ರಾಮ ಮತ್ತು ಕೃಷ್ಣ ಇತಿಹಾಸ ಪುರುಷರಲ್ಲ : ನಿವೃತ್ತ ನ್ಯಾಯಾಧೀಶ ವಸಂತ ಮುಳಸಾವಳಗಿ ಹೇಳಿಕೆ

ವಿಜಯಪುರ : ರಾಮ ಮತ್ತು ಕೃಷ್ಣ ಇತಿಹಾಸ ಪುರುಷರಲ್ಲ, ಅವರು ಕೇವಲ ಕಾದಂಬರಿ ಪಾತ್ರಧಾರಿಗಳು ಎಂದು ನಿವೃತ್ತ ನ್ಯಾಯಾಧೀಶ ವಸಂತ ಮುಳಸಾವಳಗಿ ಅಭಿಪ್ರಾಯ ಪಟ್ಟಿದ್ದಾರೆ.

ರಾಷ್ಟ್ರೀಯ ಸೌಹಾರ್ದ ವೇದಿಕೆಯಿಂದ ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ನಡೆದ ‘ಸಂವಿಧಾನ ಆಶಯ ಈಡೇರಿದೆಯೇ?’ ಎನ್ನುವ ವಿಚಾರಗೋಷ್ಠಿಯಲ್ಲಿ ಮಾತನಾಡಿದ ವಸಂತ ಮುಳಸಾವಳಗಿ, ರಾಮ ಮತ್ತು ಕೃಷ್ಣ ಇತಿಹಾಸ ಪುರುಷರಲ್ಲ. ಅವರು ಕೇವಲ ಕಾದಂಬರಿ ಪಾತ್ರಧಾರಿಗಳು. ಅಶೋಕ ಚಕ್ರವರ್ತಿ ನಿಜವಾದ ಇತಿಹಾಸ ಪುರುಷ ಎಂದು ಪ್ರತಿಪಾದಿಸಿದರು.

ಅಕ್ಬರ್ ಹೆಂಡತಿ ಹಿಂದು. ಆಕೆ ಧರ್ಮಾಂತರ ಆಗಿರಲಿಲ್ಲ. ಆಕೆ ಹಿಂದೂ, ಅವ ಮುಸ್ಲಿಂ. ಅಕ್ಬರ್​ನ ಆಸ್ಥಾನದಲ್ಲಿ ಕೃಷ್ಣನ ಮಂದಿರ ಕಟ್ಟಿದ್ದಾನೆ, ಹೋಗಿ ನೋಡಬಹುದು. ಮುಸ್ಲಿಮರು ಹಾಗೆ ಮಾಡಿದ್ದಾರೆ, ಹೀಗೆ ಮಾಡಿದ್ದಾರೆ ಅಂತೀರಲ್ಲ, ಮುಸ್ಲಿಮರು ಏಳುನೂರು ವರ್ಷ ಆಳ್ವಿಕೆ ಮಾಡಿರೋದು ಇತಿಹಾಸ ಹೇಳುತ್ತೆ. ಅವರು ಹಿಂದೂಗಳನ್ನ ವಿರೋಧ ಮಾಡಿದ್ರು ಅಂದ್ರೆ ಒಬ್ಬ ಹಿಂದೂ ಭಾರತದಲ್ಲಿ ಇರುತ್ತಿರಲಿಲ್ಲ. ಎಲ್ಲರನ್ನೂ ಕೊಲ್ಲಬಹುದಿತ್ತು ಅವರು. ಅಷ್ಟಾದರೂ ಮುಸ್ಲಿಮರು ಅಲ್ಪಸಂಖ್ಯಾತರು ಯಾಕಾದ್ರು? ಎಂದು ವಸಂತ ಮುಳಸಾವಳಗಿ ಪ್ರಶ್ನಿಸಿದ್ದಾರೆ.

ʻʻಅಂಬೇಡ್ಕರ್ ಅವರು ಬಾಂಬೆಯಿಂದ ಚುನಾವಣೆಗೆ ಸ್ಪರ್ಧಿಸಿದ್ದರು, ಅಲ್ಲಿ ಸೋಲಿಸಿದರು. ಅನಂತರ ಪಶ್ಚಿಮ ಬಂಗಾಳದಲ್ಲಿ ಸ್ಪರ್ಧೆ ಮಾಡಿ ಗೆದ್ದರು. ಆದರೆ ಇವರು ಸ್ಪರ್ಧಿಸಿದ್ದ ಕ್ಷೇತ್ರವನ್ನು ಪಾಕಿಸ್ತಾನಕ್ಕೆ ಸೇರಿಸಲಾಯಿತು. ಒಟ್ಟಿನಲ್ಲಿ ಇವರನ್ನು ಸಂಸತ್ತಿನಲ್ಲಿ ಇರದಂತೆ ನೋಡಿಕೊಳ್ಳುವಲ್ಲಿ ಕೆಲವರು ಯಶಸ್ವಿಯಾಗಿದ್ದರುʼʼ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Donate Janashakthi Media

Leave a Reply

Your email address will not be published. Required fields are marked *