ರಾಮ ಮಂದಿರ ಉದ್ಘಾಟನೆ ‘ಪ್ರತಿಗಾಮಿ ರಾಜಕೀಯ’ದ ದ್ಯೋತಕ, ದೇಶದ ಭವಿಷ್ಯವು ಅಪಾಯದಲ್ಲಿದೆ – ಖ್ಯಾತ ನಿರ್ದೇಶಕ ಪಾ ರಂಜಿತ್

ಚೆನ್ನೈ: ಬಾಬರಿ ಮಸೀದಿ ಒಡೆದು ಕಟ್ಟಲಾಗಿರುವ ಅಯೋಧ್ಯೆಯ ರಾಮ ಮಂದಿರದ ಉದ್ಘಾಟನೆಯನ್ನು “ಪ್ರತಿಗಾಮಿ ರಾಜಕೀಯ”ದ ದ್ಯೋತಕ ಎಂದು ಖ್ಯಾತ ನಿರ್ದೇಶಕ ಪಾ ರಂಜಿತ್ ಅವರು ಕರೆದಿದ್ದಾರೆ. ದೇಶದ ಭವಿಷ್ಯವು ಅಪಾಯದಲ್ಲಿದೆ ಎಂದು ಹೇಳಿರುವ ಅವರು, ನಟ ರಜನಿಕಾಂತ್ ರಾಮ ಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದು ಅವರ ವೈಯಕ್ತಿಕ ಆಯ್ಕೆಯಾಗಿದೆ, ಆದರೆ ಅಂದು ಅವರು ನೀಡಿದ್ದ ಹೇಳಿಕೆಯ ಹಿಂದಿನ ರಾಜಕೀಯವನ್ನು ಪ್ರಶ್ನಿಸಬೇಕಾಗಿದೆ ಎಂದು ತಿಳಿಸಿದ್ದಾರೆ.

ತಮ್ಮ ನೀಲಂ ಬ್ಯಾನರ್‌ನಡಿಯಲ್ಲಿ ನಿರ್ಮಾಣವಾಗುತ್ತಿರುವ ಮುಂಬರುವ ತಮಿಳು ಚಲನಚಿತ್ರ ಬ್ಲೂ ಸ್ಟಾರ್‌ನ ಪತ್ರಿಕಾಗೋಷ್ಠಿಯಲ್ಲಿ ಪಾ ರಂಜಿತ್ ಮಾತನಾಡುತ್ತಿದ್ದರು.

ಇದನ್ನೂ ಓದಿ: ಪುಣೆ | ‘ಜೈ ಶ್ರೀ ರಾಮ್’ ಕೂಗುತ್ತಾ ಎಫ್‌ಟಿಐಐ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ ಹಿಂದುತ್ವದ ಗುಂಪು

“ಇಂದು ನಾವು ನಮ್ಮ ಮನೆಗಳಲ್ಲಿ ಕರ್ಪೂರವನ್ನು ಬೆಳಗಿಸದಿದ್ದರೆ ನಮ್ಮನ್ನು ಭಯೋತ್ಪಾದಕರು ಎಂದು ಪರಿಗಣಿಸುವ ಹಂತದಲ್ಲಿ ನಾವಿದ್ದೇವೆ. ದೇಶವು ಅಪಾಯಕಾರಿ ಭವಿಷ್ಯದತ್ತ ಸಾಗುತ್ತಿದ್ದು, ಮುಂದಿನ ಐದರಿಂದ ಹತ್ತು ವರ್ಷಗಳಲ್ಲಿ ನಾವು ಯಾವ ರೀತಿಯ ಭಾರತದಲ್ಲಿ ವಾಸಿಸುತ್ತೇವೆ ಎಂಬ ಆತಂಕ ನನಗಿದೆ” ಎಂದು ಅವರು ಹೇಳಿದ್ದಾರೆ.

ಕಟ್ಟಡದ ಉದ್ಘಾಟನೆಯಲ್ಲಿ ನಟ ರಜನಿಕಾಂತ್ ಭಾಗವಹಿಸಿರುವ ಬಗ್ಗೆಗಿನ ಪ್ರಶ್ನೆಗೆ ಉತ್ತರಿಸಿರುವ ಅವರು, “ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಅವರ ವೈಯಕ್ತಿಕ ಆಯ್ಕೆಯಾಗಿದೆ. 500 ವರ್ಷಗಳಷ್ಟು ಹಳೆಯ ಸಮಸ್ಯೆಗೆ ಅಂತ್ಯ ಹಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಆದರೆ ಆ ಸಮಸ್ಯೆಯ ಹಿಂದಿನ ರಾಜಕೀಯವನ್ನು ನಾವು ಪ್ರಶ್ನಿಸಬೇಕಾಗಿದೆ” ಎಂದು ಹೇಳಿದ್ದಾರೆ. ಅದರ ಬಗ್ಗೆ ನನ್ನ ಅಭಿಪ್ರಾಯಗಳು ಅದು ಸರಳವಾದ ಸರಿ ಅಥವಾ ತಪ್ಪು ಎಂಬುದನ್ನೂ ಮೀರಿದೆ ಎಂದು ರಂಜಿತ್ ತಿಳಿಸಿದ್ದಾರೆ.

ನಿರ್ದೇಶಕ ಪಾ ರಂಜಿತ್ ಅವರು ಚಿಯಾನ್ ವಿಕ್ರಮ್ ನಾಯಕನಾಗಿ ನಟಿಸಿರುವ ತಂಗಲನ್ ಬಿಡುಗಡೆಗೆ ಕಾಯುತ್ತಿದ್ದಾರೆ. ಮತ್ತೊಂದೆಡೆ, ನಟ ರಜನಿಕಾಂತ್ ಅವರು ಲಾಲ್ ಸಲಾಮ್‌ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ ಜನಪ್ರಿಯ ತಮಿಳು ಸಿನಿಮಾ ಜೈ ಭೀಮ್‌ನ ನಿರ್ದೇಶಕ ಟಿಜೆ ಜ್ಞಾನವೇಲ್ ಅವರ ವೆಟ್ಟೈಯಾನ್ ಚಿತ್ರದಲ್ಲೂ ಅವರು ಪಾತ್ರದಲ್ಲಿದ್ದಾರೆ.

ವಿಡಿಯೊ ನೋಡಿ: #ಮಂಗಳೂರು – ರಾಷ್ಟ್ರ ಧ್ವಜ ಹಾರಿಸುವ ಅಶೋಕ ಸ್ಥಂಬದಲ್ಲಿ #ಆರೆಸ್ಸೆಸ್‌ ಬಾವುಟ ಹಾರಿಸಿದ ಕಿಡಿಗೇಡಿಗಳು

Donate Janashakthi Media

Leave a Reply

Your email address will not be published. Required fields are marked *