ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಬಹಿರಂಗವಾಗುತ್ತಿದ್ದಂತೆ ರಾಜ್ಯದಾದ್ಯಂತ ವ್ಯಾಪಕ ಆಕ್ರೋಶ ಕೇಳಿ ಬಂದಿತ್ತು. ಅಶ್ಲೀಲ ಸಿಡಿ ಹೊರಬಂದ ನಂತರ ರಮೇಶ್ ಸಂದಿಗ್ಧ ಪರಿಸ್ಥಿತಿ ಎದುರಿಸಿದ್ದು, ರಾಜೀನಾಮೆ ಕೂಡ ನೀಡಿದ್ದಾರೆ. ಈಗ ಮಹಿಳಾ ಆಯೋಗ ರಮೇಶ್ ಜಾರಕಿಹೊಳಿ ವಿರುದ್ಧ ಸುಮೋಟೋ ಕೇಸ್ ದಾಖಲಿಸಿದೆ.
ಕನ್ನಡ ರಕ್ಷಣಾ ವೇದಿಕೆ ಹಾಗೂ ವಕೀಲರು ನೀಡಿದ್ದ ಎರಡು ದೂರುಗಳನ್ನು ಆಧರಿಸಿ ಸುಮೋಟೋ ಕೇಸ್ ದಾಖಲಿಸಿಕೊಳ್ಳಲಾಗಿದ್ದು, ಸಂತ್ರಸ್ತೆಯನ್ನು ಕರೆದು ಹೇಳಿಕೆಯನ್ನ ಪಡೆಯುತ್ತೇವೆ. ಪೊಲೀಸ್ ತನಿಖೆ ನಡೆಸಲಿ, ನಾವು ಪೊಲೀಸರಿಗೆ ಸಹಕರಿಸುತ್ತೇವೆ. ಸಂತ್ರಸ್ತೆ ಭಯಪಡಬೇಕಿಲ್ಲ, ರಾಜ್ಯ ಮಹಿಳಾ ಆಯೋಗ ಆಕೆಯ ಪರವಾಗಿದೆ ಎಂದು ರಾಜ್ಯ ಮಹಿಳಾ ಆಯೋಗದ ಆಧ್ಯಕ್ಷೆ ಪ್ರಮೀಳಾ ನಾಯ್ಡು ಹೇಳಿದ್ದಾರೆ.
ಇತ್ತ ದಿನೇಶ್ ಕಲ್ಲಹಳ್ಳಿ ಸಹ ಪೊಲೀಸರ ಮುಂದೆ ಹಾಜರಾಗಿ ಇನ್ನು ಹೆಚ್ಚಿನ ಮಾಹಿತಿಯನ್ನು ನೀಡಿದ್ದಾರೆ. ಹಾಗಾಗಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.