ನವದೆಹಲಿ: ಮೋದಿ ಸರಕಾರ ಈ ನಿರ್ಧಾರ ತೆಗೆದುಕೊಂಡಿರುವುದಕ್ಕೆ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಸಂಯುಕ್ತ ಕಿಸಾನ್ ಮೋರ್ಚಾವನ್ನು ಮತ್ತು ಲಕ್ಷಾಂತರ ರೈತರನ್ನು ಹಾರ್ದಿಕವಾಗಿ ಅಭಿನಂದಿಸಿದೆ.
ಇದು ಸಂಯುಕ್ತ ಕಿಸಾನ್ ಮೋರ್ಚಾದ ನೇತೃತ್ವದ ಐಕ್ಯ ರೈತ ಹೋರಾಟಕ್ಕೆ ಒಂದು ಭಾರೀ ವಿಜಯ ಎಂದು ಅದು ವರ್ಣಿಸಿದೆ. ಮೋದಿ ಸರಕಾರದ ಎಲ್ಲ ಹೊಲಸು ತಂತ್ರಗಳು ಸೋಲು ಅನುಭವಿಸಿದವು, ಸರ್ವಾಧಿಕಾರಶಾಹಿ ಆಳ್ವಿಕೆ ಕೊನೆಗೂ ಕರಾಳ ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಲೇ ಬೇಕಾಗಿ ಬಂದಿದೆ.
ಸರ್ವಾಧಿಕಾರ ನಡೆಯುವುದಿಲ್ಲ ಎಂಬ ಪಾಟವನ್ನು ರೈತರು ಮೋದಿ ಸರಕಾರಕ್ಕೆ ಕಲಿಸಿದ್ದಾರೆ ಎಂದು ಹೇಳಿರುವ ಸಿಪಿಐ(ಎಂ), ಕಿಸಾನ್ ಹುತಾತ್ಮರನ್ನು ನೆನಪಿಸಿಕೊಂಡು ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದೆ.