ಬೆಂಗಳೂರು: ಸಂಸತ್ತಿನ ಮುಂಗಾರು ಅಧಿವೇಶನದ ಸಂದರ್ಭದಲ್ಲಿ ಸದನದಲ್ಲಿ ಅಶಿಸ್ತಿನ ವರ್ತನೆಯೆಂದು ಕರೆಯಲ್ಪಡುವ ಕಾರಣಕ್ಕಾಗಿ ರಾಜ್ಯಸಭೆಯ ವಿರೋಧ ಪಕ್ಷಗಳ 12 ಸಂಸದರನ್ನು ಅಮಾನತುಗೊಳಿಸಿದ ಘೋರ ಪ್ರಜಾಸತ್ತಾತ್ಮಕವಲ್ಲದ ಕ್ರಮವನ್ನು ಸೆಂಟರ್ ಆಫ್ ಇಂಡಿಯಾನ್ ಟ್ರೇಡ್ ಯೂನಿಯನ್ (ಸಿಐಟಿಯು) ಖಂಡಿಸಿದೆ.
ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಸಿಐಟಿಯು ರಾಜ್ಯ ಅಧ್ಯಕ್ಷೆ ಎಸ್. ವರಲಕ್ಷ್ಮಿ ಅಮಾನತುಗೊಂಡ ಸಂಸದರಲ್ಲಿ ಸಿಐಟಿಯುನ ರಾಷ್ಟ್ರೀಯ ಕಾರ್ಯದರ್ಶಿ ಎಳಮರಮ್ ಕರೀಂ ಸೇರಿದಂತೆ ಇತರರು ಸೇರಿದ್ದಾರೆ. ವಾಸ್ತವವಾಗಿ ಸಂಬಂಧಪಟ್ಟ ದಿನದ ಕಲಾಪದಲ್ಲಿ ಪಟ್ಟಿ ಮಾಡಲಾದ ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಕಂಪನಿಗಳ ಖಾಸಗೀಕರಣ/ಹೂಡಿಕೆ ಮತ್ತು ಮಸೂದೆಯ ಮೇಲೆ ಮತ ಚಲಾಯಿಸಲು, ಸಾಮಾನ್ಯ ವಿಮಾ ತಿದ್ದುಪಡಿ ಮಸೂದೆಯ ಮೇಲೆ ರಚನಾತ್ಮಕ ಚರ್ಚೆ ನಡೆಸಬೇಕೆಂಬ ವಿರೋಧ ಪಕ್ಷದ ಸಂಸದರ ಬೇಡಿಕೆಯು ನ್ಯಾಯ ಸಮ್ಮತವಾಗಿತ್ತು ಆಧಾರ ರಹಿತ ಮನವಿಗಳ ಮೇಲೆ ಅಪ್ರಜಾಸತ್ತಾತ್ಮಕ ರೀತಿಯಲ್ಲಿ ಈ ಅವಕಾಶವನ್ನು ನಿರಾಕರಿಸಲಾಗಿದೆ ಎಂದು ತಿಳಿಸಿರುವ ಸಿಐಟಿಯು ಸಂಘಟನೆಯು ಘಟನೆಯ ಹಿಂದಿನ ತಾರ್ಕಿಕತೆಯನ್ನು ತಿಳಿಸಿದ್ದಾರೆ.
ಸಿಐಟಿಯು ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಇಂತಹ ಆಧಾರ ರಹಿತ ಮನವಿಗಳ ಮೇಲೆ ಇಡೀ ಚಳಿಗಾಲದ ಅಧಿವೇಶನಕ್ಕೆ ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸುವುದು ಮೂಲಭೂತ ಪ್ರಜಾಸತ್ತಾತ್ಮಕ ಮಾನದಂಡಗಳನ್ನು ಮತ್ತು ಸಂಸತ್ತಿನ ಪ್ರಕ್ರಿಯೆಯನ್ನು ತುಳಿಯುವುದಕ್ಕೆ ಸಮಾನವಾಗಿದೆ. ಪ್ರಸ್ತುತ ಸಂಸತ್ತಿನ ಅಧಿವೇಶನದಲ್ಲಿ ಬಿಜೆಪಿ ಸರ್ಕಾರವು ಬ್ಯಾಂಕ್ ರಾಷ್ಟ್ರೀಕರಣ ತಿದ್ದುಪಡಿ ಮಸೂದೆ, ವಿದ್ಯುತ್ ತಿದ್ದುಪಡಿ ಮಸೂದೆ, ಪಿಎಫ್‌ಆರ್‌ಡಿಎ ತಿದ್ದುಪಡಿ ಮಸೂದೆ ಮುಂತಾದ ವಿನಾಶಕಾರಿ ಶಾಸನಗಳನ್ನು ಯೋಜಿಸಿದೆ. ಈ ಎಲ್ಲಾ ತಿದ್ದುಪಡಿಗಳ ಮೂಲಕ ತನ್ನ ಆಕ್ರಮಣಕಾರಿ ಖಾಸಗೀಕರಣದ ಪ್ರಕ್ರಿಯೆಯನ್ನು ವೇಗವಾಗಿ ಜಾರಿ ಮಾಡಲು ಹೊರಟಿದೆ. ಹಾಗಾಗಿ ವಿರೋಧ ಪಕ್ಷದ ಸಂಸದರ ಅಮಾನತು ಆ ಪ್ರಕ್ರಿಯೆಯನ್ನು ಸುಲಭಗೊಳಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ.
ಪ್ರಜಾಸತ್ತಾತ್ಮಕ ಸಂಸ್ಥೆಗಳು ಮತ್ತು ಜನರ ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲೆ ಸರ್ಕಾರದ ಇಂತಹ ನಿರಂಕುಶ ದಾಳಿಯನ್ನು ಸಿಐಟಿಯು ಖಂಡಿಸುತ್ತದೆ ಮತ್ತು ಸರ್ಕಾರದ ಇಂತಹ ನಿರಂಕುಶ ಮತ್ತು ಜನವಿರೋಧಿ ವಿಧ್ವಂಸಕ ನೀತಿಗಳ ಮತ್ತು ಪ್ರಜಾಪ್ರಭುತ್ವ ವಿರೋಧಿ ನೀತಿ ಆಡಳಿತ. ವಿರುದ್ಧ ಹೋರಾಟದ ಧ್ವನಿ ಎತ್ತಲು ಶ್ರಮಜೀವಿಗಳಿಗೆ ಸಿಐಟಿಯು ಕರ್ನಾಟಕ ರಾಜ್ಯ ಸಮಿತಿಯು ಕರೆ ನೀಡಿದೆ.