ನವದೆಹಲಿ: ಕಾಂಗ್ರೆಸ್ ನಾಯಕ ಮತ್ತು ರಾಜ್ಯಸಭಾ ಸಂಸದ ಜೈರಾಮ್ ರಮೇಶ್ ಪರಿಸರ ಅನುಮತಿ ಪಡೆಯದೇ ಆರಂಭಿಸಿದ ಯೋಜನೆಗಳಿಗೆ ಬಳಿಕ ಪೂರ್ವಾನ್ವಯ ಆಗುವಂತೆ ಅನುಮತಿ (EC) ನೀಡುವುದನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ತಿರಸ್ಕರಿಸಿದೆ.
ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರ ಪೀಠವು, ವಿಚಾರಣೆ ನಡೆಸಿ ಅರ್ಜಿಯನ್ನು ತಿರಸ್ಕರಿಸಿತು.
ಪೂರ್ವಾನ್ವಯ ಪರಿಸರ ಅನುಮತಿ ಕುರಿತು ಕೇಂದ್ರದ ಜ್ಞಾಪಕ ಪತ್ರಗಳನ್ನು ವನಶಕ್ತಿ ಪರಿಶೀಲನಾ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಅನುಮೋದಿಸಿದಾಗ, ಹೇಗೆ ರಿಟ್ ಅರ್ಜಿಗಳನ್ನು ಸಲ್ಲಸಲಾಗುತ್ತದೆ ಎಂದು ಪೀಠ ಪ್ರಶ್ನಿಸಿತು. ಜೊತೆಗೆ ಈ ರಿಟ್ ಅರ್ಜಿಯನ್ನು ಹೇಗೆ ನಿರ್ವಹಿಸಬೇಕು ಎಂಬುದರ ಬಗ್ಗೆ ಕಾಂಗ್ರೆಸ್ ಸಂಸದರ ಪರ ವಕೀಲರನ್ನು ಕೇಳಿದ ಪೀಠ, ಎಡ ಮತ್ತು ಬಲ ತೆಗೆದುಕೊಳ್ಳಲು ಪ್ರಯತ್ನಿಸಬೇಡಿ ಎಂದು ತಿಳಿಸಿತು.
ಇದನ್ನೂ ಓದಿ : ಬೆಂಗಳೂರು | ವಿಧಾನಸೌಧಕ್ಕೆ ಚಿನ್ನ ಬಂದ ಕುರಿತು ತನಿಖೆಗೆ ಸೂಚನೆ: ಗೃಹ ಸಚಿವ ಪರಮೇಶ್ವರ್
ಈಗ, ಪರೋಕ್ಷವಾಗಿ ಪರಿಶೀಲನಾ ಅರ್ಜಿ ಸಲ್ಲಿಸುತ್ತಿದ್ದೀರಿ. ಈ ಮೂಲಕ ತೀರ್ಪು ತಪ್ಪು ಎಂದು ನೀವು ರಿಟ್ ಅರ್ಜಿಯ ಮೂಲಕ ಹೇಳಲು ಬಯಸುತ್ತೀದ್ದೀರಿ. “ಸಾಮಾನ್ಯವಾಗಿ, ಈ ರಿಟ್ ಅರ್ಜಿಗಳ ಹಿಂದಿನ ವಿನ್ಯಾಸ ನಮಗೆ ಗೊತ್ತಿದೆ. ದೊಡ್ಡ ಪೀಠವು ಈ ಕುರಿತು ರದ್ದುಗೊಳಿಸಿ ತೀರ್ಪು ನೀಡಿತ್ತು. ಇದನ್ನು ನೀವು ನೇರವಾಗಿ ಏಕೆ ಹೇಳಬಾರದು?” ಎಂದು ಸಂಸದನ ಪರ ವಕೀಲರಿಗೆ ಸಿಜೆಐ ಕೇಳಿದರು.
ರಿಟ್ ಅರ್ಜಿಯಲ್ಲಿ ನೀವು ತೀರ್ಪನ್ನು ಪ್ರಶ್ನಿಸಬಹುದೇ? ಪೂರ್ವಾನ್ವಯ ಪರಿಸರ ಅನುಮತಿ ತಪ್ಪು ಮತ್ತು ತೀರ್ಪಿನ ನಂತರವೇ ಕ್ರಿಯೆಯ ಕಾರಣ ಉದ್ಭವಿಸಿದೆ. ಆದ್ದರಿಂದ ತೀರ್ಪಿನ ಬಳಿಕ ಅರ್ಜಿ ಸಲ್ಲಿಸಬಹುದು ಎಂದು ವಕೀಲರು ವಾದ ಮಂಡಿಸಿದರು. ನ್ಯಾಯಾಲಯದ ತೀರ್ಪಿನ ಅನುಸಾರ ಸರ್ಕಾರ ಅಧಿಸೂಚನೆ ಹೊರಡಿಸಿತು” ಎಂದು ಪೀಠ ತಿಳಿಸಿತು.
ಜನವರಿ 2026 ರಲ್ಲಿ ಹೊರಡಿಸಲಾದ ಜ್ಞಾಪಕ ಪತ್ರವನ್ನು ಸಹ ಅರ್ಜಿದಾರರು ಪ್ರಶ್ನಿಸುತ್ತಿದ್ದಾರೆ. ಜೊತೆಗೆ ಪೂರ್ವಾನ್ವಯ ಪರಿಸರ ಅನುಮತಿಯನ್ನು ನಿಲ್ಲಿಸಲು ನ್ಯಾಯಾಲಯವನ್ನು ಅವರು ಕೋರುತ್ತಿದ್ದಾರೆ ಎಂದು ವಕೀಲರು ಹೇಳಿದರು.
ಕೇವಲ ಮಾಧ್ಯಮಕ್ಕಾಗಿ ಅರ್ಜಿ ಸಲ್ಲಿಸುವುದು… ತೀರ್ಪಿನಿಂದ ಅಸಮಾಧಾನಗೊಂಡಿದ್ದರೆ, ಪರಿಹಾರದ ಬಗ್ಗೆ ನಿಮಗೆ ಗೊತ್ತಿದೆ. ರಿಟ್ ಅರ್ಜಿ ಮೂಲಕ ತೀರ್ಪಿನ ಪರಿಶೀಲನೆ ಹೇಗೆ ಕೋರಬಹುದು? ಎಂದು ವಕೀಲರಿಗೆ ಸುಪ್ರೀಂ ಪ್ರಶ್ನಿಸಿತು. ಬಳಿಕ ಅರ್ಜಿಯನ್ನು ಹಿಂಪಡೆಯಲು ಅವಕಾಶ ನೀಡುವಂತೆ ವಕೀಲರು ಮನವಿ ಮಾಡಿದರು.
ಪೂರ್ವಾನ್ವಯ ಪರಿಸರ ಅನುಮತಿ ನೀಡಲು ನಿರ್ಬಂಧಿಸಿ ಸುಪ್ರೀಂ ಕೋರ್ಟ್ 2025ರ ಮೇನಲ್ಲಿ ತೀರ್ಪು ನೀಡಿತ್ತು. ಬಳಿಕ ನವೆಂಬರ್ನಲ್ಲಿ ಸುಪ್ರೀಂ ಕೋರ್ಟ್‌ನ ಮೂವರು ನ್ಯಾಯಮೂರ್ತಿಗಳ ಪೀಠವು ಈ ತೀರ್ಪನ್ನು ರದ್ದುಗೊಳಿಸಿ, ಪೂರ್ವಾನ್ವಯ ಪರಿಸರಕ್ಕೆ ಅನುಮತಿ ನೀಡಿತ್ತು.
ಇದನ್ನೂ ನೋಡಿ : ಅಖಿಲ ಭಾರತ ಮುಷ್ಕರ| ಪೊಲೀಸರ ದರ್ಪ – ಮಾನವೀಯತೆ ಕಳೆದುಕೊಂಡ ಸರಕಾರ Janashakthi Media
