ರಾಜ್ಯದ 2.92 ಲಕ್ಷ ಕಾರ್ಮಿಕರಿಗೆ ಜಮೆ ಆಗಿಲ್ಲ ಆರ್ಥಿಕ ಪ್ಯಾಕೇಜ್‌ ನೆರವು

ಬೆಂಗಳೂರು: ಕೋವಿಡ್‌ ಎರಡನೇ ಅಲೆಯಿಂದಾಗಿ ರಾಜ್ಯದಲ್ಲಿ ಸಂಕಷ್ಟಕ್ಕೆ ಈಡಾಗಿರುವ ಜನ ವಿಭಾಗಕ್ಕೆ ರಾಜ್ಯ ಸರ್ಕಾರವು ಘೋಷಿಸಿರುವ ಆರ್ಥಿಕ ಪ್ಯಾಕೇಜ್‌ ಆರ್ಥಿಕ ನೆರವು ಕಟ್ಟಡ ಕಾರ್ಮಿಕರು ಮತ್ತು ಅಸಂಘಟಿತ ವಲಯದ ಹಲವು ವಿಭಾಗದ ಕಾರ್ಮಿಕ ವರ್ಗದ 20.74 ಲಕ್ಷ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ 30 ದಿನಗಳಲ್ಲಿ ಕಾರ್ಮಿಕ ಇಲಾಖೆಯು ನೇರ ನಗದು ವರ್ಗಾವಣೆ (ಡಿಬಿಟಿ) ಮಾಡಿದೆ. ಆದರೆ, ಇದೇ ಸಂದರ್ಭದಲ್ಲಿ ಆಧಾರ್‌ ಸಂಖ್ಯೆ ಸರಿ ಇಲ್ಲದ ಕಾರಣಕ್ಕೆ 2.92 ಲಕ್ಷ ಕಾರ್ಮಿಕರ ಖಾತೆಗಳಿಗೆ ಇನ್ನೂ ಆರ್ಥಿಕ ನೆರವಿನ ಹಣ ಜಮೆ ಆಗಿಲ್ಲ.

ರಾಜ್ಯ ಸರಕಾರವು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ತಲಾ ₹ 3 ಸಾವಿರ ಪರಿಹಾರ ಮೊತ್ತ ಘೋಷಣೆ ಮಾಡಿದ್ದವು. ಟೈಲರ್‌ಗಳು, ಗೃಹ ಕಾರ್ಮಿಕರು, ಹಮಾಲರು, ಮೆಕ್ಯಾನಿಕ್‌ಗಳು, ಕುಂಬಾರರು, ಅಗಸರು, ಕಮ್ಮಾರರು, ಮಂಡಕ್ಕಿ ಭಟ್ಟಿ ಕಾರ್ಮಿಕರು, ಕ್ಷೌರಿಕರು, ಅಕ್ಕಸಾಲಿಗರು, ಚಿಂದಿ ಆಯುವವರು ವಿಭಾಗದ 11 ವರ್ಗಗಳ ಫಲಾನುಭವಿಗಳಿಗೆ ತಲಾ ₹ 2 ಸಾವಿರದಷ್ಟು ಆರ್ಥಿಕ ನೆರವನ್ನು ಘೋಷಣೆ ಮಾಡಿ ತಿಂಗಳು ಕಳೆದಿದೆ.

ಇದನ್ನು ಓದಿ: ಮೂರು ಲಕ್ಷಕ್ಕೂ ಹೆಚ್ಚಿನ ಕಾರ್ಮಿಕರಿಗೆ ಆರ್ಥಿಕ ನೆರವು ವರ್ಗಾವಣೆಯಾಗಿಲ್ಲ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಲಾಕ್‌ಡೌನ್‌ ಪರಿಣಾಮವಾಗಿ ಆರ್ಥಿಕ ಚಟುವಟಿಕೆಗಳು ಸಂಪೂರ್ಣವಾಗಿ ಸ್ತಬ್ಧಗೊಂಡ ಪರಿಣಾಮವಾಗಿ ಜೂನ್‌ 5ರಂದು ಆರ್ಥಿಕ ನೆರವಿನ ಪ್ಯಾಕೇಜ್‌ ಅನ್ನು ಘೋಷಣೆ ಮಾಡಿದರು.

  • ಹಣ ಸಂದಾಯದ          ಡಿಬಿಟಿ            ಖಾತೆಗೆ ಜಮೆ        ತಿರಸ್ಕೃತ 
  • ಕಟ್ಟಡ ಕಾರ್ಮಿಕರು      18,20,109      15,79,358          2,40,751
  • ಅಸಂಘಟಿತ 11 ವರ್ಗ     2,53,898       2,02,790              51,108

‘ಕೋವಿಡ್‌ ಮೊದಲ ಅಲೆಯ ಸಂದರ್ಭದಲ್ಲಿ ಪರಿಹಾರ ಹಣವನ್ನು ಕಾರ್ಮಿಕರ ಬ್ಯಾಂಕ್‌ ಖಾತೆ ಆಧರಿಸಿ ಜಮೆ ಮಾಡಲಾಗಿತ್ತು. ಇಲಾಖೆಯಲ್ಲಿ ನೋಂದಾಯಿತ ಮತ್ತು ಜಿಲ್ಲಾ ಮಟ್ಟದಲ್ಲಿ ನೋಂದಾಯಿತ ಖಾತೆಗಳಿಗೆ ವ್ಯತ್ಯಾಸಗಳು ಕಂಡು ಬಂದಿದ್ದರಿಂದ ಆ ಸಂದರ್ಭದಲ್ಲಿ ಸಾಕಷ್ಟು ಗೊಂದಲ ಉಂಟಾಗಿದ್ದವು. ಪರಿಹಾರ ಹಣವನ್ನು ಪಾರದರ್ಶಕವಾಗಿ ವಿತರಿಸುವ ಉದ್ದೇಶದಿಂದ ಬ್ಯಾಂಕ್‌ ಖಾತೆಗೆ ಜೋಡಣೆಯಾದ ಆಧಾರ್‌ ಸಂಖ್ಯೆ ಬಳಸಲು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದಿಂದ (ಯುಐಡಿ) ಪರವಾನಗಿ ಪಡೆದ ಕಾರ್ಮಿಕ ಇಲಾಖೆಯು ಆಧಾರ್‌ ಆಧಾರಿತ ಬ್ಯಾಂಕ್‌ ಖಾತೆಗಳಿಗೆ ಹಣವನ್ನು ಸಂದಾಯ ಮಾಡಲು ಹೊಸ ಮಾದರಿಯನ್ನು ಕಂಡುಕೊಂಡಿದ್ದವು.

₹205.78 ಕೋಟಿ ಬೇಕು’: ‘ಅಸಂಘಟಿತ ವಲಯದ 11 ವರ್ಗಗಳಲ್ಲಿ ಸೇವಾ ಸಿಂಧು ಪೋರ್ಟಲ್‌ ಮೂಲಕ ಈವರೆಗೆ (ಜುಲೈ 5) 9.80 ಲಕ್ಷ ಅರ್ಜಿಗಳು ಸಲ್ಲಿಕೆ ಆಗಿವೆ. ಅಲ್ಲದೆ, ಅಂಬೇಡ್ಕರ್‌ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ನೋಂದಾಯಿತ 3.59 ಲಕ್ಷ ಕಾರ್ಮಿಕರು ಸೇರಿ ಒಟ್ಟು 13.39 ಲಕ್ಷ ಅರ್ಜಿಗಳು ಸ್ವೀಕೃತಗೊಂಡಿವೆ. ಅಷ್ಟೂ ಕಾರ್ಮಿಕರಿಗೆ ₹ 2 ಸಾವಿರದಂತೆ ಪರಿಹಾರ ನೀಡಲು ₹ 267.73 ಕೋಟಿ ಬೇಕಾಗಿದೆ. 3.10 ಲಕ್ಷ ಮಂದಿಗೆ ಪರಿಹಾರ ನೀಡಲು ₹ 61.95 ಕೋಟಿ ಸರ್ಕಾರ ನೀಡಿದ್ದು, ಇನ್ನೂ 10.29 ಲಕ್ಷ ಮಂದಿಗೆ ನೀಡಲು ₹ 205.78 ಕೋಟಿ ಹೆಚ್ಚುವರಿಯಾಗಿ ಬೇಕಾಗಿದೆ. ಅರ್ಜಿ ಸಲ್ಲಿಸಲು ಇದೇ 31 ಕೊನೆಯ ದಿನವಾಗಿದ್ದು, ಇನ್ನೂ 5 ಲಕ್ಷದಿಂದ 6 ಲಕ್ಷ ಅರ್ಜಿ ಸಲ್ಲಿಯಾಗುವ ನಿರೀಕ್ಷೆ ಇದೆ’ ಎಂದು ಕಾರ್ಮಿಕ ಇಲಾಖೆಯ ಆಯುಕ್ತ ಅಕ್ರಂ ಪಾಷಾ ತಿಳಿಸಿದರು.

ಇದನ್ನು ಓದಿ: ಕಟ್ಟಡ ಕಾರ್ಮಿಕರಿಗೆ ರೂ.10 ಸಾವಿರ ಹಣಕಾಸು ನೆರವಿಗೆ ಸಿಡಬ್ಲ್ಯೂಎಫ್‌ಐ ಆಗ್ರಹ

ಏಪ್ರಿಲ್‌ 27ರಿಂದ ಜೂನ್‌ 20ರವರೆಗೆ ಸುಮಾರು ಎರಡು ತಿಂಗಳು ಕೋವಿಡ್‌ ಎರಡನೇ ಅಲೆಯನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯದಲ್ಲಿ ಲಾಕ್‌ಡೌನ್‌ ಘೋಷಣೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಚಟುವಟಿಕೆಯ ಕಾರ್ಯಗಳು ಸಂಪೂರ್ಣವಾಗಿ ಸ್ತಬ್ದಗೊಂಡಿದ್ದವು. ಈ ಎರಡು ತಿಂಗಳ ಅವಧಿಯಲ್ಲಿ ಅಸಂಘಟಿತ ಕಾರ್ಮಿಕರು ತೀವ್ರತರವಾದ ಸಂಕಷ್ಟವನ್ನು ಅನುಭವಿಸಿದರು.

ಹಲವು ಕಾರ್ಮಿಕ ಸಂಘಟನೆಗಳು ರಾಜ್ಯ ಸರಕಾರವನ್ನು ಒತ್ತಾಯಿಸುತ್ತಾ ನೀಡಲಾಗುತ್ತಿರುವ ಪಡಿತರವನ್ನು ಹೆಚ್ಚಿಸಬೇಕು. ಆರ್ಥಿಕ ನೆರವಿನ ಪ್ರಮಾಣವನ್ನು ಹೆಚ್ಚಿಸಬೇಕು. ಕೂಡಲೇ ರೂ.7,500 ಮೊತ್ತವನ್ನು ಎಲ್ಲಾ ಅಸಂಘಟಿತರೂ ಅವರ ಬ್ಯಾಂಕ್‌ ಖಾತೆಗಳಿಗೆ ಜಮೆ ಮಾಡಬೇಕೆಂದು ಆಗ್ರಹಿಸಿದ್ದರು.

ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಕಾರ್ಮಿಕರಿಗೆ ವಿತರಣೆಯಾದ ಆಹಾರ ಕಿಟ್‌ ನಲ್ಲಿಯೂ ಕಳಪೆಯಾಗಿದ್ದವು ಮತ್ತು ದೊಡ್ಡ ಪ್ರಮಾಣದ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಸಹ ಕಾರ್ಮಿಕ ಸಂಘಟನೆಗಳು ಆರೋಪಿಸಿದವು.

ಇವೆಲ್ಲವೂಗಳೊಂದಿಗೆ, ಸರಕಾರ ಘೋಷಣೆ ಮಾಡಿದ ಆರ್ಥಿಕ ನೆರವನ್ನು ಹೆಚ್ಚಿಸಬೇಕು ಎಂದು ಮತ್ತು ಯಾರಿಗೆಲ್ಲ ನೆರವಿನ ಹಣ ಸಂದಾಯವಾಗಿಲ್ಲವೂ ಅವರ ವಿವರಗಳನ್ನು ಸರಿಪಡಿಸಿಕೊಳ್ಳಬೇಕಾಗಿ ಕಾರ್ಮಿಕ ಸಂಘಟನೆಗಳು ಆಗ್ರಹಿಸಿವೆ.

Donate Janashakthi Media

One thought on “ರಾಜ್ಯದ 2.92 ಲಕ್ಷ ಕಾರ್ಮಿಕರಿಗೆ ಜಮೆ ಆಗಿಲ್ಲ ಆರ್ಥಿಕ ಪ್ಯಾಕೇಜ್‌ ನೆರವು

Leave a Reply

Your email address will not be published. Required fields are marked *