`ಮನುಸ್ಮೃತಿ’ಯಂತೆ `ರಾಮಚರಿತಮಾನಸ’ ಪುಸ್ತಕ ಸುಟ್ಟು ಹಾಕಬೇಕು: ಬಿಹಾರ ಶಿಕ್ಷಣ ಸಚಿವ ಚಂದ್ರಶೇಖರ್

ಪಾಟ್ನಾ: ರಾಮಾಯಣವನ್ನು ಆಧರಿಸಿ ರಚಿತವಾದ ಹಿಂದೂ ಧಾರ್ಮಿಕ ಗ್ರಂಥ `ರಾಮಚರಿತಮಾನಸ’ ವನ್ನು ಮನುಸ್ಮೃತಿಯಂತೆ ಸುಟ್ಟುಬಿಡಬೇಕು. ಅದು ಸಮಾಜದಲ್ಲಿ ದ್ವೇಷವನ್ನು ಹರಡುತ್ತಿದೆ’ ಎಂದು ಬಿಹಾರ ರಾಜ್ಯದ ಶಿಕ್ಷಣ ಸಚಿವ ಚಂದ್ರಶೇಖರ್ ಹೇಳಿಕೆ ನೀಡಿದ್ದಾರೆ.

ನಳಂದ ಮುಕ್ತ ವಿಶ್ವವಿದ್ಯಾನಿಲಯದ 15ನೇ ಘಟಿಕೋತ್ಸವ ಕಾರ್ಯಕ್ರಮ ಬಾಪು ಸಭಾಂಗಣದಲ್ಲಿ ನಡೆದಿದ್ದು, ತಮ್ಮ ಉದ್ಘಾಟನಾ ಭಾಷಣದ ವೇಳೆ ಈ ಹೇಳಿಕೆ ನೀಡಿದ ಸಚಿವ ಚಂದ್ರಶೇಖರ್, ಸಮಾಜದ ಕೆಳವರ್ಗದವರು ಶಿಕ್ಷಣ ಪಡೆದರೆ ವಿಷಕಾರಿಯಾಗುತ್ತಾರೆ ಎಂದು ರಾಮಚರಿತಮಾನಸ ಹೇಳುತ್ತದೆ. ರಾಮಚರಿತಮಾನಸ, ಮನುಸ್ಮೃತಿ ಮತ್ತು ಎಂ ಎಸ್ ಗೋಲ್ವಾಲ್ಕರ್ ಚಿಂತನೆಗಳುಳ್ಳ ಪುಸ್ತಕಗಳು ಸಾಮಾಜಿಕ ವಿಭಜನೆಯನ್ನು ಸೃಷ್ಟಿಸುತ್ತವೆ. ಇವು ದ್ವೇಷವನ್ನು ಹರಡುವ ವಿಚಾರಗಳನ್ನು ಒಳಗೊಂಡಿವೆ ಎಂದು ಹೇಳಿದ್ದಾರೆ.

‘ರಾಮಚರಿತಮಾನಸ’ ಸಮಾಜದಲ್ಲಿ ದ್ವೇಷ ಹರಡುವ ಅಂಶಗಳನ್ನು ಒಳಗೊಂಡಿದೆ. ಸಮಾಜದಲ್ಲಿ ದಲಿತರು, ಹಿಂದುಳಿದವರು ಮತ್ತು ಮಹಿಳೆಯರು ಶಿಕ್ಷಣ ಸೇರಿದಂತೆ ಇತರೆ ಹಕ್ಕುಗಳನ್ನು ನಿರಾಕರಣೆ ಮಾಡುತ್ತವೆ. ಮನುಸ್ಮೃತಿ ಸಮಾಜದಲ್ಲಿ ದ್ವೇಷದ ಬೀಜಗಳನ್ನು ಬಿತ್ತಿತ್ತು. ರಾಮಚರಿತಮಾನಸ ಸಹ ಸಮಾಜದಲ್ಲಿ ದ್ವೇಷವನ್ನು ಹುಟ್ಟುಹಾಕುತ್ತಿದೆ’ ಎನ್ನುವುದು ಸಚಿವರ ಹೇಳಿದ್ದಾರೆ ಎಂದು ವರದಿಯಾಗಿದೆ.

ಇದನ್ನು ಓದಿ: ಎಸೆದು ಬಿಡು ನಿನ್ನ ಹಾಡುಗಳನೆಲ್ಲ ದೂರ – ಮಹಿಳೆ: ದುಡಿಮೆ ಮತ್ತು ಸ್ವಾತಂತ್ರ್ಯಹೀನತೆ

‘ಗೋಳ್ವಾಲ್ಕರ್ ಚಿಂತನೆಗಳು ಸಮಾಜದಲ್ಲಿ ದ್ವೇಷದ ಭಾವನೆಗಳನ್ನು ಹರಡುತ್ತಿವೆ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ಸುಟ್ಟರು. ಏಕೆಂದರೆ, ಅದು ದಲಿತರು ಮತ್ತು ಹಿಂದುಳಿದವರ ಹಕ್ಕುಗಳನ್ನು ಕಸಿದುಕೊಳ್ಳುವ ಬಗ್ಗೆ ಮಾತನಾಡುತ್ತದೆ. ರಾಮಚರಿತಮಾನಸ ದಲ್ಲಿ ‘ಅದಂ ಜಾತಿ ಮೇ ವಿದ್ಯಾ ಪಾಯೇ, ಭಯತು ಯಥಾ ದೂಧ್ ಪಿಲಾಯೇ’ ಎಂಬ ಶ್ಲೋಕವಿದೆ. ಇದರರ್ಥ ‘ಕೆಳಜಾತಿಯ ಜನರು ಶಿಕ್ಷಣ ಪಡೆದ ನಂತರ ವಿಷಕಾರಿಯಾಗುತ್ತಾರೆ, ಹಾವು ಹಾಲು ಕುಡಿದ ಹಾಗೆ. ಎಷ್ಟೇ ಹಾಲು ಕುಡಿದರೂ ಹಾವಿನಲ್ಲಿ ವಿಷ ಅಡಕವಾಗಿರುತ್ತದೆ ಎಂಬರ್ಥವಿದೆ. ಇಂತಹ ಸಾಲುಗಳು ದೇಶದ ಸಮಾನತೆ ಸೃಷ್ಟಿಗೆ ತಡೆಯೊಡ್ಡಲಿದೆ ಎಂದರು.

ರಾಮಚರಿತಮಾನಸ 16ನೇ ಶತಮಾನದ ಭಾರತೀಯ ಭಕ್ತಿ ಕವಿ ತುಳಸಿದಾಸ(1532-1623)ರು ರಚಿಸಿದ ಮಹಾಕಾವ್ಯ. ಅಂದರೆ, “ರಾಮನ ಕಾರ್ಯಗಳ ಸರೋವರ” ಎಂದರ್ಥ. ಇದನ್ನು ಹಿಂದೂ ಸಾಹಿತ್ಯದ ಶ್ರೇಷ್ಠ ಕೃತಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *