ರಾಜ್ಯದಲ್ಲಿ ಈಗ ಪ್ರಾಧಿಕಾರದ ರಾಜಕೀಯ :  ಸರಕಾರದ ನಿಲುವಿಗೆ ಚಿಂತಕರ ಆಕ್ರೋಶ

ರಾಜ್ಯದಲ್ಲಿ ಈಗ ಪ್ರಾಧಿಕಾರದ ಚರ್ಚೆ ಸಾಕಷ್ಟು ಸದ್ದು ಮಾಡುತ್ತಿದೆ. ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಲಾಗಿದೆ ಎಂದು ಸರಕಾರ ಸುತ್ತೋಲೆ ಹೊರಡಿಸಿದ ಮೇಲೆ ಪರ ವಿರೋಧಧ ಚರ್ಚೆಗಳು ನಡೆದವು. ಇದರ ಬೆನ್ನಲ್ಲೆ ಲಿಂಗಾಯತ ಹಾಗೂ ಒಕ್ಕಲಿಗ ಪ್ರಾಧಿಕಾರ ರಚಿಸುವಂತೆ ಚರ್ಚೆಗಳು ಆರಂಭಗೊಂಡವು. ಏಕಾ ಏಕಿ ಈ ಪ್ರಾಧಿಕಾರ ರಚನೆ ಮುನ್ನಲೆಗೆ ಬಂದದ್ದು ಯಾಕೆ? ಇದರ ಹಿಂದಿರುವ ರಾಜಕೀಯ ಉದ್ದೇಶ ಏನು? ಕನ್ನಡಪರ ಸಂಘಟನೆಗಳ ಹಾಗೂ ಸಾಹಿತಿಗಳ ಕೂಗಿಗೆ ಸರಕಾರ ತನ್ನ ನಿಲುವನ್ನು ಬದಲಾಯಿಸಿಕೊಳ್ಳಬಹುದಾ?

ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ  ನೇತೃತ್ವದ ಬಜೆಪಿ ಸರಕಾರ ನವೆಂಬರ್ 13 ರಂದು  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ  ಆದೇಶವನ್ನು ಮಾಡುವ ಮೂಲಕ ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು  ರಚಿಸಿತ್ತು.  ಮತ್ತು ಈ ಪ್ರಾಧಿಕಾರಕ್ಕೆ 50  ಕೋಟಿ ರೂ ಗಳ ಅನುದಾನವನ್ನು ಮೀಸಲಿಟ್ಟಿತ್ತು. ಸರಕಾರದ ಈ ನಡೆಗೆ ಕನ್ನಡಪರ ಸಂಘಟನೆಗಳು ಹಾಗೂ ಸಾಹಿತಿಗಳು ವಿರೋಧವನ್ನು ವ್ಯಕ್ತಪಡಿಸಿದ್ದರು.   ಪ್ರತಿಭಟನೆಯನ್ನು ಕೂಡಾ ನಡೆಸಲಾಗಿತ್ತು, ಸರಕಾರ ತನ್ನ ನಿಲುವನ್ನು ಬದಲಿಸಿಕೊಳ್ಳದೆ ಇದ್ದರೆ ಡಿಸೆಂಬರ್ 05 ಕ್ಕೆ ಕರ್ನಾಟಕ ಬಂದ್ ಗೆ ಕರೆ ನೀಡುವುದಾಗಿ ಹೇಳಿದ್ದವು.

ರಾಜ್ಯ ಸರ್ಕಾರವು ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಲು ನಿರ್ಧಾರ ಕೈಗೊಂಡಿರುವ ಕ್ರಮವನ್ನು  ಬಂಡಾಯ ಸಾಹಿತ್ಯ ಸಂಘಟನೆ  ತೀವ್ರವಾಗಿ ವಿರೋಧಿಸಿತ್ತು. ಮರಾಠ ಮತದಾರರ ಮನ ಒಲಿಸಲು ಒಂದು ಪ್ರಾಧಿಕಾರವನ್ನೇ ಸ್ಥಾಪಿಸುವುದು ಅತಾತ್ವಿಕ ಮತ್ತು ಅನೈತಿಕ ನಡೆಯಾಗಿದೆ. ಬೆಳಗಾವಿಯಂತಹ ಗಡಿನಾಡಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಕರಾಳ ದಿನವನ್ನಾಗಿ ಆಚರಿಸಿ ಕರ್ನಾಟಕ ಏಕೀಕರಣದ ಆಶಯವನ್ನು ಪ್ರಶ್ನಿಸುವ ಮರಾಠಿಗರು ಇರುವಾಗ ಇಂತಹ ಪ್ರಾಧಿಕಾರದ ಸ್ಥಾಪನೆ ಪ್ರಶ್ನಾರ್ಹವಾಗಿದೆ ಎಂದು ಬಂಡಾಯ ಸಾಹಿತ್ಯ ಸಂಘಟನೆಯ ಬರಗೂರು ರಾಮಚಂದ್ರಪ್ಪನವರು ಸರಕಾರಕ್ಕೆ ಛಾಟೀ  ಬೀಸಿದೆ.

ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ಮಾಡಿರುವುದು ಕನ್ನಡಿಗರಿಗೆ ಮಾಡಿದ ಮೋಸ, ಈ ಒಂದು ಪ್ರಾಧಿಕಾರವನ್ನು ಹಿಂಪಡೆಯಬೇಕು ಇಲ್ಲವಾದರೆ ಯಡಿಯೂರಪ್ಪನವರು ರಾಜೀನಾಮೆ ನೀಡಬೇಕು.  ಡಿ. 5 ರಂದು ಕರ್ನಾಟಕ ಬಂದ್ ಗೆ ರೈತ ಸಂಘಟನೆಗಳು ಎಲ್ಲಾ ಕನ್ನಡ ಪರ ಸಂಘಟನೆಗಳು ಬೆಂಬಲವನ್ನು ಕೇಳಲಾಗುವುದು ಎಂದು ವಾಟಾಳ್ ನಾಗರಾಜ‍ ಮನವಿ ಮಾಡಿದ್ದಾರೆ.

ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಯ ಬೆನ್ನಲ್ಲೆ ಲಿಂಗಾಯತ ಪ್ರಾಧಿಕಾರ ರಚಿಸುವಂತೆ ಸಾಕಷ್ಟು ಚರ್ಚೆಗಳು ನಡೆದೆವು, ಮಾರಾಠ ಪ್ರಾಧಿಕಾರವನ್ನು ರಚಿಸಿ ಸಮಸ್ಯೆಯನ್ನು ಮೈಮೇಲೆ ಹಾಕೊಕೊಂಡಿದ್ದ ಸರಕಾರಕ್ಕೆ ಲಿಂಗಾಯತ ಪ್ರಾಧಿಕಾರ ರಚಿಸುವುದು ಅನಿವಾರ್ಯವಾಯಿತು. ಅಕ್ಟೋಬರ್  17  ಕರ್ನಾಟಕ  ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿತು. ಇದರ ಬೆನ್ನಲ್ಲೆ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ ಒಕ್ಕಲಿಗರ ಅಭಿವೃದ್ಧಿ ನಿಗಮವನ್ನು ರಚಿಸಲಿ ಎಂದು ಸರ್ಕಾರಕ್ಕೆ  ಆಗ್ರಹಿಸಿದ್ದಾರೆ.

ಸರಕಾರ ಈ ರೀತಿ ಕೆಳಿದವರಿಗೊಂದು ಪ್ರಾಧಿಕಾರವನ್ನು ರಚಿಸುತ್ತಾ ಹೋದರೆ ಬರೀ ಪ್ರಾಧಿಕಾರಗಳೆ ತುಂಬಿಕೊಳ್ಳುತ್ತವೆ ಹೊರತು ಅಭಿವೃದ್ಧಿಯಲ್ಲ. ಸರಕಾರ ತನ್ನ ರಾಜಕೀಯ ಲಾಭಕ್ಕಾಗಿ ಜಾತಿಗಳನ್ನು ಓಲೈಸುವ ಕೆಲಸ ಮಾಡುತ್ತಿದೆ ಎಂದು ಪ್ರಗತಿಪರ ಚಿಂತಕ ಡಾ.ಕೆ.ಮರುಳಸಿದ್ದಪ್ಪ ಆರೋಪಿಸಿದ್ದಾರೆ.

ವೀರಶೈವ ಲಿಂಗಾಯತ ಪ್ರಾಧಿಕಾರವು ಮಠ ಮಾನ್ಯಗಳಿಗೆ ಸಾಕಷ್ಟು ಹಣ ನೀಡುವ ಪ್ರಾಧಿಕಾರವಾಗಲಿದೆ. ರಾಜ್ಯದಲ್ಲಿ ಶೋಷಿತ ಜನಿರಿದ್ದಾರೆ, ಅನೇಕ ಸಮುದಾಯದ ಭಾಷೆಗಳು ನಾಶವಾಗುವ ಹಂತದಲ್ಲಿವೆ, ಅವುಗಳು ಸರಕಾರದ ಕಣ್ಣಿಗೆ ಬೀಳುವುದಿಲ್ಲವೆ ಎಂದು ಜಾನಪದ ವಿದ್ವಾಂಸರಾದ ಡಾ. ಪುರುಷೋತ್ತಮ ಬಿಳಿಮಲೆಯವರು ಸರಕಾರವನ್ನು ಪ್ರಶ್ನಿಸಿದ್ದಾರೆ.

ಪ್ರಾಧಿಕಾರಿಗಳು ಜಾತಿ ಕೇಂದ್ರಿತವಾಗಲಿ, ಜನಾಂಗ ಕೇಂದ್ರಿತವಾಗಿ ಇರಬಾರದು ಸರಕಾರ ತೆಗೆದುಕೊಂಡ ನಿರ್ಧಾರ ಪ್ರಜಾಪ್ರಭುತ್ವವನ್ನು ಅಧ:ಪತನಕ್ಕೆ ಕೊಂಡೊಯ್ಯುವಂತಾಗಿದೆ ಎಂದು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಅರವಿಂದ ಮಾಲಗತ್ತಿ ಸರಕಾರದ ನಡೆಗೆ  ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ.

ಸರಕಾರದ ನಡೆಗೆ ಸಾಕಷ್ಟು ವಿರೋಧ ಬಂದ ಹಿನ್ನಲೆಯಲ್ಲಿ ಮರಾಠ ಪ್ರಾಧಿಕರದ ಪ್ರಸ್ತಾಪವನ್ನು ಕೈ ಬಿಟ್ಟು ಮರಾಠ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವ ಕುರಿತು ನಿನ್ನೆ ನಡೆದ ಸಂಪುಟ ಸಭೆಯಲ್ಲಿ ಅಂತಿಮಗೊಳಿಸಲಾಗಿದೆ. ಸರಕಾರ ಕರ್ನಾಟಕದ ಅಭಿವೃದ್ಧಿ ಕಡೆ ಗಮನ ನೀಡಿದರೆ ಕಲ್ಯಾಣ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಬಹುದು, ಪ್ರಾಧಿಕಾರ ಅಥವಾ ನಿಗಮ ರಚನೆ ರಾಜಕೀಯವಾಗಿ ಲಾಭವಾಗಬಹುದು ಇಲ್ಲವೆ ರಾಜಕೀಯ ಹಿಂಬಾಲಕರನ್ನು ಅಧ್ಯಕ್ಷರನ್ನಾಗಿಸುವ ಅಥವಾ ಕೆಲವಿಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಬಿಟ್ಟರೆ ಸಮಗ್ರ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದನ್ನು ಸರಕಾರ ಅರಿಯಬೇಕಿದೆ. ಆ ನಿಟ್ಟಿನಲ್ಲಿ ರಾಜ್ಯ ಸರಕಾರ ದಿಟ್ಟ ಹೆಜ್ಜೆಯನ್ನು ಹಾಕಬೇಕಿದೆ.

Donate Janashakthi Media

Leave a Reply

Your email address will not be published. Required fields are marked *