ಬೆಂಗಳೂರು| ‘ಕರಾವಳಿಯ ರಕ್ತ-ಕಣ್ಣೀರು’ ಪುಸ್ತಕ ಬಿಡುಗಡೆ ಫೆಬ್ರವರಿ 15ರಂದು

ಬೆಂಗಳೂರು: ಫೆ.15ರ ಭಾನುವಾರದಂದು ಪತ್ರಕರ್ತ ಇರ್ಷಾದ್ ಉಪ್ಪಿನಂಗಡಿ ಅವರು ಬರೆದಿರುವ, ಕರಾವಳಿ ಕರ್ನಾಟಕದ ಮತೀಯ ಸಂಘರ್ಷದ ಕರಾಳ ಮುಖವನ್ನು ಅನಾವರಣಗೊಳಿಸುವ ‘ಕರಾವಳಿಯ ರಕ್ತ-ಕಣ್ಣೀರು’ ಕೃತಿ ಬೆಂಗಳೂರಿನ ಗಾಂಧಿ ಭವನದಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ :  ಜಲಾಶಯ ಮಟ್ಟ ಎತ್ತರಿಸಿ, ನೀರಾವರಿ ಕ್ಷೇತ್ರ ವಿಸ್ತರಿಸಲು ಆಗ್ರಹ; ರೈತರು ಪ್ರತಿಭಟನೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2015 ರಿಂದ 2025ರ ಅವಧಿಯಲ್ಲಿ ನಡೆದ ಮತೀಯ ಸಂಘರ್ಷಗಳು ಹಾಗೂ ಪ್ರತಿಕಾರದ ದಾಳಿಗಳಿಗೆ ಬಲಿಯಾದ ಅಮಾಯಕ ಕುಟುಂಬಗಳ ಇಂದಿನ ದಾರುಣ ಸ್ಥಿತಿಗತಿಗಳನ್ನು ದಾಖಲಿಸಲಾಗಿದೆ. ದ್ವೇಷದ ರಾಜಕಾರಣವು ಸಾಮಾನ್ಯ ಕುಟುಂಬಗಳನ್ನು ಹೇಗೆ ಬೀದಿಗೆ ತರುತ್ತದೆ ಎಂಬ ಚಿತ್ರಣ ಈ ಪುಸ್ತಕದಲ್ಲಿದೆ. ಈ ಕೃತಿಯು ‘ಅಹರ್ನಿಶಿ ಪ್ರಕಾಶನ’ ಪ್ರಕಟಿಸಿದೆ

ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಸಿನಿಮಾ ಮತ್ತು ರಂಗಭೂಮಿ ನಟ ಕಿಶೋರ್ ಕುಮಾರ್, ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ಹೋರಾಟಗಾರರಾದ ಮುನೀರ್ ಕಾಟಿಪಳ್ಳ, ಅಹರ್ನಿಶಿ ಪ್ರಕಾಶನದ ಅಕ್ಷತಾ ಹುಂಚದಕಟ್ಟೆ ಭಾಗಿಯಾಗಲಿದ್ದಾರೆ.

ಈ ಪುಸ್ತಕದಲ್ಲಿ 2015ರಿಂದ 2025ರ ತನಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತೀಯ ಪ್ರತೀಕಾರಕ್ಕೆ ಬಲಿಯಾದ ಅಮಾಯಕರ ಕುಟುಂಬಗಳ ನೋವು, ತಲ್ಲಣ, ಆತಂಕಗಳನ್ನು ತೆರೆದಿಡುವ ಪ್ರಯತ್ನ ನಡೆಸಲಾಗಿದೆ.

ಇದನ್ನೂ ನೋಡಿ : ಅಖಿಲ ಭಾರತ ಮುಷ್ಕರ| ಪೊಲೀಸರ ದರ್ಪ – ಮಾನವೀಯತೆ ಕಳೆದುಕೊಂಡ ಸರಕಾರ Janashakthi Media

Donate Janashakthi Media

Leave a Reply

Your email address will not be published. Required fields are marked *