ರೈತರನ್ನು ಗೌರವದಿಂದ ನೋಡಿ, ಅವರ ಮಾತು ಆಲಿಸಿ: ಕೇಂದ್ರಕ್ಕೆ ದೇವೇಗೌಡ ಸಲಹೆ

ಬೆಂಗಳೂರು: ರೈತರನ್ನು ಗೌರವದಿಂದ ಕಾಣುವಂತೆಯು, ಅವರೊಂದಿಗೆ ಸಮಾಲೋಚನೆ ನಡೆಸುವಂತೆಯೂ ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ ಅವರು ಕೇಂದ್ರ ಸರ್ಕಾರಕ್ಕೆ ಗುರುವಾರ ಮನವಿ ಮಾಡಿದ್ದಾರೆ.

ಕೇಂದ್ರದ ಕೃಷಿ ಕಾನೂನು ವಿರೋಧಿಸಿ ಪ್ರತಿಭಟಿಸಲು ದೆಹಲಿಗೆ ತೆರಳುತ್ತಿದ್ದ ಪಂಜಾಬ್‌ ರೈತರು, ಹರಿಯಾಣ ಮತ್ತು ದೆಹಲಿ ಗಡಿಯಲ್ಲಿ ಪೊಲೀಸರ ಜಲಫಿರಂಗಿಗಳನ್ನು, ಅಶ್ರುವಾಯುವನ್ನು ಎದುರಿಸಬೇಕಾಯಿತು. ಈ ಸನ್ನಿವೇಶದ ಚಿತ್ರದ ಜೊತೆಗೆ ಟ್ವೀಟ್‌ ಮಾಡಿರುವ ಎಚ್‌.ಡಿ ದೇವೇಗೌಡ ಅವರು, ರೈತರ ಸಮಸ್ಯೆ ಆಲಿಸುವಂತೆ ಸಲಹೆ ನೀಡಿದ್ದಾರೆ.

‘ದೆಹಲಿ ರೈತ ಚಳವಳಿಯ ಚಿತ್ರಗಳನ್ನು ನೋಡಿ ಬೇಸರವಾಗಿದೆ. ರೈತರನ್ನು ಗೌರವದಿಂದ ಕಾಣುವಂತೆ ಕೇಂದ್ರ ಸರ್ಕಾರವನ್ನು ಕೋರುತ್ತೇನೆ. ದಯವಿಟ್ಟು ಅವರೊಂದಿಗೆ ಮಾತನಾಡಿ. ಅವರ ಮಾತುಗಳನ್ನು ಕೇಳಿ. ಪೊಲೀಸ್ ಪಡೆ ಸಮಸ್ಯೆಯನ್ನು ಪರಿಹರಿಸದು,’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕೃಷಿ ಉತ್ಪನ್ನಗಳ ಮಾರಾಟವನ್ನು ನಿಯಂತ್ರಿಸುವ ಹೊಸ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ರೈತರು ಒತ್ತಾಯಿಸುತ್ತಿದ್ದಾರೆ. ಕೇಂದ್ರದ ಕಾನೂನುಗಳು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ವ್ಯವಸ್ಥೆಯನ್ನು ಕಿತ್ತುಹಾಕಲು ಕಾರಣವಾಗುತ್ತವೆ ಎಂದು ರೈತರು ಪ್ರತಿಪಾದಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *