ರಾಜ್ಯದಲ್ಲಿರುವುದು ಅನೈತಿಕ ಸರಕಾರ : ಸಿದ್ಧರಾಮಯ್ಯ

ಕಪ್ಪು ಪಟ್ಟಿ ಧರಿಸಿದ ಕಾಂಗ್ರೆಸ್‌ ಸದಸ್ಯರಿಂದ ಸದನ ಸಭಾತ್ಯಾಗ

ಬೆಂಗಳೂರು : ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರಕಾರವು ಅನೈತಿಕವಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪರವರು ಅನೈತಿಕ ಬಜೆಟ್‌ ಮಂಡಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಸದಸ್ಯರು ವಿಧಾನಸಭೆಯಲ್ಲಿ ಬಜೆಟ್‌ ಭಾಷಣ ಆರಂಭಕ್ಕೂ ಮೊದಲು ಗದ್ದಲ ಏರ್ಪಡಿಸಿದರು.

ಬಜೆಟ್‌ ಅಧಿವೇಶನ ಆರಂಭಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯರವರು ʻʻಮುಖ್ಯಮಂತ್ರಿ ಒಳಗೊಂಡು, ಇಡೀ ಸರಕಾರವ ಅನೈತಿಕ. ಕೂಪವಾಗಿದೆ. ಇದನ್ನು ಪ್ರತಿಭಟಿಸಿ ಕಾಂಗ್ರೆಸ್‌ನ ಎಲ್ಲ ಸದಸ್ಯರು ಕಪ್ಪು ಪಟ್ಟಿಯನ್ನು ಧರಿಸಿ ಸಭಾತ್ಯಾಗ ಮಾಡುವುದಾಗಿʼʼ ತಿಳಿಸಿದರು.

ಯಡಿಯೂರಪ್ಪ ಹಾಗೂ ಮುರಗೇಶ್‌ ನಿರಾಣಿ ಅವರು ಭೂ ವ್ಯವಹಾರದಲ್ಲಿ ಅಕ್ರಮದಲ್ಲಿ ಭಾಗಿಯಾಗಿರುವ ಯಡಿಯೂರಪ್ಪನವರು ವಿಚಾರಣೆ ಎದುರಿಸುತ್ತಿದ್ದಾರೆ. ಲೋಕಾಯುಕ್ತದಲ್ಲಿ ದಾಖಲಾದ ಪ್ರಕರಣದ ರದ್ದತಿಗಾಗಿ ಹೈಕೋರ್ಟ್‌ ಮೋರೆ ಹೋದರು. ಪ್ರಕರಣ ರದ್ದುಪಡಿಸದ ಹೈಕೊರ್ಟ್‌ ವಿಚಾರಣೆಗೆ ಆದೇಶ ನೀಡಿತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸದ್ಯ ಬಂಧನವಾಗದಂತೆ ರಕ್ಷಣೆ ಪಡೆಯಲು ಮೋರೆ ಹೋದ ಇವರು ಸದ್ಯ ಜಾಮೀನಿನಲ್ಲಿ ಇದ್ದಾರೆ.

ಈಗಾಗಲೇ ಆರು ಜನ ಸಚಿವರು ಸಹ ತಮ್ಮ ಬಗ್ಗೆ ಮಾನಹಾನಿಕರ ಸುದ್ದಿ ವರದಿ ಮಾಡಬಾರದೆಂದು ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವುದನ್ನು ನೋಡಿದರೆ, ಇವರು ಮಾಡಿದ್ದಾರೆ ಅನ್ನಿಸುವುದಿಲ್ಲವೇ ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಮುಖ್ಯಮಂತ್ರಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಅವರು, ನೈತಿಕತೆ ಇಲ್ಲದ ಈ ಸರಕಾರ ಅಧಿಕಾರದಲ್ಲಿ ಮುಂದುವರೆಯುವುದನ್ನು ನಾವು ವಿರೋಧಿಸುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್‌ ಸದಸ್ಯರ ಗದ್ದಲವನ್ನು ಲೆಕ್ಕಿಸದ ಮುಖ್ಯಮಂತ್ರಿ ಯಡಿಯೂರಪ್ಪ ಭಾಷಣ ಮುಂದುವರೆಸಿದರು. ಬಜೆಟ್‌ ಭಾಷಣ ನಮಗೆ ಬೇಕಾಗಿಲ್ಲ, ಸಭಾತ್ಯಾಗ ಮಾಡುತ್ತಿದ್ದೇವೆ ಎಂದು ಹೊರ ನಡೆದರು. ಅವರೊಂದಿಗೆ ಕಾಂಗ್ರೆಸ್‌ ಸದಸ್ಯರು ಸಹ ಹೊರ ನಡೆದರು.

 

Donate Janashakthi Media

Leave a Reply

Your email address will not be published. Required fields are marked *