ರೈತರ ಪ್ರತಿಭಟನೆಗೆ ಎಡಪಕ್ಷಗಳ ಸಂಪೂರ್ಣ ಬೆಂಬಲ

  • ರೈತ, ಕೃಷಿಕೂಲಿಕಾರ ಮತ್ತು ಕಾರ್ಮಿಕ ಸಂಘಗಳು ನೀಡಿರುವ ಕರೆಗಳಿಗೆ ಬೆಂಬಲ ನೀಡಿ: ಘಟಕಗಳಿಗೆ ಕರೆ

ದಿಲ್ಲಿ: ಲಕ್ಷಾಂತರ ರೈತರು ದಿಲ್ಲಿಯ ಸುತ್ತಮುತ್ತ ನೆರೆದಿದ್ದಾರೆ, ಸಂಸತ್ತಿನಲ್ಲಿ ನಾಚಿಕೆಗೇಡಿ, ಪ್ರಜಾಪ್ರಭುತ್ವ-ವಿರೋಧಿ ರೀತಿಯಲ್ಲಿ ಪಾಸು ಮಾಡಿಸಿಕೊಂಡ ಮೂರು ಕೃಷಿ ಕಾಯ್ದೆಗಳನ್ನು, ಮತ್ತು ವಿದ್ಯುಚ್ಛಕ್ತಿ(ತಿದ್ದುಪಡಿ) ಮಸೂದೆಯನ್ನು ಹಿಂತೆಗೆದುಕೊಳ್ಳಬೇಕೆಂದು ಅವರು ಆಗ್ರಹಿಸುತ್ತಿದ್ದಾರೆ. ರೈತರ ಈ ಬಹುದೊಡ್ಡ ಪ್ರತಿಭಟನೆಗೆ  ಸಂಪೂರ್ಣ ಬೆಂಬಲ ಮತ್ತು ಸೌಹಾರ್ದವನ್ನು ಎಡಪಕ್ಷಗಳು-ಸಿಪಿಐ(ಎಂ), ಸಿಪಿಐ, ಸಿಪಿಐ(ಎಂಎಲ್), ಆರ್‍.ಎಸ್‍.ಪಿ. ಮತ್ತು ಫಾರ್ವಡ್‍‍ ಬ್ಲಾಕ್ ವ್ಯಕ್ತಪಡಿಸಿವೆ.

ತೀವ್ರ ದಮನವನ್ನು ಎದುರಿಸಿ, ಲಕ್ಷಾಂತರ ರೈತರು ದಿಲ್ಲಿ ತಲುಪಿದ್ದಾರೆ, ಕೊರೆಯುವ ಚಳಿಗಾಳಿಯ ನಡುವೆ ಇದ್ದಾರೆ. ಆದರೆ ಅವರಿಗೆ ಸಂಸತ್ತಿನ ಬಳಿ ಬಂದು ತಮ್ಮ ಬೇಡಿಕೆಗಳನ್ನು ಪ್ರಸ್ತುತ ಪಡಿಸಲು ಬಿಡುತ್ತಿಲ್ಲ. ಇದರ ವಿರುದ್ಧ ಜಂಟಿ ಪ್ರತಿಭಟನಾ, ಸೌಹಾರ್ದ ಕಾರ್ಯಾಚರಣೆಗಳನ್ನು ಸ್ಥಳೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ಬಹುವಿಧವಾಗಿ ಸಂಯೋಜಿಸಬೇಕು, ರೈತ ಸಂಘಟನೆಗಳು, ಕೃಷಿಕೂಲಿಕಾರರ ಸಂಘಟನೆಗಳು ಮತ್ತು ಕಾರ್ಮಿಕ ಸಂಘಗಳು ನೀಡಿರುವ ಕರೆಗಳಿಗೆ ಬೆಂಬಲ ನೀಡಬೇಕು ಎಂದು ಎಡಪಕ್ಷಗಳು ತಮ್ಮ ಘಟಕಗಳಿಗೆ ಕರೆ ನೀಡಿವೆ.

ಭಾರತೀಯ ಕೃಷಿಯನ್ನು, ನಮ್ಮ ಆಹಾರ ಭದ್ರತೆಯನ್ನು ಕಾಪಾಡಿಕೊಳ್ಳಲಿಕ್ಕಾಗಿ, ರೈತರಿಗೆ ಫಲದಾಯಕ ಪ್ರತಿಫಲಕ್ಕಾಗಿ, ಆಹಾರ ಅಭಾವಗಳನ್ನು ಮತ್ತು ಅಗತ್ಯ ಸರಕುಗಳ ಬೆಲೆಗಳ ಏರಿಕೆಯನ್ನು ತಡೆಯಲಿಕ್ಕಾಗಿ ಪ್ರಧಾನ ಮಂತ್ರಿಗಳು ಮತ್ತು ಕೇಂದ್ರ ಸರಕಾರ ಪ್ರತಿಭಟಿಸುತ್ತಿರುವ  ರೈತರ ಆಗ್ರಹಗಳನ್ನು ಒಪ್ಪಿಕೊಳ್ಳಬೇಕು ಎಂದು ಎಡಪಕ್ಷಗಳು ಆಗ್ರಹಿಸಿವೆ.

Donate Janashakthi Media

Leave a Reply

Your email address will not be published. Required fields are marked *