ಕನ್ನಡತನ ಒಪ್ಪಿಕೊಂಡಿರುವುದು ದೇಶವನ್ನು – ರಾಷ್ಟವನ್ನಲ್ಲ : ರಾಜೇಂದ್ರ ಚೆನ್ನಿ

ಬೆಂಗಳೂರು: ನಾವು ಮಾಡಬೇಕಾದ ಕೆಲಸ ಮುಂದಿನ ತಲೆಮಾರಿಗೆ ಸೌಹಾರ್ದತೆಯ ಚರಿತ್ರೆಯ ದೊಡ್ಡತನವನ್ನು ತಿಳಿಸುವ ಗಟ್ಟಿದನಿಯನ್ನು ಹೆಚ್ಚಿಸಬೇಕು. ಕನ್ನಡ ತನ ಒಪ್ಪಿಕೊಂಡಿರುವುದು ದೇಶವನ್ನು, ರಾಷ್ಟ್ರವನ್ನಲ್ಲ ಎಂದು ಹಿರಿಯ ಚಿಂತಕ, ವಿಮರ್ಶಕ ಡಾ. ರಾಜೇಂದ್ರ ಚೆನ್ನಿ ತಿಳಿಸಿದರು.

ಜನ ಸಾಹಿತ್ಯ ಸಮ್ಮೇಳನದಲ್ಲಿ ಹಮ್ಮಿಕೊಂಡಿರುವ ಸೌಹಾರ್ದತೆ ಮತ್ತು ಕನ್ನಡತನ ವಿಯಷದ ಕುರಿತು ತಮ್ಮ ವಿಚಾರಗಳನ್ನು ಮಂಡಿಸಿದ ಡಾ. ರಾಜೇಂದ್ರ ಚೆನ್ನಿ ಅವರು, ಈಗಿನ ಪ್ರಭುತ್ವ ಮತ್ತು ಅದರ ಹಿಂದಿನ ಸೈದ್ಧಾಂತಿಕತೆಯು ಹುಸಿ ರಾಷ್ಟ್ರೀಯತೆಯನ್ನು ಹೇರುತ್ತಿದೆ. ಇದು ಇಂದಿನ ಸಂದರ್ಭದಲ್ಲಿ ಅತ್ಯಂತ ಅಪಾಯಕಾರಿಯಾಗಿದ್ದು, ಅದನ್ನು ಪ್ರಬಲವಾಗಿ ಎದುರಿಸಲು ಇತಿಹಾಸ ರೂಪಿತ ಕನ್ನಡತನದ ಆಶಯಗಳನ್ನು ಅಳವಡಿಸುವುದು ಆಗಬೇಕಾಗಿದೆ.

ಬಹಳ ಹಿಂದಿನಿಂದಲೂ ಇತಿಹಾಸದ ಗಟ್ಟಿತನದ ಎಳೆಗಳು ಜೀವಂತವಾಗಿದೆ. ರಾಷ್ಟ್ರೀಯತೆಯ ಜೀವಗಳು ಇದನ್ನು ಸಂಪೂರ್ಣವಾಗಿ ನಾಶಕ್ಕೆ ಮುಂದಾಗಿದ್ದಾರೆ. ಇತಿಹಾಸ ಬಗೆಗಿನ ಭ್ರಮೆಗಳನ್ನಷ್ಟೇ ಇಂದು ಹರಡುತ್ತಿರುವುದು ಆಗುತ್ತಿವೆ. ಸದಾ ಚಲನಶೀಲವಾಗಿರುವ ಇತಿಹಾಸವನ್ನು ಸದಾ ನೋಡಿಕೊಂಡು ಬಂದಿದ್ದೇವೆ. ಅದನ್ನು ಹುಸಿ ಇತಿಹಾಸ ಮೂಲಕದ ಕೇವಲ ಆಕ್ರಮಣಶೀಲ ಹುಸಿತನದ ಆರೋಪಗಳನ್ನಷ್ಟೇ ಸೃಷ್ಟಿಸಲಾಗುತ್ತಿದೆ. ಅದಕ್ಕೆ ಮೌನ ಸಮ್ಮತಿಯೂ ನೀಡಲಾಗುತ್ತಿರುವುದು ನೋಡಬಹುದಾಗಿದೆ. ಇಂಥಹ ಸುಳ್ಳುತನವನ್ನು ಬಯಲಿಗೆಳೆಯುವುದು ಆಗಬೇಕಾಗಿದೆ ಎಂದು ತಿಳಿಸಿದರು.

ಕನ್ನಡತನದ ಸೌಹಾರ್ದತನ ಎಷ್ಟು ಚಾರಿತ್ರಿಕವಾಗಿದೆ ಎಂದರೆ, ಅದು ನೈಜವಾದ, ನಿಜವಾದ ಗಟ್ಟಿತನವಾಗಿದೆ. ಸದ್ಯ ನಾವು ಸಾಂಸ್ಕೃತಿಕ ಮರೆವಿನಲ್ಲಿ ಸಿಕ್ಕಿಹಾಕಿಕೊಂಡಿದ್ದೇವೆ. ಅದನ್ನು ತೊಡೆದು ಹಾಕುವ ಕೆಲಸಗಳು ಆಗಬೇಕಾಗಿದೆ ಎಂದು ತಿಳಿಸಿದರು.

ಇಂದಿಗೂ ಕರ್ನಾಟಕದ ಸಾವಿರಾರು ಹಳ್ಳಿಗಳಲ್ಲಿ ಮೊಹರಂ ಅನ್ನು ಆಚರಿಸಲಾಗುತ್ತದೆ. ಅದೂ ಒಬ್ಬನೇ ಒಬ್ಬ ಮುಸ್ಲಿಂ ವ್ಯಕ್ತಿ ಇಲ್ಲದ ಹಳ್ಳಿಗಳಲ್ಲೂ ಮೊಹರಾಂ  ಆಚರಿಸಲಾಗುತ್ತದೆ ಎಂದು ಹಿರಿಯ ಚಿಂತಕ ರಹಮತ್‌ ತರೀಕೆರೆ ಅವರು ಉಲ್ಲೇಖಿಸುತ್ತಾರೆ. ಇದು ಕನ್ನಡತನವಾಗಿದೆ. ಕನ್ನಡತನವು ಕಥೆ, ಪುರಾಣ, ಘಟನೆಗಳ ಮೂಲಕ ಉಳಿಸಿಕೊಂಡು ಬರಲಾಗಿದೆ.

ಡಾ. ರಾಜೇಂದ್ರ ಚೆನ್ನಿ ಅವರು ತಮ್ಮ ಭಾಷಣದಲ್ಲಿ ಕನ್ನಡತದ ವಿಚಾರಗಳು ಅತ್ಯಂತ ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಎಂದು ಕವಿರಾಜ ಮಾರ್ಗ ಕೃತಿಯ ಹುಟ್ಟು ಮತ್ತು ಅಂದಿನ ಸಾಮ್ರಾಜ್ಯದ ನಡೆಯ ಬಗ್ಗೆ ವಿವರಿಸಿದರು.

ಕನ್ನಡತನದ ಬೇರುಗಳನ್ನು ಇಂದು ಅಳವಡಿಸುವುದು ಅವಶ್ಯಕವಾಗಿದೆ ಮತ್ತು ಅದನ್ನು ಒತ್ತಾಯಿಸುವುದು ಆಗಬೇಕಾಗಿದೆ. ಆ ಮೂಲಕ ಸೌಹಾರ್ದತೆಯನ್ನು, ಶ್ರೇಷ್ಟ ಆರೋಗ್ಯಕರ ರಾಜಕೀಯವಾಗಿದೆ. ಅದುವೇ ಕನ್ನಡತನದ ರಾಜಕೀಯ ಎಂದು ತಿಳಿಸಿದರು.

Donate Janashakthi Media

One thought on “ಕನ್ನಡತನ ಒಪ್ಪಿಕೊಂಡಿರುವುದು ದೇಶವನ್ನು – ರಾಷ್ಟವನ್ನಲ್ಲ : ರಾಜೇಂದ್ರ ಚೆನ್ನಿ

  1. ಮಾನ್ಯರೇ, ನಮ್ಮ ಹೃನ್ಮನಗಳಲ್ಲಿ ದೇಶ ಬೇರೆ ರಾಷ್ಟ್ರವೇ ಬೇರೆಯಲ್ಲ. ಇದರಲ್ಲಿ ವಿಚಾರ ಭೇದ ಬೆಳೆಸುವ ಜ್ಞಾನ ಕೇವಲ ಬೂಸಾ. 70 ವರ್ಷಗಳ ನಂತರ ಹಿಂದೂ ಜನತೆ ಅಷ್ಟಿಷ್ಟು ಅಸ್ಮಿತೆಯನ್ನು ನೆನಪಿಸಿಕೊಳ್ಳುತ್ತಿದ್ದಾರೆ. ನಿಮ್ಮ ವಾದ ಕೇವಲ ಕುತರ್ಕ ಮತ್ತು ಅಪ್ರಸ್ತುತ. ಜಗತ್ತಿಗೆ ಜ್ಞಾನ ವೈರಾಗ್ಯ ಶಾಂತಿ ಸಹಬಾಳ್ವೆ ಬೋಧಿಸಿದ ಪರಂಪರೆಯ ಹಿಂದೂ ಬಹುಸಂಖ್ಯಾತರು ಕೇವಲ ಸಂಖ್ಯೆಗೆ ಅನ್ನುವಂತಿದ್ದು ಸಂಸ್ಕೃತಿ ಪೋಷಣೆ ಮಾಡಿದವರು ಯಾರೂ ಇಲ್ಲ. ಈಗ ನಿಮ್ಮಂತಹ ಆರಾಮ ಕುರ್ಚಿ ಬೋಧಕರು ಎದ್ದು ನಿಂತಿರುವುದು ಏಕೆ ತಿಳಿಯುತ್ತಿಲ್ಲ

Leave a Reply

Your email address will not be published. Required fields are marked *