ರಾಜ್ಯ ಬಜೆಟ್ ಮಾರ್ಚ್ 8ಕ್ಕೆ ಜನರ ನಿರೀಕ್ಷೆಗಳೇನು?

ಬೆಂಗಳೂರು, ಫೆ.19 : 2021-22ನೇ ಸಾಲಿನ ರಾಜ್ಯ ಬಜೆಟ್ ಅಧಿವೇಶನ ಮಾರ್ಚ್‌ 4 ರಿಂದ ಆರಂಭವಾಗಲಿದ್ದು, ಮಾ.8 ರಂದು ಬಜೆಟ್‌ ಮಂಡಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.  ಮಾರ್ಚ್ ತಿಂಗಳ ಕೊನೆಯವರೆಗೂ ಬಜೆಟ್ ಮೇಲಿನ ಚರ್ಚೆಗಳು ನಡೆಯಲಿದೆ.

ಇದನ್ನು ಓದಿ : ಶಾಸಕರ ಜೊತೆಗಿನ ಸಿಎಂ ಸಭೆ ಮುಕ್ತಾಯ – ಮೌನಿಯಾದ ಯಡ್ಡಿ

ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮಾರ್ಚ್ 8 ರಂದು ಬಜೆಟ್ ಮಂಡಿಸಲಿದ್ದಾರೆ. ಈ ಬಜೆಟ್ ಗೆ ಸಂಬಂಧಿಸಿದಂತೆ ಆಡಳಿತ ಪಕ್ಷದ ಸ್ವಪಕ್ಷದ ಶಾಸಕರು, ವಿರೊಧ ಪಕ್ಷದ ನಾಯಕರುಗಳು ತಮ್ಮ ಭಾಗದ ಅಭಿವೃದ್ದಗೆ ಇಂತಿಷ್ಟು ಬಜೆಟ್ ನೀಡಬೇಕೆಂದು ಒತ್ತಡವನ್ನು ಹೇರುತ್ತಿದ್ದಾರೆ.

ಇನ್ನು ಪ್ರಮುಖವಾಗಿ ರಾಜ್ಯದ ಜನತೆ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಕೊರೋನಾ ದಿಂದಾಗಿ ಈಗಾಗಲೇ ಅನೇಕ ಸಂಕಷ್ಟಗಳನ್ನು ಎದುರಿಸಿದ್ದು, ಈ ಬಾರಿಯ ಬಜೆಟ್ ಆಶಾದಾಯಕವಾಗಿರಲಿದೆ ಎಂದು ನೀರಿಕ್ಷೆಗಳಿಂದ ಕಾಯುತ್ತಿದ್ದಾರೆ.  ಅದರಲ್ಲಿಯೂ ರೈತರು,  ಮಹಿಳೆಯವರು, ವಿದ್ಯಾರ್ಥಿಗಳು, ಯುವಜನತೆ, ಕೂಲಿಕಾರರು, ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಅನೇಕ ಜನತೆ ಬಜೆಟ್ ಗಾಗಿ ಉತ್ಸಾಹದಿಂದ ಕಾಯುತ್ತಿದ್ದಾರೆ.

ಇದನ್ನು ಓದಿ : ದಲಿತರ ಅಭಿವೃದ್ಧಿ ಹಣ ಬಳಕೆಗೆ ಸರಕಾರದ ನಿರ್ಲಕ್ಷ್ಯ

ಈ ಬಜೆಟ್ ಗೆ ಸಂಬಂಧಿಸಿದಂತೆ ಈಗಾಗಲೇ ಪೂರ್ವ ಭಾವಿ ಸಭೆ ನಡೆಸಿದ್ದು, ತಜ್ಞರು, ಚಿಂತಕರು, ಹೋರಾಟಗಾರರು, ವಿಶ್ಲೇಷಕರು ರಾಜ್ಯದ ಹಿತದೃಷ್ಟಿಯಿಂದ ಅನೇಕ ಸಲಹೆಗಳನ್ನು ನೀಡಿದ್ದಾರೆ.  ಆ ಎಲ್ಲಾ ಸಲಹೆಗಳು ಬಜೆಟ್ ನಲ್ಲಿ ಜಾರಿಯಾಗಬಹುದಾ ಎಂಬ ಕುತೂಹಲ ಜನರಲ್ಲಿದೆ.

ಇದನ್ನು ಓದಿ : ರಾಜ್ಯದ ಹಣಕಾಸು ಸ್ಥಿತಿಗತಿ: ಕೇಂದ್ರದಿಂದ ಅನ್ಯಾಯ

ಸ್ವ ಪಕ್ಷ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಾಲು ಸಾಲು ಸಭೆಗಳನ್ನು ಯಡಿಯೂರಪ್ಪ ನಡೆಸಿದ್ದರು. ಆ ವೇಳೆ ಶಾಸಕರು ತಮ್ಮ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನವನ್ನು ನೀಡುವಂತೆ ಬೇಡಿಕೆ ಇಟ್ಟಿದ್ದರು, ಆದರೆ ಕೊರೋನಾ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಹಣಕಾಸಿನ ಇತಿಮಿತಿಯೊಳಗೆ ರಾಜ್ಯ ಬಜೆಟ್ ಮಂಡನೆಯಾಗಲಿದೆ. ಹಾಗಾಗಿ ನೀವು ಕೇಳಿದಷ್ಟು ಅನುದಾನ ಕೊಡಲು ಸಾಧ್ಯವಿಲ್ಲ ಎಂದು ಖಡಕ್ಕಾಗಿ ಎಚ್ಚರಿಸಿದ್ದರು.

ರಾಜ್ಯ ಬಜೆಟ್ ಕುರಿತಾಗಿ ಆರ್ಥಿಕ ತಜ್ಙರು, ಚಿಂತಕರು, ಸ್ವಪಕ್ಷದ ಶಾಸಕರು, ವಿರೋಧ ಪಕ್ಷದ ನಾಯಕರುಗಳು  ಅನೇಕ ಸಲಹೆಗಳನ್ನು ಈಗಾಗಲೇ ನೀಡಿದ್ದಾರೆ.  ಈ ಬಾರಿಯ ಬಜೆಟ್ ಇವರೆಲ್ಲರೂ ನೀಡಿರುವ ಸಲಹೆಯಂತೆ ಇರುತ್ತದಾ, ಅಥವಾ ಪ್ರತಿಬಾರಿಯಂತೆ ಗಾಳಿ ತುಂಬಿದ ಬಲೂನಿನಂತಿರುತ್ತದಾ? ಮಾ.8 ರ ವರೆಗೆ ಕಾದು ನೋಡಬೇಕಿದೆ.

ದಲಿತರ ಅಭಿವೃದ್ಧಿ ಹಣ ಬಳಕೆಗೆ ಸರಕಾರದ ನಿರ್ಲಕ್ಷ್ಯ?

Donate Janashakthi Media

Leave a Reply

Your email address will not be published. Required fields are marked *