ರಕ್ತ ಶೇಖರಣೆ ಬ್ಯಾಂಕ್‌ಗಳಲ್ಲಿ ರಕ್ತ ಕೊರತೆ: ರಕ್ತದಾನ ಪ್ರಮಾಣದಲ್ಲಿ ಭಾರಿ ಇಳಿಕೆ

ಬೆಂಗಳೂರು: ನಗರದಲ್ಲಿ ರಕ್ತದ ಕೊರತೆ ಮತ್ತೆ ಎದುರಾಗಿದೆ. ರಕ್ತ ಶೇಖರಣೆ ಮಾಡಿಕೊಳ್ಳುವ ಬ್ಯಾಂಕ್‌ಗಳು ಕೊರೊನಾದಿಂದ ಮತ್ತಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಸೆಪ್ಟೆಂಬರ್ ತಿಂಗಳಿನಿಂದ ನವೆಂಬರ್‌ ವರೆಗೂ ಚೇತರಿಕೆ ಕಂಡಿದ್ದ ರಕ್ತ ಸಂಗ್ರಹಣೆ ಕಾರ್ಯ ಮತ್ತೆ ಸಮಸ್ಯೆಗಳನ್ನು ಎದುರಿಸುತ್ತಿದೆ. ಡಿಸೆಂಬರ್ ತಿಂಗಳಿನಿಂದ ರಕ್ತದಾನಿಗಳ ಪ್ರಮಾಣದಲ್ಲಿ ಭಾರೀ ಇಳಿಕೆ ಉಂಟಾಗಿದೆ.

ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆ ರಕ್ತ ಶೇಖರಣೆ ಮಾಡುವ ಸಂಸ್ಥೆಗಳಲ್ಲಿ ನಿರ್ದಿಷ್ಟ ಗುಂಪಿನ ರಕ್ತಗಳು ಸಂಗ್ರಹವಿಲ್ಲವೆಂದು ತಿಳಿಸುತ್ತಿದ್ದಾರೆ. ಈ ಮೊದಲು ತಿಂಗಳಿಗೆ 3 ಸಾವಿರ ಯೂನಿಟ್ ರಕ್ತದ ಯೂನಿಟ್‌ ಸಂಗ್ರಹ ಆಗುತ್ತಿತ್ತು. ಆದರೆ ಈಗ 800 ಯೂನಿಟ್ ರಕ್ತ ಸಂಗ್ರಹ ಕೂಡ ಸಿಗ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳಿಗೆ ತಕ್ಷಣಕ್ಕೆ ರಕ್ತ ಬೇಕೆಂದು ಕರೆ ಬಂದರೆ, ಸಂಗ್ರಹಿಸುವುದು ಕಷ್ಟವಾಗಿದೆ. ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಋಕ್ತ ಸಿಗದೆ ಪರದಾಟ ಉಂಟಾಗಿದೆ ಎಂದು ತಿಳಿದುಬಂದಿದೆ. ತುರ್ತು ರಕ್ತದ ಅವಶ್ಯಕತೆ ಇರುವ ರೋಗಿಗಳು, ಅಪಘಾತಕ್ಕೊಳಗಾದ ವ್ಯಕ್ತಿಗಳು ಮುಂತಾದವರಿಗೆ ರಕ್ತದ ಅವಶ್ಯಕತೆ ಇರುತ್ತದೆ. ಆದರೆ, ಇದೀಗ ರಕ್ತದಾನ ಮಾಡುವ ಪ್ರಮಾಣವೂ ಕಡಿಮೆಯಾಗಿದೆ.

ರಕ್ತದಾನ ಪ್ರಮಾಣ ಇಳಿಕೆಗೆ ಕಾರಣಗಳು

  • ಕೊರೊನಾ ಹಿನ್ನೆಲೆ ಕಾಲೇಜುಗಳು ಬಂದ್ ಆಗಿವೆ
  • ಸಭೆ, ಸಮಾರಂಭಗಳಿಗೆ ಅವಕಾಶ ಇಲ್ಲ
  • ಐಟಿ- ಬಿಟಿ ಕಂಪನಿಗಳು ತಮ್ಮ ಸಿಬ್ಬಂದಿಗಳಿಗೆ ಮನೆಗಳಿಂದಲೇ ಕೆಲಸ ಮಾಡಲು ತಿಳಿಸಲಾಗಿದೆ
  • ಸಾಕಷ್ಟು ವಲಯಗಳಲ್ಲಿ ರಕ್ತದಾನ ಶಿಬಿರಗಳಿಂದ ರಕ್ತ ಸಂಗ್ರಹಣೆ ಹೆಚ್ಚಾಗುತ್ತಿತ್ತು. ಆದರೆ ಈಗ ಆಗುತ್ತಿಲ್ಲ
  • ಕೊರೊನಾದಿಂದ ಆರೋಗ್ಯವಂತರೂ ರಕ್ತದಾನ ಮಾಡಲು ಹಿಂದೇಟು ಹಾಕುತ್ತಿದ್ದಾರೆ

ಆರೋಗ್ಯವಂತರು ರಕ್ತದಾನ ಮಾಡುವಂತೆ ಮನವಿ

ರಕ್ತ ಸಂಗ್ರಹಣೆ ಬ್ಯಾಂಕ್​ಗಳಲ್ಲಿ ರಕ್ತದ ಕೊರತೆ ಹಿನ್ನೆಲೆ ಆರೋಗ್ಯವಂತರು ರಕ್ತದಾನ ಮಾಡುವಂತೆ ಬ್ಯಾಂಕ್‌ಗಳು ಮನವಿ ಮಾಡಿವೆ. ರೆಡ್ ಕ್ರಾಸ್ ಸೇರಿದಂತೆ ಹಲವು ಆಸ್ಪತ್ರೆಗಳಲ್ಲಿ ರಕ್ತ ಸಿಗುತ್ತಿಲ್ಲ. ಹೀಗಾಗಿ ತೀರಾ ತುರ್ತು ಅವಶ್ಯವಿದ್ದವರಿಗೆ ಮಾತ್ರ ರಕ್ತ ಸಿಗುತ್ತಿದೆ. ಸಮಸ್ಯೆ ಹೇಗೆ ನಿಭಾಯಿಸೋದು ಎಂದು ಬ್ಯಾಂಕುಗಳಿಗೆ ಚಿಂತೆಯಾಗಿದೆ.

ಕಳೆದ ವರ್ಷ ಕೊವಿಡ್ ಸಂದರ್ಭದಲ್ಲಿ ಕೂಡ ಇದೇ ಸಮಸ್ಯೆ ಎದುರಾಗಿತ್ತು. ಸ್ವಲ್ಪ ಚೇತರಿಕೆ ಕಾಣುವಷ್ಟುವರಲ್ಲಿ ಮತ್ತೆ ರಕ್ತಕ್ಕೆ ಕೊರತೆ ಎದುರಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸಿ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ.

ತುರ್ತಾಗಿ ರಕ್ತ ಸಿಗದೆ ಯಾರಿಗೆಲ್ಲ ಸಮಸ್ಯೆ

  • ನಿತ್ಯ ಡಯಾಲಿಸಿಸ್​ಗೆ ಬರುವ ರೋಗಿಗಳಿಗೆ ಸಮಸ್ಯೆ
  • ಆಕ್ಸಿಡೆಂಟ್ ಪ್ರಕರಣಗಳಲ್ಲಿ‌ ತೀವ್ರ ರಕ್ತಸ್ರಾವ ಆದವರಿಗೆ ರಕ್ತ ಒದಗಿಸಲು ಕಷ್ಟ
  • ಗರ್ಭಿಣಿ ಹೆಂಗಸರಿಗೆ ರಕ್ತಕ್ಕೆ ಅಭಾವ ಉಂಟಾಗಿದೆ
Donate Janashakthi Media

Leave a Reply

Your email address will not be published. Required fields are marked *