ಅನುಪಮಾ, ಬಸವರಾಜ, ಮಂಜುನಾಥ್ ಗೆ ರಾಜಲಕ್ಷ್ಮಿ ಬರಗೂರು ಪುಸ್ತಕ ಪ್ರಶಸ್ತಿ

ಬೆಂಗಳೂರು : ಡಾ. ಬರಗೂರು ಪ್ರತಿಷ್ಠಾನವು ಕೊಡಮಾಡುವ 2020ನೇ ಸಾಲಿನ ರಾಜಲಕ್ಷ್ಮಿ ಬರಗೂರು ಪುಸ್ತಕ ಪ್ರಶಸ್ತಿಗೆ ಸಾಹಿತಿಗಳಾದ ಎಚ್.ಎಸ್. ಅನುಪಮಾ, ಡಾ. ಬಸವರಾಜ ಸಬರದ ಹಾಗೂ ಮಂಜುನಾಥ ಚಾಂದ್ ಅವರು ಭಾಜನರಾಗಿದ್ದಾರೆ.

ಅನುಪಮಾ ಅವರ ‘ಹೆಣ್ಣು ಹೆಜ್ಜೆ (ವಿಮರ್ಶೆ), ಸಬರದ ಅವರ ಬಯಲ ಬೆಳಕು (ವಿಚಾರ ಸಾಹಿತ್ಯ) ಹಾಗೂ ಚಾಂದ್ ಅವರ ‘ಕಾಡ ಸೆರಗಿನ ಸೂಡಿ (ಕಾದಂಬರಿ) ಪುಸ್ತಕಗಳು ಪ್ರಶಸ್ತಿಗೆ ಆಯ್ಕೆಯಾಗಿವೆ. ವಿಚಾರ ಸಾಹಿತ್ಯೆಕ್ಕೆ ಪ್ರಶಸ್ತಿ ಪಡೆದ “ಬಯಲು ಬೆಳಕು”  ಪುಸ್ತಕವು  ಕ್ರಿಯಾ ಪ್ರಕಾಶನ ದಿಂದ ಪ್ರಕಟವಾಗಿದೆ.

ಪ್ರಶಸ್ತಿಯು 10 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದ್ದು, ನಗರದ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಮಾರ್ಚ್ 12 ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇದೇ 12ರಂದು ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಪ್ರಶಸ್ತಿಯು ತಲಾ ₹10 ಸಾವಿರ ಮೊತ್ತ ಹಾಗೂ ಫಲಕವನ್ನು ಒಳಗೊಂಡಿದೆ.

ಬಯಲ ಬೆಳಕು – ವೈಚಾರಿಕ ಲೇಖನಗಳು ಪುಸ್ತಕದ ಕುರಿತು

ತಿಳುವಳಿಕೆಗಳನ್ನು ಪರಸ್ಪರ ಹೊಂದಿಸುವುದೇ ಧರ್ಮ, ತಿಳುವಳಿಕೆಗಳ ಹೊಂದಾಣಿಕೆಯನ್ನು ತಡೆಯುವುದು ಅಧರ್ಮ ಎಂಬ ಪಂಪನ ಮಾತಿನಂತೆ ಇಲ್ಲಿ ಅರಿವಿನ ಹೊಸಯಿಸುವಿಕೆ ಧಾರಾಳವಾಗಿ ಎದ್ದು ಕಾಣುತ್ತದೆ.

ವಿವಿಧ ಪತ್ರಿಕೆಗಳಿಗೆ, ವಿವಿಧ ಸಂದರ್ಭಗಳಲ್ಲಿ, ವಿವಿಧ ಓದುಗರಿಗಾಗಿ ಬರೆದ ಲೇಖನಗಳು.  ಜಾತಿ, ಧರ್ಮ, ಭಾಷೆ, ನೆಲ, ಜನಪದ, ಸಾಂಸ್ಕೃತಿಕ, ರಾಜಕೀಯ, ರಾಷ್ಟ್ರೀಯ, ಅಂತರ್ರಾಷ್ಟ್ರೀಯ, ಆರ್ಥಿಕ, ಸಾಮಾಜಿಕ, ಹೋರಾಟ, ಚಳುವಳಿ, ಬಂಡಾಯ ಹೀಗೆ ಹತ್ತು ಹಲವು ವಿಷಯ ವೈರುಧ್ಯಗಳನ್ನು ಹೊಂದಿರುವ ಲೇಖನಗಳ ಸಂಗ್ರಹವಿದು. ಡಾ. ಬಸವರಾಜ ಸಬರದ ಅವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (ಸಾಹಿತ್ಯ ಕ್ಷೇತ್ರ) ಸೇರಿದಂತೆ ಅನೇಕ ಪ್ರಶಸ್ತಿಗಳು ಇವರಿಗೆ ಲಭಿಸಿವೆ.

ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ

Donate Janashakthi Media

Leave a Reply

Your email address will not be published. Required fields are marked *