ರಾಮಸಮುದ್ರದಲ್ಲಿ ಭೀಮ ಸಂದೇಶ ಯಾತ್ರೆಗೆ ಹ.ರಾ.ಮಹೇಶ್ ಚಾಲನೆ

ಚಾಮರಾಜನಗರ: ರಾಮಸಮುದ್ರದಲ್ಲಿ ಭೀಮ ಸಂದೇಶ ಯಾತ್ರೆಗೆ ರಾಜ್ಯ ಬೌದ್ಧ ಸಮಾಜದ ಅಧ್ಯಕ್ಷ ಹ.ರಾ.ಮಹೇಶ್ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಭೀಮಾ ಕೊರೆಗಾಂವ್ ವಿಜಯೋತ್ಸವ ಅಂಗವಾಗಿ ಮಹಾರಾಷ್ಟ್ರದ ಚೈತ್ಯ ಭೂಮಿಯಿಂದ ಇಂದು ರಾಮಸಮುದ್ರಕ್ಕೆ ಭೀಮ ಸಂದೇಶ ರಥಯಾತ್ರೆ ಬಂದಿರುವುದು ನಮ್ಮೆಲ್ಲರ ಪುಣ್ಯ ಇಲ್ಲಿಗೆ ಆಗಮಿಸಿರುವ ಭೀಮ ಸಂದೇಶದ ವಿಚಾರಧಾರೆಯನ್ನ ಎಲ್ಲರೂ ತಿಳಿದು ಪಾಲಿಸೋಣ ಎಂದರು.

ಇದನ್ನು ಓದಿ: ದಲಿತರ ಮೇಲಿನ ದೌರ್ಜನ್ಯ ವಿರೋಧಿ ರಾಷ್ಟ್ರೀಯ ಸಮಾವೇಶಕ್ಕೆ ರಾಜ್ಯದಿಂದ ಹಲವು ಮಂದಿ ಭಾಗಿ

ನಗರ ಸಭೆ ಸದಸ್ಯ ನಂಜುಂಡ ಆರ್ ಪಿ ಮಾತನಾಡಿ, ಭೀಮ ಸಂದೇಶ ಯಾತ್ರೆಯನ್ನು ಇಂದು ನಮ್ಮ ಗ್ರಾಮಕ್ಕೆ ಅದ್ದೂರಿಯಾಗಿ ಸ್ವಾಗತ ಕೋರಿ ಬರಮಾಡಿಕೊಂಡಿದ್ದೇವೆ. ಡಾ. ಬಿ.ಆರ್ ಅಂಬೇಡ್ಕರ್ ಅವರ ಸಂವಿಧಾನದ ವಿಚಾರಗಳನ್ನು ಈ ಸಂದರ್ಭದಲ್ಲಿ ನಾವು ತಿಳಿಯಬೇಕು, ಸಂದೇಶದಿಂದ ನಮ್ಮ ಜನರ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಆದ್ದರಿಂದ ಡಾ ಬಿ ಆರ್ ಅಂಬೇಡ್ಕರ್ ಅವರ ಆದರ್ಶ ಪಾಲನೆ ಎಲ್ಲರೂ ಅಳವಡಿಸಿಕೊಳ್ಳಬೇಕು ಈ ಭೀಮ ಸಂದೇಶ ಯಾತ್ರೆಯ ಉದ್ದೇಶವನ್ನು ಎಲ್ಲರೂ ತಿಳಿದು ಅದನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

ನಂತರ ಭೀಮ ಸಂದೇಶ ಯಾತ್ರೆಯು ಮೆರವಣಿಗೆಯ ಮೂಲಕ ಗ್ರಾಮದ ಎಲ್ಲಾ ಬೀದಿಗಳಲ್ಲಿಯೂ ಚಲಿಸಿತು. ಇದೇ ಸಂದರ್ಭದಲ್ಲಿ ಬಿವಿಎಫ್ ಜಿಲ್ಲಾಧ್ಯಕ್ಷ ಚಂದ್ರಕಾಂತ್, ರವಿ ಬ್ಯಾಡ್ ಮೂಡ್ಲು ಬಸವಣ್ಣ, ನಮ್ಮನೆ ಪ್ರಶಾಂತ್, ನಿವೃತ್ತ ಉಪತಹಶೀಲ್ದಾರ್ ಕೃಷ್ಣಮೂರ್ತಿ ರಾಜು, ಅಭಿಮೌರ್ಯ, ಸಿದ್ದರಾಜು, ಆಶ್ರಿತ್ ಹಾಗೂ ಗ್ರಾಮದ ಯಜಮಾನರು ಸೇರಿದಂತೆ ಹಲವರು ಹಾಜರಿದ್ದರು.

ವರದಿ: ಬಂಗಾರಪ್ಪ ಸಿ ಪೊನ್ನಾಚಿ

Donate Janashakthi Media

Leave a Reply

Your email address will not be published. Required fields are marked *