಗದು ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ ಬುಧವಾರ ಘೋಷಿಸಿದೆ. ಜೊತೆಗೆ ಆರೋಪಿಯ ಪೋಟೋ ಬಿಡುಗಡೆ ಮಾಡಿದೆ.
ಶಂಕಿತನ ಸುಳಿವು ನೀಡಿದವರ ಹೆಸರು ಗೌಪ್ಯವಾಗಿ ಇಡುವುದಾಗಿ ಎನ್‌ಐಎ ತಿಳಿಸಿದೆ. ಶಂಕಿತ ಉಗ್ರನ ಸುಳಿವು ಸಿಕ್ಕಲ್ಲಿ 08029510900, 8904241100 ನಂಬರಿಗೆ ಕರೆ ಮಾಡುವಂತೆ ಸೂಚನೆ ನೀಡಲಾಗಿದೆ.
ರಾಮೇಶ್ವರಂ ಸ್ಫೋಟ ಪ್ರಕರಣದಲ್ಲಿ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಆದರೆ ಕೇಂದ್ರ ಅಪರಾಧ ವಿಭಾಗ ಮತ್ತು ಎನ್‌ಐಎ ಎರಡರಿಂದಲೂ ತನಿಖೆ ನಡೆಯುತ್ತಿದೆ. ಸರ್ಕಾರವು ತನಿಖೆಯನ್ನು ಕೇಂದ್ರ ಏಜೆನ್ಸಿಗೆ ಹಸ್ತಾಂತರಿಸದ ಕಾರಣ ತನಿಖೆಯನ್ನು ಕೈಗೆತ್ತಿಕೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯವು ನಿರ್ದೇಶಿಸಿದ ನಂತರ ಎನ್‌ಐಎ ಮಂಗಳವಾರದಿಂದ ತನ್ನ ತನಿಖೆಯನ್ನು ಪ್ರಾರಂಭಿಸಿದೆ. ರಾಮೇಶ್ವರಂ
ಇದನ್ನೂ ಓದಿ : ರಾಮೇಶ್ವರಂ ಕೆಫೆ ಸ್ಫೋಟ ಓರ್ವ ವಶಕ್ಕೆ
ರಾಮೇಶ್ವರಂ ಕೆಫೆಯಲ್ಲಿ ಆಗಿದ್ದೇನು? ಮಾರ್ಚ್ 1 ರಂದು, ಜನಪ್ರಿಯ ರಾಮೇಶ್ವರಂ ಕೆಫೆಯಲ್ಲಿ ಊಟದ ಸಮಯದಲ್ಲಿ ವಿಪರೀತ ಜನರಿದ್ದ ಸಂದರ್ಭದಲ್ಲಿ ಸ್ಫೋಟ ಸಂಭವಿಸಿ 10 ಮಂದಿ ಗಾಯಗೊಂಡಿದ್ದರು. ಆದರೆ ಗಾಯಗಳು ಗಂಭೀರವಾಗಿರಲಿಲ್ಲ. ಬಳಿಕ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದ ಬಳಿಕ ರಾಮೇಶ್ವರಂ ಕೆಫೆಗೆ ಘಟನೆಗೂ ಒಂದು ಗಂಟೆ ಮೊದಲು ಬಂದು ಕೆಫೆಯೊಳಗೆ ಕೆಲವೇ ನಿಮಿಷಗಳ ಕಾಲ ಇದ್ದ ವ್ಯಕ್ತಿಯೊಬ್ಬರನ್ನು ಪೊಲೀಸರು ಗಮನಿಸಿದ್ದರು. ಈ ವೇಳೆ ಒಬ್ಬ ವ್ಯಕ್ತಿ ಒಂದು ಪ್ಲೇಟ್ ರವೆ ಇಡ್ಲಿಯನ್ನು ಆರ್ಡರ್ ಮಾಡಿ ಟೈಮರ್ನೊಂದಿಗೆ ಐಇಡಿ ಹೊಂದಿದ್ದ ಬ್ಯಾಗ್ ಅನ್ನು ಬಿಟ್ಟು ಹೋಗಿದ್ದಾನೆ ಎಂದು ಪತ್ತೆ ಮಾಡಿದ್ದರು. ರಾಮೇಶ್ವರಂ
ಘಟನೆ ಬಳಿಕ ಕೆಫೆಯನ್ನು ಮುಚ್ಚಲಾಗಿತ್ತು. ಮಾರ್ಚ್ 8ರ ಮಹಾ ಶಿವರಾತ್ರಿಯಂದು ಮತ್ತೆ ಕೆಫೆ ತೆರೆಯಲಾಗುತ್ತದೆ.
ವಿಡಿಯೋ ನೋಡಿ : ಚುನಾವಣೆ ಬರ್ತಿದ್ದಂತೆ ಬಾಂಬ್ ಸ್ಪೋಟಗೊಳ್ಳೋದು ಯಾಕೆ? ಸಾರ್ವಜನಿಕರು ವಹಿಸಬೇಕಾದ ಎಚ್ಚರಿಕೆ ಏನು?